- ಸೆ. 1 ರಂದು ಜಾರಿಗೆ, ಆದ್ರೆ ಕಡ್ಡಾಯ ಇಲ್ಲ । 12 ದಿನ ಸಾಧಕ- ಬಾಧಕಗಳ ಪರಿಶೀಲನೆ । ಸುದ್ದಿಗೋಷ್ಠಿಯಲ್ಲಿ ಡಿಸಿ ಮೀನಾ ನಾಗರಾಜ್ ಮಾಹಿತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮುಳ್ಳಯ್ಯನಗಿರಿ ಪ್ರದೇಶದಲ್ಲಿ ವಾಹನಗಳ ದಟ್ಟಣೆ ನಿಯಂತ್ರಣ ಹಾಗೂ ಸುರಕ್ಷತೆ ದೃಷ್ಟಿಯಿಂದ ತೆಗೆದುಕೊಡಿರುವ ಕೆಲವು ಕ್ರಮಗಳಲ್ಲಿ ಪ್ರಥಮ ಹಂತದಲ್ಲಿ ಸೆ. 1ರಿಂದ ಪ್ರವಾಸಿಗರಿಗೆ ಆನ್ ಲೈನ್‌ನಲ್ಲಿ ಪ್ರವೇಶ ದರ ಪಾವತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ. 1ರಂದು ಆನ್ ಲೈನ್ ಪೇಮೆಂಟ್ ಕಡ್ಡಾಯವಲ್ಲ. ಸಾಧಕ - ಬಾಧಕ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕಡ್ಡಾಯ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
2019ರ ನಂತರದಲ್ಲಿ ಜಿಲ್ಲೆಯಲ್ಲಿ ವಾಡಿಕೆಗೂ ಮೀರಿ ಭಾರೀ ಮಳೆಯಾಗುತ್ತಿದೆ. ಈ ವರ್ಷದಲ್ಲೂ ಮಳೆ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷದಲ್ಲಿ ಗಿರಿ ಭಾಗದ 20 ಕಡೆಗಳಲ್ಲಿ ಉಂಟಾಗಿದ್ದ ಭೂ ಕುಸಿತ ಈ ವರ್ಷ 9 ಕಡೆಗಳಲ್ಲಿ ಭೂಮಿ ಕುಸಿದಿದೆ ಎಂದರು.ಈಗಾಗಲೇ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರಿಂದ ಗಿರಿ ಪ್ರದೇಶದ ಮಣ್ಣು ಪರೀಕ್ಷೆ ಮಾಡಿಸಲಾಗಿದೆ. ತಜ್ಞರ ಪ್ರಕಾರ ಗಿರಿ ಪ್ರದೇಶದಲ್ಲಿ ನೀರು ಇಂಗುವಿಕೆ ಸಾಮರ್ಥ್ಯ ಕಡಿಮೆ ಆಗುತ್ತಿದೆ. ಈ ಕಾರಣಕ್ಕೆ ಮಣ್ಣು ಕುಸಿಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ಮರ ಉರುಳಿದರೆ ದೊಡ್ಡ ಪ್ರಮಾಣದ ಮಣ್ಣು ಗುಡ್ಡದಿಂದ ಜಾರುತ್ತಿದೆ ಎಂದು ಹೇಳಿದರು.
ಭೂ ಕುಸಿತವಾಗುವ ಕಡೆಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಬೇಕಾಗಬಹುದಾದ ವೆಚ್ಚದ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಒಂದೆಡೆ ಮಳೆ ಜಾಸ್ತಿ, ಇನ್ನೊಂದೆಡೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಗಿರಿ ಪ್ರದೇಶದಲ್ಲಿ ವಾರದ ಕೊನೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಇದೇ ಆಗಸ್ಟ್ ತಿಂಗಳಲ್ಲಿ ವಾರದ ಕೊನೆಯಲ್ಲಿ 2900 ವಾಹನಗಳು ಬಂದು ಹೋಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಗಿರಿ ಪ್ರದೇಶದಲ್ಲಿ ಇನ್ನಷ್ಟು ಸಮಸ್ಯೆ ಎದುರಾಗಲಿವೆ ಎಂದು ವಿವರಿಸಿದರು.ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಪ್ರವಾಸಿಗರಿಗೆ ಆನ್ ಲೈನ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. 10 ದಿನಗಳ ಕಾಲ ಸಾಧಕ, ಬಾಧಕ ನೋಡಲಾಗುವುದು. ನಂತರ ಸೆ. 12 ರಂದು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಿ ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಈ ನೂತನ ಪದ್ಧತಿಯಿಂದ ಏನೇ ಸಮಸ್ಯೆ ಎದುರಾದರೂ ಮುಕ್ತವಾಗಿ ತಿಳಿಸಬೇಕು ಎಂದು ಹೇಳಿದರು.ಗಿರಿ ಸ್ವಚ್ಛತಾ ಟಾಸ್ಕ್ ಪೋರ್ಸ್:
ಜಿಲ್ಲೆಯ ಗಿರಿ ಪ್ರದೇಶದಲ್ಲಿ ಬೀಳುವ ಕಸ ಸಂಗ್ರಹ ಹಾಗೂ ಪ್ರವಾಸಿಗರಿಗೆ ಬೇಕಾದ ಮೂಲಭೂತ ಸವಲತ್ತು ನೀಡಲು "ಗಿರಿ ಸ್ವಚ್ಛತಾ ಟಾಸ್ಕ್ ಪೋರ್ಸ್ " ರಚನೆಗೆ ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಗೌರವ್ ಕುಮಾರ್ ಶೆಟ್ಟಿ ಹೇಳಿದರು.ವಾರದ ಕೊನೆಯಲ್ಲಿ ಪ್ರವಾಸಿಗರು ಬಂದು ಹೋಗುವ ಸಂದರ್ಭದಲ್ಲಿ ಗಿರಿ ಪ್ರದೇಶದಲ್ಲಿ ಸಂಗ್ರಹ ವಾಗುವ ಕಸವನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಜಾಗ ನೋಡುತ್ತಿದ್ದೇವೆ. ಈ ಕೆಲಸಕ್ಕೆ ಸ್ವಸಹಾಯ ಸಂಘಗಳನ್ನು ಬಳಕೆ ಮಾಡಲಾಗುವುದು ಎಂದರು.
ಕಸ ಎಲ್ಲೆಂದರಲ್ಲಿ ಬೇಸಾಡುವುದನ್ನು ತಡೆಯಲು ಆಯ್ದ ಸ್ಥಳಗಳಲ್ಲಿ ಡಸ್ಟ್ ಬೀನ್ ಹಾಕಲಾಗುವುದು. ಕುಡಿಯುವ ನೀರಿನ ಬಾಟಲ್‌ಗಳನ್ನು ಚೆಕ್ ಪೋಸ್ಟ್‌ನಲ್ಲಿಯೇ ತಡೆಯಲಾಗುತ್ತಿದೆ. 5 ಲೀಟರ್ ನೀರನ್ನು ತೆಗೆದುಕೊಂಡು ಹೋಗಲು ಕೆಲವು ಪ್ರವಾಸಿಗರಿಗೆ ಆಗುತ್ತಿಲ್ಲ. ಈ ಸಮಸ್ಯೆ ಗಮನಕ್ಕೆ ಬಂದಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಗಿರಿಯಲ್ಲಿ ಕುಡಿಯುವ ನೀರಿನ ಘಟಕ ತೆರೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು.-- ಬಾಕ್ಸ್ --ಮುಖ್ಯಾಂಶಗಳು- ಮುಳ್ಳಯ್ಯನಗಿರಿಗೆ ತೆರಳುವ ಪ್ರವಾಸಿಗರು ಸೆ. 1 ರಿಂದ ಆನ್ ಲೈನ್ ಮೂಲಕ ಪ್ರವೇಶ ದರ ಪಾವತಿಸಬೇಕು- 10 ದಿನಗಳ ಕಾಲ ಸಾಧಕ, ಬಾಧಕಗಳ ಕುರಿತು ಪರಿಶೀಲನೆ, ಸಲಹೆ ಸ್ವೀಕಾರ
- ಪ್ರವೇಶ ದರ ಪಾವತಿಗೆ ಆನ್ ಲೈನ್ ಕಾಯುವಂತಿಲ್ಲ, ಬೆಂಗಳೂರಿನಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗಲು ಕೋಟೆ ಕೆರೆ ಬಳಿ ಕ್ಯೂಆರ್ ಕೋಡ್ ಅಳವಡಿಕೆ. ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳು, ಹೋಟೆಲ್, ಲಾಡ್ಜ್ ಸ್ಕ್ಯಾನರ್ ಅಳವಡಿಸಲಾಗುವುದು. ಪೇಮೆಂಟ್ ಆಗಿರುವ ಮೇಸೇಜ್ ಚೆಕ್ ಪೋಸ್ಟ್‌ನಲ್ಲಿ ತೋರಿಸಬೇಕು.- ಪ್ರಯಾಣದ ಒತ್ತಡ ಇದ್ದರೆ ಆನ್ ಲೈನ್ ಪೇಮೆಂಟ್ ಮಾಡದೆ ಇದ್ದವರು, ಚೆಕ್ ಪೋಸ್ಟ್ ಬಳಿ ಆನ್ ಲೈನ್ ಪೇಮೆಂಟ್ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.
- ಒಂದು ಸ್ಲ್ಯಾಟ್‌ಗೆ 600 ವಾಹನಗಳು ಕಡ್ಡಾಯ ಇಲ್ಲ. ಸ್ಥಳೀಯರ ವಾಹನಗಳು ಚಲಿಸಲು ಅಡ್ಡಿ ಇಲ್ಲ.- ಗಿರಿ ಪ್ರದೇಶದಲ್ಲಿ ಜನ ವಸತಿ ಪ್ರದೇಶದ ಜನರಿಗೆ ಪಾಸ್ ನೀಡಲಾಗುವುದು.
- ಪಾಸ್ ಪಡೆಯಲು ಚಿಕ್ಕಮಗಳೂರಿಗೆ ಬರಬೇಕಾಗಿಲ್ಲ, ಗ್ರಾಪಂ ಮಟ್ಟದಲ್ಲೂ ಪಾಸ್ ವಿತರಣೆ ಮಾಡಲು ಪರಿಶೀಲನೆ.---ಯಾವ ವಾಹನಕ್ಕೆ ಎಷ್ಟು ದರ ನಿಗಧಿ- ಬೈಕಿಗೆ 50 ರು.
- ಕಾರುಗಳಿಗೆ 100 ರು.- ತೂಫಾನ್ (ಕ್ರೂಸರ್)ಗೆ 150 ರು.
- ಟೆಂಪೋ ಟ್ರಾವೆಲರ್‌ಗೆ 200 ರು.---- ಬಾಕ್ಸ್ ----ವಾರದ ಕೊನೆಯಲ್ಲಿ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರು ವುದರಿಂದ ಆ ಪ್ರದೇಶದಲ್ಲಿ ವಾಹನಗಳಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಳ್ಳಯ್ಯನಗಿರಿ ಒಂದೇ ಪ್ರವಾಸಿ ತಾಣವಲ್ಲ. ಕೆಮ್ಮಣ್ಣಗುಂಡಿ, ದೇವರಮನೆಯಂತಹ ಅತ್ಯಂತ ಸುಂದರ ಪ್ರವಾಸಿ ತಾಣಗಳಿವೆ. ಪ್ರವಾಸಿಗರು ಅಲ್ಲಿಗೂ ಭೇಟಿ ನೀಡಬೇಕು. ಆ ಮೂಲಕ ಗಿರಿ ಪ್ರದೇಶದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಸಹಕರಿಸಬೇಕು. - ಮೀನಾ ನಾಗರಾಜ್ಜಿಲ್ಲಾಧಿಕಾರಿ, ಚಿಕ್ಕಮಗಳೂರು, 30 ಕೆಸಿಕೆಎಂ 4
-30 ಕೆಸಿಕೆಎಂ 3ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿಯ ವಿಹಂಗಮ ನೋಟ.