ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಬಲ್ಲಮಾವಟಿ ಗ್ರಾಮದ ಭಜರಂಗಿ ಯೂತ್ ಕ್ಲಬ್ ವತಿಯಿಂದ ನೇತಾಜಿ ಪ್ರೌಢಶಾಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಶನಿವಾರ ಚಾಲನೆ ನೀಡಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ ಮಾತನಾಡಿ ಗ್ರಾಮೀಣ ಭಾಗದಲ್ಲಿ ವಿವಿಧ ಕ್ರೀಡಾಪಟುಗಳನ್ನು ಆಯೋಜಿಸಿರುವುದು ಸಂತೋಷದ ವಿಷಯ. ಯುವ ಪ್ರತಿಭೆಗಳನ್ನು ಹೊರತರಲು ಇಂತಹ ಟೂರ್ನಿಗಳು ಸಹಕಾರಿಯಾಗಿದೆ ಎಂದರು.
ದಾನಿ ಪೆಬ್ಬೆಟ್ಟಿರ ಯತೀಶ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದರು. ಮೊದಲ ದಿನದ ಪಂದ್ಯಾಟದಲ್ಲಿ ಗ್ರೂಪ್ ಎ ನಿಂದ ಹಾಕತ್ತೂರಿನ ಯಟೆಕ್ ಬಾಯ್ಸ್ ತಂಡ ಮತ್ತು ಬಿ ಗುಂಪಿನಿಂದ ಕಟ್ಟೆ ಮಾಡಿನ ಬ್ಲಾಕ್ ಈಗೆಲ್ ತಂಡ ಸೆಮಿ ಫೈನಲ್ ಹಂತಕ್ಕೆ ಪ್ರವೇಶಿಸಿದವು.--------------------------------------
ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲುಮಡಿಕೇರಿ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಅಪಪ್ರಚಾರ ಆರೋಪ ಹಿನ್ನೆಲೆಯಲ್ಲಿ ಕೊಡಗು ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾನೂರಿನ ಸಿದ್ದು ನಾಚಪ್ಪ ಎಂಬುವರ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರತಾಪ್ ಸಿಂಹ ಅವರು ಕೊಡವರನ್ನು ನಿಂದಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು.ನ. 9 ರಂದು ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ಕೊಡವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವಕ್ಫ್ ವಿರುದ್ಧ ಪೊನ್ನಂಪೇಟೆಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಹೇಳಿದ್ದಾರೆಂದು ಪೋಸ್ಟ್ ಮಾಡಿದ್ದು, ಸುಳ್ಳು ಆಪಾದನೆ ಸೃಷ್ಟಿ ಮತ್ತು ಕೊಡಗಿನ ಜನರಲ್ಲಿ ಪ್ರತಾಪ್ ಸಿಂಹ ವಿರುದ್ಧ ಕೆಟ್ಟ ಭಾವನೆ ಬರುವಂತೆ ಅವಹೇಳನಕಾರಿ ಬರಹದ ಆರೋಪ ಹಿನ್ನೆಲೆಯಲ್ಲಿ ಸಿದ್ದು ನಾಚಪ್ಪ ವಿರುದ್ಧ ಬಿಜೆಪಿಯಿಂದ ಮಡಿಕೇರಿ ನಗರ ಠಾಣೆಗೆ ದೂರು ನೀಡಲಾಗಿದೆ.