ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರು ಹಾಸನ್ ಎಕ್ಸ್ ಪ್ರೆಸ್ ವಿಶೇಷ ರೈಲು ಬೆಂಗಳೂರಿನಿಂದ ಬೆಳಗ್ಗೆ ೭.೩೦ ಹೊರಟು ಹಾಸನಕ್ಕೆ ಬೆಳಗ್ಗೆ ೧೧.೩೦ ತಲುಪಲಿದೆ, ನಂತರ ಮಧ್ಯಾಹ್ನ ೩ .೧೫ಕ್ಕೆ ಹಾಸನದಿಂದ ಹೊರಟು ಸಂಜೆ ೭.೦೦ ಗಂಟೆ ತಲುಪಲಿದೆ. ಈ ರೈಲು ಮಾರ್ಗ ಮಧ್ಯ ಯಶವಂತಪುರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿಜಿನಗರ. ಶ್ರವಣಬೆಳಗೂಳ, ಚನ್ನರಾಯಪಟ್ಟಣ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುತ್ತದೆ ಎಂದರು.
ಅರಸೀಕೆರೆಯಿಂದ ಬೆಳಗ್ಗೆ ೧೧.೩೦ ಹೊರಟು ಹಾಸನಕ್ಕೆ ೧೨.೩೦ ತಲುಪಲಿದೆ, ಹಬ್ಬನಘಟ್ಟ ಹಾಗೂ ಬಾಗೇಶಪುರ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಅವಕಾಶವಿರುತ್ತದೆ ನಂತರ ಹಾಸನದಿಂದ ೧೨.೪೫ ಹೊರಟು ಮಧ್ಯಾಹ್ನ ೨ ಗಂಟೆಗೆ ಅರಸೀಕೆರೆ ತಲುಪಲಿದೆ ಎಂದರು. ಹಾಸನಾಂಬಾ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬೆಂಗಳೂರು, ಅರಸೀಕೆರೆ ಹಾಗೂ ಮಾರ್ಗ ಮಧ್ಯದ ವಿವಿಧ ಪ್ರದೇಶಗಳಿಂದ ಹಾಸನಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದ ಅವರು ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ನೈರುತ್ಯ ರೈಲ್ವೆಯ ಅಧಿಕೃತ ಮೂಲಗಳಿಂದ ರೈಲುಗಳ ವೇಳಾ ಪಟ್ಟಿ ಹಾಗೂ ಸಂಚಾರದ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿದರು. ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಶೌಚಾಲಯಗಳು ಸ್ವಚ್ಚವಾಗಿರಬೇಕು, ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ರೈಲ್ವೆ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್, ಭಕ್ತಾದಿಗಳು ದೇವಿ ದರ್ಶನಕ್ಕೆ ರೂ.೩೦೦, ೧೦೦೦ ರೂಗಳ ಟಿಕೆಟ್ ಪಡೆಯಲು ಪ್ರತ್ಯೇಕ ಕೌಂಟರ್ ಇರುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉಚಿತ ವೈಫೈ ಪೋಸ್ಟ್‌ರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಹಾಸನಾಂಬಾ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹೆಚ್ಚಿನ ಜನಸಂದಣಿಯಿಂದ ಇಂಟರ್ನೆಟ್ ಸಮಸ್ಯೆ ಎದುರಾಗುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಸದರ ಅನುದಾನದಲ್ಲಿ ಉಚಿತ ವೈಫೈ ಸೌಲಭ್ಯವನ್ನು ಅ.೨೯ ರಿಂದ ನ.೧೧ರವರೆಗೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ,ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ರೈಲ್ವೆ ಇಲಾಖೆ ಅಸಿಸ್ಟೆಂಟ್ ಮ್ಯಾನೇಜರ್ ರಮೇಶ್, ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.