ಮುಕ್ತ ಬ್ಯಾಡ್ಮಿಂಟನ್‌ ಸ್ಪರ್ಧೆ: ತರುಣಗೆ ಸಿಂಗಲ್ಸ್‌ ಪ್ರಶಸ್ತಿ

KannadaprabhaNewsNetwork |  
Published : Aug 27, 2024, 01:35 AM IST
26ಡಿಡಬ್ಲೂಡಿ10ಧಾರವಾಡ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಡಿಬಿಎ) ಆಶ್ರಯದಲ್ಲಿ ಧಾರವಾಡದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  | Kannada Prabha

ಸಾರಾಂಶ

ಭಾನುವಾರ ರಾತ್ರಿ ನಡೆದ ತುರುಸಿನ ಫೈನಲ್‌ನಲ್ಲಿ ತರುಣ ಮೊರಬ ಪುಣೆಯ ವಸೀಮ್ ಶೇಖ್ ಅವರನ್ನು ಎರಡು ನೇರ ಆಟಗಳಲ್ಲಿ 26-24, 21-14 ಪಾಯಿಂಟ್‌ಗಳಿಂದ ಸೋಲಿಸಿ ವಿಜೇತರಾದರು.

ಧಾರವಾಡ:

ಧಾರವಾಡ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಡಿಬಿಎ) ಆಶ್ರಯದಲ್ಲಿ ಇಲ್ಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರತಿಭಾನ್ವಿತ ಆಟಗಾರ ತರುಣ ಬಸವರಾಜ ಮೊರಬ ಪುರುಷರ ಸಿಂಗಲ್ಸ್ ಪ್ರಶಸ್ತಿ ಪಡೆದರು.

ಭಾನುವಾರ ರಾತ್ರಿ ನಡೆದ ತುರುಸಿನ ಫೈನಲ್‌ನಲ್ಲಿ ತರುಣ ಮೊರಬ ಪುಣೆಯ ವಸೀಮ್ ಶೇಖ್ ಅವರನ್ನು ಎರಡು ನೇರ ಆಟಗಳಲ್ಲಿ 26-24, 21-14 ಪಾಯಿಂಟ್‌ಗಳಿಂದ ಸೋಲಿಸಿ ವಿಜೇತರಾದರು. ಬೆಂಗಳೂರಿನ ಸಹಸ್ರ ಹಾಗೂ ಆದರ್ಶ ಅವರ ಜೋಡಿ ಪುಣೆಯ ವಸೀಮ್ ಹಾಗೂ ಖಾನ್ ಅವರ ಜೋಡಿಯನ್ನು ಸೋಲಿಸಿ ಪುರುಷರ ಡಬಲ್ಸ್ ಪ್ರಶಸ್ತಿ ಹಾಗೂ ₹ 20 ಸಾವಿರ ನಗದು ಬಹುಮಾನ ತನ್ನದಾಗಿಸಿಕೊಂಡಿತು. 45 ವರ್ಷಕ್ಕಿಂತ ಕಿರಿಯರ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಬೆಂಗಳೂರಿನ ಅಮಲ್ ದೇವ್ ಹಾಗೂ ಕಿರಣ ಅವರ ಜೋಡಿ ಧಾರವಾಡದ ಪ್ರಭುರಾಜ ಹಾಗೂ ಬಳ್ಳಾರಿಯ ಕೃಷ್ಣ ಅವರ ಜೋಡಿ ಸೋಲಿಸಿ ಪ್ರಶಸ್ತಿ ಜಯಿಸಿದರೆ, 75 ವರ್ಷಕ್ಕಿಂತ ಹಿರಿಯ ಪುರುಷರ ಜಂಬಲ್ ಡಬಲ್ಸ್ ಫೈನಲ್‌ನಲ್ಲಿ ಬೆಂಗಳೂರಿನ ನವೀನ ಹಾಗೂ ಉಮೇಶ ಅವರ ಜೋಡಿ ಮೈಸೂರಿನ ಮಧುಸೂಧನ ಹಾಗೂ ದರ್ಶನ್ ಜೋಡಿಯನ್ನು ಪರಾಭವಗೊಳಿಸಿತು.

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಅಭಿಷೇಕ ಯಲಿಗಾರ, ಅನಿತಾ ಶಾನಭಾಗ, ಜಗೀಶ ಕೂಟೂರು, ರೋಹಿತ್ ಪಾಟೀಲ, ರಾಜು ಕೆ.ಎಂ., ರವಿ ಶಿವಯ್ಯನಮಠ, ಗೋಪಾಲಕೃಷ್ಣ, ಪ್ರಕಾಶ ಹೊಂಡೆದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!