ಸರ್‌ಎಂವಿ ಕಾಲೇಜಿನ ರ‍್ಯಾಂಕ್ ವಿದ್ಯಾರ್ಥಿಗಳ ಅಭಿಪ್ರಾಯಗಳು

KannadaprabhaNewsNetwork | Published : Apr 9, 2025 12:31 AM

ಸಾರಾಂಶ

ಶಿಕ್ಷಕರು ಮಾಡಿದ ಪಾಠವನ್ನು ಅಂದಿನ ದಿನವೇ ಓದಿದರೆ ಹೆಚ್ಚು ನಮ್ಮ ತಲೆಯಲ್ಲಿ ಉಳಿಯುತ್ತದೆ. ಇದನ್ನು ರೂಢಿಸಿಕೊಂಡಿದ್ದರಿಂದ 600ಕ್ಕೆ 595 ಅಂಕ ಪಡೆಯಲು ಸಾಧ್ಯವಾಯಿತು ಎಂದು ಸರ್ ಎಂ.ವಿ. ಪಿಯು ಕಾಲೇಜಿನ ಎನ್.ಎಂ. ಜಯಲಕ್ಷ್ಮೀ ಮನದಾಳದ ಮಾತಾಗಿದೆ.

* ಅಂದಿನ ದಿನವೇ ಪಾಠ ಓದಿದರೆ ತಲೆಯಲ್ಲಿ ಉಳಿಯುತ್ತದೆ: ಜಯಲಕ್ಷ್ಮೀ ಶಿಕ್ಷಕರು ಮಾಡಿದ ಪಾಠವನ್ನು ಅಂದಿನ ದಿನವೇ ಓದಿದರೆ ಹೆಚ್ಚು ನಮ್ಮ ತಲೆಯಲ್ಲಿ ಉಳಿಯುತ್ತದೆ. ಇದನ್ನು ರೂಢಿಸಿಕೊಂಡಿದ್ದರಿಂದ 600ಕ್ಕೆ 595 ಅಂಕ ಪಡೆಯಲು ಸಾಧ್ಯವಾಯಿತು ಎಂದು ಸರ್ ಎಂ.ವಿ. ಪಿಯು ಕಾಲೇಜಿನ ಎನ್.ಎಂ. ಜಯಲಕ್ಷ್ಮೀ ಮನದಾಳದ ಮಾತಾಗಿದೆ.

ತಾಲೂಕಿನ ನೇರ್ಲಗಿ ರಂಗನಾಥ ಹೈಸ್ಕೂಲಿನಲ್ಲಿ ಗುಮಾಸ್ತರಾಗಿರುವ ತಂದೆ ಎನ್.ಆರ್. ಮಲ್ಲಿಕಾರ್ಜುನ್, ದಾವಣಗೆರೆ ಹಳೇ ಭಾಗದ ಮಹಿಳೆಯರ ಹೆರಿಗೆ ಆಸ್ಪತ್ರೆಯಲ್ಲಿ ನರ್ಸಿಂಗ್ ಅಧಿಕಾರಿ ಮಂಜಮ್ಮ ದಂಪತಿಯ ಪುತ್ರಿಯಾದ ಜಯಲಕ್ಷ್ಮೀ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಸ್ಥಾನ, ಜಿಲ್ಲೆಗೆ 2ನೇ ಟಾಪರ್ ಆಗಿದ್ದಾರೆ. ಇಂಗ್ಲಿಷ್‌ನಲ್ಲಿ 95 ಅಂಕ ಪಡೆದಿದ್ದು, ಉಳಿದ ಎಲ್ಲ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.

ಪ್ರತಿನಿತ್ಯ ರಾತ್ರಿ 1 ಗಂಟೆವರೆಗೂ ಓದುತ್ತಿದ್ದು, ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದೆ. ಕಾಲೇಜಿನಲ್ಲಿ ನೀಡಿದ ಎನ್‌ಸಿಆರ್‌ಟಿ ನೋಟ್ಸ್‌ಗಳು, ಶಿಕ್ಷಕರು ಮಾಡಿದ ಪಾಠ, ಮಾರ್ಗದರ್ಶನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಅನುಕೂಲವಾಗಿದೆ. ಮುಂದೆ ಎಂಬಿಬಿಎಸ್ ಮಾಡಬೇಕೆಂಬ ಕನಸು ಹೊತ್ತಿದ್ದು, ನೀಟ್ ಪರೀಕ್ಷೆಗೆ ತಯಾರಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. (8ಕೆಡಿವಿಜಿ79: ಎನ್.ಎಂ.ಜಯಲಕ್ಷ್ಮೀ) - - -

* ಪರೀಕ್ಷೆಯಲ್ಲಿ 599 ಅಂಕ ಪಡೆಯುವುದಾಗಿ ಅಗಾಧ ನಿರೀಕ್ಷೆ ಇಟ್ಟುಕೊಂಡಿದ್ದ ರಾಹುಲ್ ಆರ್. ಮಠದ 600ಕ್ಕೆ 595 ಅಂಕ ಪಡೆದು ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ತ್ಯಾಗರಾಜ ನಗರದ ನಿವಾಸಿ ಎಂ.ಆರ್. ರವೀಂದ್ರನಾಥ್, ತಾಯಿ ಎಂ.ವಿ.ಲತಾ ದಂಪತಿಯ ಪುತ್ರ ರಾಹುಲ್ ಆರ್. ಮಠದ, ರಾಜ್ಯಕ್ಕೆ 5ನೇ ಸ್ಥಾನ, ಜಿಲ್ಲೆಗೆ 2ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಪುತ್ರ ಶಿಕ್ಷಣಕ್ಕಾಗಿ ತಾಯಿ ಲತಾ ನಗರದ ಸೋಮೇಶ್ವರ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡು, ಮಗನನ್ನು ಓದಿಸಿದ್ದಾರೆ. ಕೇವಲ ಇಂಗ್ಲಿಷ್‌ನಲ್ಲಿ 95 ಅಂಕ ಪಡೆದ ರಾಹುಲ್ ಉಳಿದ ಎಲ್ಲ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.

ವೈದ್ಯ ಆಗಬೇಕೆಂದು ಆಸೆ ಹೊತ್ತಿರುವ ರಾಹುಲ್ ಆರ್. ಮಠದ, ವೈದ್ಯನಾಗಿ ಮುಂದೆ ಐಎಎಸ್ ಮಾಡುವ ದೊಡ್ಡ ಆಸ್ತೆ ಹೊಂದಿದ್ದಾರೆ. ಪ್ರತಿನಿತ್ಯ ಧ್ಯಾನ ಮಾಡುವ ಜೊತೆಗೆ ಅಂದಿನ ಪಾಠ ಅಂದೇ ಓದುವ ರೂಢಿ ಬೆಳೆಸಿಕೊಂಡು 600ಕ್ಕೆ 595 ಅಂಕ ಪಡೆದಿರುವುದಾಗಿ ಹೇಳಿದ್ದಾರೆ. (-8ಕೆಡಿವಿಜಿ80: ರಾಹುಲ್ ಆರ್.ಮಠದ್)

- - -

* ಕೆ.ಎಲ್.ಸಾಕ್ಷಿ 9ನೇ ತರಗತಿ ಓದುತ್ತಿದ್ದಾಗಲೇ ಸಿಎ ಮಾಡಬೇಕೆಂದು ಕನಸು ಹೊತ್ತಿದ್ದು, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 593 ಅಂಕ ಪಡೆದು ಜಿಲ್ಲೆ ಮೊದಲ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.ಸರ್ ಎಂ.ವಿ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಭ್ಯಾಸ ಮಾಡಿದ ಸಾಕ್ಷಿ ಚಿಕ್ಕ ವಯಸ್ಸಿನಲ್ಲೇ ತಂದೆ ಕಳೆದುಕೊಂಡವಳು. ಗೃಹಿಣಿಯಾಗಿದ್ದ ತಾಯಿ ರತ್ನಮ್ಮ, ಚಿಕ್ಕಪ್ಪ, ಸಹೋದರ ಸಾಕ್ಷಿಯ ಶಿಕ್ಷಣಕ್ಕೆ ಬೆನ್ನೆಲುಬಾಗಿದ್ದಾರೆ.ಪ್ರತಿನಿತ್ಯ ಹರಿಹರದಿಂದ ದಾವಣಗೆರೆಗೆ ಕಾಲೇಜಿನ ವಾಹನದಲ್ಲಿ ಓಡಾಡುತ್ತಿದ್ದ ಸಾಕ್ಷಿ, ಓಡಾಟದಲ್ಲಿ ಆಯಾಸವಾದರೂ ಓದಿಗೆ ಆರು ಗಂಟೆ ಮೀಸಲಿಟ್ಟಿದ್ದಳು. ನಿರೀಕ್ಷೆಯಂತೆ 593 ಅಂಕ ಪಡೆದಿದ್ದಾಳೆ.

(-8ಕೆಡಿವಿಜಿ81: ದಾವಣಗೆರೆಯ ಸರ್ ಎಂವಿ ಕಾಲೇಜಿನಲ್ಲಿ ಟಾಪರ್ ಆದ ಕೆ.ಎಲ್. ಸಾಕ್ಷಿ ಅವರಿಗೆ ತಾಯಿ ಸಂತೋಷದಿಂದ ಸಿಹಿ ತಿನ್ನಿಸಿ, ಸಂಭ್ರಮಿಸಿದರು.)

Share this article