ಮೀಸಲಾತಿಯಿಂದ ಬೆಳೆದವರೇ ಮತ್ತೇ ಮೀಸಲಾತಿ ಪಡೆಯುತ್ತಾರೆ

KannadaprabhaNewsNetwork |  
Published : Apr 15, 2025, 12:50 AM IST
ಗುಬ್ಬಿಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟ ನಡೆಸಿದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್. | Kannada Prabha

ಸಾರಾಂಶ

ಸಂವಿಧಾನ ಬದ್ಧ ಮೀಸಲಾತಿ ಪಡೆದು ಸಮಾಜದಲ್ಲಿ ಬೆಳೆದು ಗುರುತಿಸಿಕೊಂಡವರೇ ಮರಳಿ ಮೀಸಲಾತಿ ಪಡೆಯುತ್ತಿರುವುದು ಸೋಜಿಗದ ಸಂಗತಿ. ಶೋಷಿತ ವರ್ಗ ಹಳ್ಳಿಗಾಡಿನಲ್ಲಿ ಬಡತನದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಇಂತಹ ಜನರ ಬಾಳಿಗೆ ಬೆಳಕು ನೀಡುವ ಚಿಂತನೆ ನಡೆಸಿ ಮೀಸಲಾತಿ ದೊರೆಕಿಸಿಕೊಟ್ಟರೆ ಅಂಬೇಡ್ಕರ್ ಜಯಂತಿ ಅರ್ಥ ಸಿಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸಂವಿಧಾನ ಬದ್ಧ ಮೀಸಲಾತಿ ಪಡೆದು ಸಮಾಜದಲ್ಲಿ ಬೆಳೆದು ಗುರುತಿಸಿಕೊಂಡವರೇ ಮರಳಿ ಮೀಸಲಾತಿ ಪಡೆಯುತ್ತಿರುವುದು ಸೋಜಿಗದ ಸಂಗತಿ. ಶೋಷಿತ ವರ್ಗ ಹಳ್ಳಿಗಾಡಿನಲ್ಲಿ ಬಡತನದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಇಂತಹ ಜನರ ಬಾಳಿಗೆ ಬೆಳಕು ನೀಡುವ ಚಿಂತನೆ ನಡೆಸಿ ಮೀಸಲಾತಿ ದೊರೆಕಿಸಿಕೊಟ್ಟರೆ ಅಂಬೇಡ್ಕರ್ ಜಯಂತಿ ಅರ್ಥ ಸಿಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟ ನಡೆಸಿದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಮಟೆ ಬಾರಿಸಿ ಕುಣಿದು ಕುಪ್ಪಳಿಸುವ ಬದಲು ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಒದಗಿಸುವ ಚಿಂತನೆ ನಡೆಸಬೇಕು. ಅಂಬೇಡ್ಕರ್ ಕನಸು ಸಾಕರಗೊಳಿಸಲು ಶಿಕ್ಷಣ ಸಂಘಟನೆ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.ಸಮಾನತೆ ಸಾರುವ ಕೆಲಸ 12 ನೇ ಶತಮಾನದಲ್ಲಿ ಬಸವಣ್ಣ ಅವರು ಕ್ರಾಂತಿ ನಡೆಸಿದ್ದರು. ಅಂಬೇಡ್ಕರ್ ಅವರು ಶಿಕ್ಷಣ ಮೂಲಕ ಸಂವಿಧಾನ ರಚಿಸಿ ಶೋಷಿತರು, ತುಳಿತಕ್ಕೆ ಒಳಗಾದವರ ಪರ ನಿಂತು ಕಾನೂನು ಮೂಲಕ ಅನುಕೂಲ ಮಾಡಿಕೊಟ್ಟರು. ಆದರೆ ಈಗ ಓದು ಬರಹ ಮಾಡದೆ ಕೇವಲ ಸರ್ಕಾರ ನೋಡುವ ಮೀಸಲಾತಿ ಸವಲತ್ತುಗಳತ್ತ ನೋಡುವುದು ಪದ್ಧತಿಯಾಗಿದೆ. ಕೇವಲ ಭಾಷಣ ಮೂಲಕ ಸಮಾನತೆ ಸಾರದೇ ವಾಸ್ತವ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು ಅಂಬೇಡ್ಕರ್ ಸಾಧನೆಗೆ ಕಾರಣವಾಗಿದ್ದು ಅಂದಿನ ಶೋಷಣೆ. ಅಸ್ಪೃಶ್ಯತೆ ಇವೆಲ್ಲಾ ನೋವು ಅನುಭವಿಸಿ ಬೀದಿಯಲ್ಲಿ ಓದಿ ಶಿಕ್ಷಣ ಪಡೆದರು. ಅದರ ಪರಿಣಾಮ ಸಂವಿಧಾನ ರಚನೆ. ಎಲ್ಲಾ ಜಾತಿ ವರ್ಗಕ್ಕೂ ಸಮಾನತೆಯ ಕಾನೂನು ಕ್ರಮ ರಚಿಸಿ ವಿಶ್ವಖ್ಯಾತಿ ಗಳಿಸಿದೆ ಎಂದರು.ಉಪನ್ಯಾಸಕ ಡಾ.ಟಿ.ಎಚ್.ಮಂಜುನಾಥ್ ಮಾತನಾಡಿ 51 ಸಾವಿರ ಪುಸ್ತಕವನ್ನು ಅಧ್ಯಯನ ಮಾಡಿ ಸಂವಿಧಾನ ರಚಿಸಿದ ಅಂಬೇಡ್ಕರ್ ಎಲ್ಲಾ ಅವಮಾನಗಳ ಮಧ್ಯೆ ಶಿಕ್ಷಣ ಪಡೆಯುವ ಹೋರಾಟದಲ್ಲಿ ಗೆಲುವು ಸಾಧಿಸಿದರು. 52 ಡಿಗ್ರಿ ಪಡೆದರು. ವಿದೇಶೀ ಪ್ರಜಾತಂತ್ರ ಅಧ್ಯಯನ ಮಾಡಿ ವಿಶ್ವ ಒಪ್ಪುವ ಸಂವಿಧಾನ ಭಾರತಕ್ಕೆ ರಚಿಸಿದರು ಎಂದರು.ತಹಸೀಲ್ದಾರ್ ಬಿ.ಆರತಿ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಶಶಿಕುಮಾರ್, ಮಹಮದ್ ಸಾದಿಕ್, ಶ್ವೇತಾ, ತಾಪಂ ಇಓ ಶಿವಪ್ರಕಾಶ್, ವೀಣಾ, ಮಂಜುಳಾದೇವಿ, ಜಿ ಜಿ.ಎಚ್.ಜಗನ್ನಾಥ್, ಪಾಂಡುರಂಗ, ಚೇಳೂರು ಶಿವನಂಜಪ್ಪ, ಈರಣ್ಣ, ನಿಟ್ಟೂರು ರಂಗಸ್ವಾಮಿ, ಕಡಬ ಶಂಕರ್, ಗುರುಪ್ರಸಾದ್, ನಟರಾಜ್, ಮಧುಸೂದನ್, ಯತೀಶ್, ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ