ಊಳುವವನೇ ಒಡೆಯ ಜಾರಿಗೊಳಿಸಿದ್ದು ಕಾಂಗ್ರೆಸ್: ಭೀಮನಾಯ್ಕ

KannadaprabhaNewsNetwork |  
Published : May 06, 2024, 12:30 AM IST
ಸ | Kannada Prabha

ಸಾರಾಂಶ

ಮಾಧ್ಯಮಗಳಲ್ಲಿ ಏನೂ ಮಾಡದೆ ಇರುವ ಮೋದಿಯವರನ್ನು ಬಿಂಬಿಸುತ್ತಾರೆ. ಆದರೆ, ರಾಹುಲ್‌ಗಾಂಧಿ ದೇಶದ ಜನತೆಯ ಒಳತಿಗಾಗಿ ಪಾದಯಾತ್ರೆ ಮಾಡಿದರು ಸುದ್ದಿಯಾಗಲಿಲ್ಲ.

ಹಗರಿಬೊಮ್ಮನಹಳ್ಳಿ: ದೇಶದಲ್ಲಿ ಭೂಮಿಯನ್ನು ಊಳುವವನೇ ಒಡೆಯ ಯೋಜನೆ ಜಾರಿಗೊಳಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ತಿಳಿಸಿದರು.ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಕ್ಷೇತ್ರ ವ್ಯಾಪ್ತಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಮಾಧ್ಯಮಗಳಲ್ಲಿ ಏನೂ ಮಾಡದೆ ಇರುವ ಮೋದಿಯವರನ್ನು ಬಿಂಬಿಸುತ್ತಾರೆ. ಆದರೆ, ರಾಹುಲ್‌ಗಾಂಧಿ ದೇಶದ ಜನತೆಯ ಒಳತಿಗಾಗಿ ಪಾದಯಾತ್ರೆ ಮಾಡಿದರು ಸುದ್ದಿಯಾಗಲಿಲ್ಲ. ಕಳೆದ ಅವಧಿಗೆ ಆಯ್ಕೆಯಾದ ಬಿಜೆಪಿಯ ೨೫ಸಂಸದರು, ಮಲ್ಲಿಕಾರ್ಜುನ ಖರ್ಗೆ ಅವರ ಲೋಕಸಭೆ ಕ್ಷೇತ್ರ ಅಭಿವೃಧ್ದಿಯನ್ನು ನೋಡಿ ತಿಳಿದುಕೊಳ್ಳಬೇಕಿದೆ. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಬರಪರಿಹಾರ ನೀಡುವ ಕೇಂದ್ರ ಸರಕಾರಕ್ಕೆ ರೈತಪರ ಕಾಳಜಿ ಇಲ್ಲ. ಬಂಡವಾಳಶಾಹಿಗಳ ಸಾಲಮನ್ನಾ, ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಲಾಠಿ ಚಾರ್ಚ್, ಬಿಜೆಪಿ ರೈತ ವಿರೋಧಿ ನೀತಿಗೆ ಸಾಕ್ಷಿಯಾಗಿವೆ. ಈ.ತುಕರಾಂ ಗೆಲುವು ನಿಶ್ಚಿತ, ಗೆದ್ದ ನಂತರ ಕೂಡಲೇ ಕ್ಷೇತ್ರದ ಎಲ್ಲ ಕೆರೆಗಳಿಗೆ ತುಂಗಭದ್ರಾ ನದಿ ನೀರುಣಿಸಲು ಅನುದಾನ ಪಡೆಯಲಾಗುವುದು. ಬಿಜೆಪಿಯವರು ಜಾತಿಗಳ ನಡುವೆ ಸಂಘರ್ಷಯುಂಟು ಮಾಡಿ ಮತಸೆಳೆಯುವ ಪ್ರಯತ್ನ ಸಂಪೂರ್ಣ ವಿಫಲವಾಗಲಿದೆ ಎಂದರು. ಮಾಜಿ ಸಚಿವ ಎನ್.ಎಂ.ನಬಿ ಮಾತನಾಡಿ, ದೇಶದ ಪ್ರಧಾನಿ ದ್ವೇಷದ ಭಾಷಣ ಮಾಡುತ್ತಾ, ಜನರನ್ನು ಕೆರಳಿಸುತ್ತಿದ್ದಾರೆ. ಸಮುದಾಯಗಳ ನಡುವೆ ಬೆಂಕಿ ಹಚ್ಚಿ ಮತ ಕೇಳುವ ಬಿಜೆಪಿಯಿಂದ ಈ ದೇಶಕ್ಕೆ ಗಂಡಾಂತರ ಕಾದಿದೆ. ಜಿಲ್ಲೆಯ ಜನರ ಸುಗಮಕ್ಕೆ ತುಕಾರಾಂ ಆಯ್ಕೆ ಸೂಕ್ತವಾಗಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸಾಹಿರಾಬಾನು ಮಾತನಾಡಿ, ಶ್ರೀರಾಮುಲು ಈಗ ಮತ ಕೇಳಲು ಬಂದವರು, ಮತ್ತೆ ೫ವರ್ಷಕ್ಕೆ ಇಲ್ಲಿಗೆ ಕಾಲಿಡುತ್ತಾರೆ. ಮಾಜಿ ಸಿಎಂ ಕುಮಾರಸ್ವಾಮಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಮೊದಲು ತಮ್ಮ ಕುಟುಂಬದಲ್ಲಿ ದಾರಿ ತಪ್ಪಿದವರನ್ನು ಸರಿಪಡಿಸಬೇಕು. ಹಗರಿಬೊಮ್ಮನಹಳ್ಳಿಗೆ ರಾತ್ರೋರಾತ್ರಿ ಬಂದು ಹೋಗಿದ್ದಾರೆ, ಬರುವ ವಿಷಯ ಮೊದಲೇ ಗೊತ್ತಿದ್ದರೆ ಅವರು ಇಲ್ಲಿಗೆ ಕಾಲಿಡಲು ಬಿಡುತ್ತಿರಲಿಲ್ಲ ಎಂದು ಹರಿಹಾಯ್ದರು.ಕಾಂಗ್ರೆಸ್ ಬ್ಲಾಕ್ ಮಹಿಳಾ ಘಟದ ಅಧ್ಯಕ್ಷೆ ಯಶೋದಾ ಮಂಜುನಾಥ ಮಾತನಾಡಿ, ನಟಿ ಶೃತಿ ಇಬ್ಬರು ಮೂವರನ್ನು ಮದುವೆಯಾಗಿ ದಾರಿ ತಪ್ಪಿದ್ದಾಳೆ, ರಾಜ್ಯದ ಮಹಿಳೆಯರಲ್ಲ ಎಂದು ಶೃತಿ ವಿರುದ್ದ ಗುಡುಗಿದರು. ಅಭ್ಯರ್ಥಿ ಈ.ತುಕಾರಾಂ ಪತ್ನಿ ಅನ್ನಪೂರ್ಣ, ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ ಮಾತನಾಡಿದರು. ಜಿ.ಪಂ.ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ್, ತಾ.ಪಂ.ಮಾಜಿ ಉಪಾಧ್ಯಕ್ಷೆ ನಾಗರತ್ನ ವೆಂಕಟೇಶ, ಮಾಜಿ ಸದಸ್ಯ ದೇವೇಂದ್ರಪ್ಪ, ಮುಖಂಡರಾದ ನೂರ್ ಅಹಮದ್, ತಿಪ್ಪೇಸ್ವಾಮಿ ವೆಂಕಟೇಶ, ಪುರಸಭೆ ಸದಸ್ಯರಾದ ಮರಿರಾಮಪ್ಪ, ಎಲ್.ಗಣೇಶ, ಮಂಜುಳಾ ಕೃಷ್ಣನಾಯ್ಕ ಇತರರಿದ್ದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಕೀಲ ಕೋರಿ ಗೋಣಿಬಸಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ನಂದಿಬಂಡಿ ಸೋಮಣ್ಣ, ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಗುರುಬಸವರಾಜ ಸೊನ್ನದ್, ಹೆಗ್ಡಾಳ್ ಪರುಶುರಾಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದಿಂದ ಯಲ್ಲಮ್ಮನಗುಡ್ಡಕ್ಕೆ ₹118 ಅನುದಾನ
ಮಡಿಕೇರಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮ