ಒಂಟಿ ಸಲಗ ಸೆರೆಗೆ ನಾಳೆಯಿಂದ ಕಾರ್ಯಾಚರಣೆ

KannadaprabhaNewsNetwork | Updated : Nov 10 2023, 01:03 AM IST

ಸಾರಾಂಶ

ಒಂಟಿ ಸಲಗ ಸೆರೆಗೆ ನಾಳೆಯಿಂದ ಕಾರ್ಯಾಚರಣೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈವರೆಗೆ ಇಬ್ಬರನ್ನು ಬಲಿ ತೆಗೆದುಕೊಂಡಿರುವ ಒಂಟಿ ಸಲಗ ಸೆರೆ ಹಿಡಿಯಲು ಭಾನುವಾರದಿಂದ ಕಾರ್ಯಾಚರಣೆ ಆರಂಭವಾಗಲಿದೆ.ಈ ಸಂಬಂಧ ಈಗಾಗಲೇ 3 ಸಾಕು ಆನೆಗಳನ್ನು ಸಕ್ರೆಬೈಲು ಬಿಡಾರದಿಂದ ಕರೆದುಕೊಂಡು ಬರಲಾಗಿದೆ. ಶನಿವಾರ ಮಡಿಕೇರಿಯ ದುಬಾರೆ ಶಿಬಿರದಿಂದ ಆನೆಗಳನ್ನು ಕರೆ ತರುವ ಪ್ರಕ್ರಿಯೆ ನಡೆಯುತ್ತಿದ್ದು, ಅವುಗಳು ಬರುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಚಿಕ್ಕಮಗಳೂರು ವಿಭಾಗದ ಡಿಎಫ್‌ಒ ರಮೇಶ್‌ಬಾಬು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಸಕ್ರೆಬೈಲಿನಿಂದ ಸುಮಾರು 35 ವರ್ಷ ಪ್ರಾಯದ ಸೋಮಣ್ಣ, ಆಲೆ, ಬಹದ್ದೂರ್‌ ಎಂಬ ಹೆಸರಿನ ಮೂರು ಗಂಡಾನೆಗಳನ್ನು ಕರೆಸಿಕೊಳ್ಳಲಾಗಿದೆ. ಅವುಗಳಿಗೆ ಮತ್ತಾವರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪೂಜೆ ಸಲ್ಲಿಸಿದರು. ಶನಿವಾರ ದುಬಾರೆಯಿಂದ ಆನೆಗಳು ಬರುತ್ತಿದ್ದಂತೆ ಈಗಾಗಲೇ ಪ್ರಾಣ ಹಾನಿ ಮಾಡಿರುವ ಆನೆಯನ್ನು ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದೆ.7 ಆನೆಗಳ ಗುಂಪಿನಿಂದ ಒಂದು ಗಂಡಾನೆ ಹೊರಗೆ ಬಂದಿದ್ದು, ಇದು, ಈವರೆಗೆ ಇಬ್ಬರನ್ನು ಬಲಿ ತೆಗೆದು ಕೊಂಡಿದೆ. ಕೆಲವು ದಿನಗಳ ಹಿಂದೆ ಮತ್ತಾವರ ಸುತ್ತಮುತ್ತ ಓಡಾಡುತ್ತಿದ್ದ ಈ ಆನೆ, ಕುಂದೂರು ಮಾರ್ಗ ವಾಗಿ ತೆರಳುವಾಗ ಬುಧವಾರ ಮಹಿಳೆಯನ್ನು ತುಳಿದಿದೆ. ಈಗ ಆ ಆನೆ ಕಣ್ಣಿಗೆ ಕಾಣುತ್ತಿಲ್ಲ. ಅದರ ಮೇಲೆ ಅರಣ್ಯ ಇಲಾಖೆಯವರು ನಿಗಾ ವಹಿಸಿದ್ದು, ಅದು ಕಣ್ಣಿಗೆ ಕಂಡಿದ ತಕ್ಷಣ ಕಾರ್ಯಾಚರಣೆ ಆರಂಭವಾಗಲಿದೆ. 9 ಕೆಸಿಕೆಎಂ 6ಒಂಟಿ ಸಲಗ ಹಿಡಿಯಲು ಸಕ್ರೆಬೈಲಿನಿಂದ ಬಂದಿರುವ ಆನೆಗಳಿಗೆ ಮತ್ತಾವರದಲ್ಲಿ ಪೂಜೆ ಸಲ್ಲಿಸಲಾಯಿತು.

Share this article