ಜೂ.29ರಂದು ಮುಕ್ತ ಚದುರಂಗ ಸ್ಪರ್ಧೆ: ಸಿ.ಎಲ್‌.ಶಿವಕುಮಾರ್‌

KannadaprabhaNewsNetwork |  
Published : Jun 22, 2025, 01:18 AM IST
21ಕೆಎಂಎನ್‌ಡಿ-7ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆ.ಹೊಂಬೇಗೌಡ ರಿಕ್ರಿಯೇಷನ್‌ ಕ್ಲಬ್‌ ಅಧ್ಯಕ್ಷ ಸಿ.ಎಲ್‌.ಶಿವಕುಮಾರ್‌ ಮಾತನಾಡಿದರು.  | Kannada Prabha

ಸಾರಾಂಶ

ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ೭,೯,೧೧,೧೩ ಮತ್ತು ೧೫ ವರ್ಷದೊಳಗಿನವರ ವಯೋಮಾನಕ್ಕೆ ಅನುಗುಣವಾಗಿ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಿಭಾಗಕ್ಕೂ ೫ ಟ್ರೋಫಿಗಳು ಸೇರಿದಂತೆ ೧೦೫ ಬಹುಮಾನ ನೀಡಲಾಗುವುದು. ರಾಜ್ಯದ ವಿವಿಧೆಡೆಗಳಿಂದ ಸುಮಾರು ೧೫೦ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದಿ ವಿಜರ್ಡ್ ಗುರು ಟ್ರಸ್ಟ್, ಮಂಡ್ಯ ರಾಯಲ್ ಚೆಸ್ ಅಕಾಡೆಮಿಯಿಂದ ಎಚ್.ಹೊಂಬೇಗೌಡ ಸ್ಮಾರಕ ವಕೀಲರ ರಿಕ್ರಿಯೇಷನ್ ಕ್ಲಬ್ ಮತ್ತು ಇಂಗಳೆ ಫೌಂಡೇಷನ್ಸ್ ಸಹಯೋಗದಲ್ಲಿ ೧೫ ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ಜೂ.29ರಂದು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಸಿ.ಎಲ್.ಶಿವಕುಮಾರ್ ತಿಳಿಸಿದರು.

ಕ್ಲಬ್ ಆವರಣದಲ್ಲಿ ಪಂದ್ಯಾವಳಿ ಏರ್ಪಡಿಸಲಾಗಿದ್ದು, ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ೭,೯,೧೧,೧೩ ಮತ್ತು ೧೫ ವರ್ಷದೊಳಗಿನವರ ವಯೋಮಾನಕ್ಕೆ ಅನುಗುಣವಾಗಿ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಿಭಾಗಕ್ಕೂ ೫ ಟ್ರೋಫಿಗಳು ಸೇರಿದಂತೆ ೧೦೫ ಬಹುಮಾನ ನೀಡಲಾಗುವುದು. ರಾಜ್ಯದ ವಿವಿಧೆಡೆಗಳಿಂದ ಸುಮಾರು ೧೫೦ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಒಬ್ಬರಿಗೆ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಮೂರು ಜನರಿಗೆ ಅತ್ಯುತ್ತಮ ಅಕಾಡೆಮಿ ಪ್ರಶಸ್ತಿಯಾಗಿ ಟ್ರೋಫಿ ನೀಡಲಾಗುವುದು. ಪ್ರತಿ ಸ್ಪರ್ಧಿಗೆ ೬೦೦ ರು.ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ ಎಂದರು.

ಗ್ರಂಥಾಲಯ ತೆರೆಯಲು ಚಿಂತನೆ:

ಇಂದಿನ ಮೊಬೈಲ್ ಮತ್ತು ಟಿವಿ ಸಂಸ್ಕೃತಿಯಲ್ಲಿ ಮುಳುಗಿರುವ ಯುವಜನತೆ ಮತ್ತು ನಾಗರಿಕರನ್ನು ಪುಸ್ತಕ ಸಂಸ್ಕೃತಿಯತ್ತ ಸೆಳೆದು ಅವರ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗಲು ಕ್ಲಬ್ ಆವರಣದಲ್ಲಿ ಗ್ರಂಥಾಲಯ ತೆರೆಯಲು ಚಿಂತನೆ ನಡೆಸಲಾಗಿದೆ. ವಕೀಲರು ತಮ್ಮ ದೈನಂದಿನ ಒತ್ತಡದ ನಡುವೆ ವಿವಿಧ ರೀತಿಯ ಪುಸ್ತಕಗಳ ಅಧ್ಯಯನದ ಬಗ್ಗೆ ಆಕರ್ಷಿಸುವುದರಲ್ಲದೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೂ ಗ್ರಂಥಾಲಯ ಲಭ್ಯವಾಗುವಂತೆ ಮಾಡಲಾಗುವುದು. ಜಿಲ್ಲೆಯ ಸಾಹಿತಿಗಳು, ಬರಹಗಾರರು ತಾವು ಬರೆದಿರುವ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆ ನೀಡುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು. ಅಲ್ಲದೆ ತಮ್ಮಲ್ಲಿ ಲಭ್ಯವಿರುವ ಇನ್ನಿತರ ಪುಸ್ತಕಗಳನ್ನು ನೀಡಬೇಕೆಂದು ಕೋರಿದರು.

ಹೆಚ್ಚಿನ ವಿವರಗಳಿಗೆ ಚೇತನ್.ಎಂ.ಎಸ್ ೭೮೯೨೧೭೪೨೩೬ ಮತ್ತು ರಾಕೇಶ್‌ಗೌಡ.ಜಿ.ಸಿ ೮೪೯೪೯ ೯೩೩೪೧ ಅವರನ್ನು ಸಂಪರ್ಕಿಸಬಹುದು ಎಂದರು.

ವಕೀಲರಾದ ಎಚ್.ಎಂ.ಹರಿಪ್ರಸಾದ್, ಎಂ.ಎಸ್.ಸತೀಶ್, ಚೆಸ್ ಅಕಾಡೆಮಿಯ ಚೇತನ್ ಭಾಗವಹಿಸಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ