ಸುಳ್ಳು ಜನಾಭಿಪ್ರಾಯ ಮೂಡಿಸಲು ವಿಪಕ್ಷದವರಿಂದ ಅಪಪ್ರಚಾರ

KannadaprabhaNewsNetwork |  
Published : May 31, 2026, 01:45 AM IST
ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ ಬಿಎಲ್‌ಎ -2 ಕಾರ್ಯಾಗಾರವನ್ನು ಉದ್ಘಾಟನೆ | Kannada Prabha

ಸಾರಾಂಶ

ಸುಪ್ರೀಂಕೋರ್ಟ್ ಚುನಾವಣಾ ಆಯೋಗವು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದೆ. ವಿರೋಧ ಪಕ್ಷಗಳು ಮತ್ತು ಅದರ ಮಿತ್ರಪಕ್ಷಗಳ ರಾಜಕೀಯವು ಸತ್ಯಗಳ ಮೇಲೆ ಅಲ್ಲ, ವದಂತಿಗಳು, ಅಪನಂಬಿಕೆ ಮತ್ತು ಮತಬ್ಯಾಂಕ್ ಲೆಕ್ಕಾಚಾರಗಳ ಮೇಲೆ ಆಧಾರಿತವಾಗಿದೆ ಎಂದರು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಲು ಯಾರು ಬಯಸುತ್ತಾರೆ ಮತ್ತು ರಾಜಕೀಯ ಲಾಭಕ್ಕಾಗಿ ಯಾರು ಗೊಂದಲವನ್ನು ಹರಡುತ್ತಾರೆ ಎಂಬುದನ್ನು ಸಾರ್ವಜನಿಕರು ಈಗ ಅರ್ಥ ಮಾಡಿಕೊಂಡಿದ್ದಾರೆ. ಗೊಂದಲವನ್ನು ಹರಡುವವರಿಗೆ ಸೂಕ್ತ ಉತ್ತರ ನೀಡುತ್ತಾರೆ. ಮತದಾರರು ವದಂತಿಗಳಿಗೆ ಗಮನ ಕೊಡಬಾರದು ಮತ್ತು ತಮ್ಮ ಮತದಾನದ ಹಕ್ಕುಗಳನ್ನು ರಕ್ಷಿಸಲು ಜಾಗೃತರಾಗಿರಬೇಕು ಎಂದು ಅವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಎಸ್‌ಐಆರ್‌ ಪ್ರಕ್ರಿಯೆಯ ಕುರಿತು ಸುಳ್ಳು ಜನಾಭಿಪ್ರಾಯ ಮೂಡಿಸಲು ಪ್ರಜಾಪ್ರಭುತ್ವವನ್ನು ಅಪಖ್ಯಾತಿಗೊಳಿಸಲು ವಿಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ದೂರಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)ದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ ಬಿಎಲ್‌ಎ -2 ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಶುದ್ಧ, ಹೆಚ್ಚು ಪಾರದರ್ಶಕ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸುವುದು ಎಸ್‌ಐಆರ್‌ನ ಗುರಿಯಾಗಿದೆ. ಈ ಮಹತ್ವದ ಪ್ರಕ್ರಿಯೆಯ ಬಗ್ಗೆ ಗೊಂದಲವನ್ನು ಹರಡುವುದು ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾತ್ರವಲ್ಲದೆ ನಾಗರಿಕರ ಹಕ್ಕುಗಳಿಗೆ ಮಾಡಿದ ಅವಮಾನವೂ ಆಗಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ನಕಾರಾತ್ಮಕ ರಾಜಕೀಯವನ್ನು ತ್ಯಜಿಸಿ, ಕಾನೂನು ಪ್ರಕ್ರಿಯೆಯನ್ನು ಗೌರವಿಸಿ ರಚನಾತ್ಮಕ ಸಲಹೆಗಳನ್ನು ನೀಡಬೇಕೆಂದು ಅವರು ಒತ್ತಾಯಿಸಿದರು.

ವಿರೋಧ ಪಕ್ಷಗಳು ತಮ್ಮ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತಿವೆ. ಪಾರದರ್ಶಕ ಮತದಾರರ ಪಟ್ಟಿಯು ಅವಕಾಶವಾದಿ ರಾಜಕೀಯವನ್ನು ದುರ್ಬಲಗೊಳಿಸುವುದರಿಂದ ವಿರೋಧ ಪಕ್ಷಗಳು ಚುನಾವಣಾ ಸ್ವಚ್ಛತೆಗೆ ಹೆದರುತ್ತಿವೆ. ಮೊದಲ ದಿನದಿಂದಲೇ ಬಗ್ಗೆ ಗೊಂದಲ, ಭಯ ಮತ್ತು ಸುಳ್ಳುಗಳನ್ನು ಬಿತ್ತುವ ಮೂಲಕ ಸಾರ್ವಜನಿಕರನ್ನು ದಾರಿತಪ್ಪಿಸಿವೆ. ಸುಪ್ರೀಂಕೋರ್ಟ್ ಚುನಾವಣಾ ಆಯೋಗವು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದೆ. ವಿರೋಧ ಪಕ್ಷಗಳು ಮತ್ತು ಅದರ ಮಿತ್ರಪಕ್ಷಗಳ ರಾಜಕೀಯವು ಸತ್ಯಗಳ ಮೇಲೆ ಅಲ್ಲ, ವದಂತಿಗಳು, ಅಪನಂಬಿಕೆ ಮತ್ತು ಮತಬ್ಯಾಂಕ್ ಲೆಕ್ಕಾಚಾರಗಳ ಮೇಲೆ ಆಧಾರಿತವಾಗಿದೆ ಎಂದರು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಲು ಯಾರು ಬಯಸುತ್ತಾರೆ ಮತ್ತು ರಾಜಕೀಯ ಲಾಭಕ್ಕಾಗಿ ಯಾರು ಗೊಂದಲವನ್ನು ಹರಡುತ್ತಾರೆ ಎಂಬುದನ್ನು ಸಾರ್ವಜನಿಕರು ಈಗ ಅರ್ಥ ಮಾಡಿಕೊಂಡಿದ್ದಾರೆ. ಗೊಂದಲವನ್ನು ಹರಡುವವರಿಗೆ ಸೂಕ್ತ ಉತ್ತರ ನೀಡುತ್ತಾರೆ. ಮತದಾರರು ವದಂತಿಗಳಿಗೆ ಗಮನ ಕೊಡಬಾರದು ಮತ್ತು ತಮ್ಮ ಮತದಾನದ ಹಕ್ಕುಗಳನ್ನು ರಕ್ಷಿಸಲು ಜಾಗೃತರಾಗಿರಬೇಕು ಎಂದು ಅವರು ಮನವಿ ಮಾಡಿದರು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬೂತ್‌ಗಳಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸುವ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಎಚ್ಚರ ವಹಿಸಬೇಕು. ಕ್ಷೇತ್ರದ ಪ್ರತಿಯೊಂದು ಬೂತ್‌ಗಳಲ್ಲಿ ಬಿಎಲ್‌ಎಗಳು ಪರಿಷ್ಕರಣೆಗಾಗಿ ಹೋದಾಗ ಜೆಡಿಎಸ್ ಕಾರ್ಯಕರ್ತರು ಜತೆಯಲ್ಲಿದ್ದುಕೊಂಡು ಸಹಕಾರ ನೀಡಬೇಕು. ಮೃತರಾದವರು, ಗ್ರಾಮ, ಪಟ್ಟಣ ಬಿಟ್ಟು ಹೋಗಿರುವವರನ್ನು ಗುರುತಿಸಬೇಕು ಮತ್ತು ಎರಡು ಕಡೆಗಳಲ್ಲಿ ಬರುವ ಹೆಸರನ್ನು ತೆಗೆದು ಹಾಕುವ ಕೆಲಸ ಮಾಡಬೇಕು. ಆದ್ದರಿಂದ ಈ ಬಗ್ಗೆ ಸಮಪರ್ಕವಾಗಿ ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಅರ್ಹ ಮತದಾರರನ್ನು ಗುರುತಿಸಿ, ನೇರವಾಗಿ ಅರ್ಜಿಗಳನ್ನು ಪಡೆದು ಪರಿಷ್ಕರಣೆ ಮಾಡಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಬಿಎಲ್‌ಎಗಳು ನಿರಂತರ ಪರಿಶ್ರಮದಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಕೈಗೊಂಡು, ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇಂದಿನಿಂದಲೇ ಕ್ರಿಯಾಶೀಲರಾಗಬೇಕು ಎಂದು ಅವರು ಸಲಹೆ ನೀಡಿದರು. ಬಿಎಲ್‌ಎ ಕಾರ್ಯಗಾರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವೆಂಕಟೇಶ್ ಮತ್ತು ಅಶ್ವಿನ್ ಎಸ್ ಐಆರ್‌ ಕುರಿತಂತೆ ಎಸ್‌ಐಆರ್‌ನ ಹಂತಗಳು ಮತ್ತು ಪ್ರತಿ ಹಂತದಲ್ಲಿನ ಪ್ರಕ್ರಿಯೆಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ಜೆಡಿಎಸ್ ಮುಖಂಡರಾದ ಪರಮ ಕೃಷ್ಣೇಗೌಡ, ಬಿ. ಎಚ್. ಶಿವಣ್ಣ, ಅನಿಲ್‌ ಮರಗೂರು, ಡಿಶ್‌ ಕುಮಾರ್‌, ಮಖಾನ್‌ ಶಿವು, ವಿ. ಎನ್.ರಾಜಣ್ಣ, ಚಂದ್ರಪ್ಪ, ಚಿಕ್ಕಬಿಳಿ ಪ್ರವೀಣ್, ವಾಸುನಾಗಸಮುದ್ರ, ವಿಕ್ಟರ್‌, ಧರ್ಮ, ಉಮೇಶ್, ವಡ್ಡರಹಳ್ಳಿ ರಾಜಣ್ಣ, ದಿಡಗ ವಾಸು, ಮೂಡನಹಳ್ಳಿ ಚಂದ್ರಣ್ಣ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಬಿರುಗಾಳಿ ಸಹಿತ ಭಾರೀ ಮಳೆಗೆ ನೆಲಕಚ್ಚಿದ ಬಾಳೆ