ಧಾರವಾಡ:
ವಿಶ್ವ ಹಿಂದೂ ಪರಿಷದ್ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂಪರ ಸಂಘಟನೆಗಳು ಜಂಟಿಯಾಗಿ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಲಾಯಿತು. ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಕಾಯ್ದೆಯ ಸೆಕ್ಷನ್ 8(4)ಕ್ಕೆ ತಿದ್ದುಪಡಿ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಲಾಯಿತು.
ಬಜರಂಗದಳದ ಅಧ್ಯಕ್ಷ ಶಿವಾನಂದ ಸತ್ತಿಗೇರಿ ಮಾತನಾಡಿ, ರಾಜ್ಯದಲ್ಲಿ ಈ ಮೊದಲು ಗೋವುಗಳು ಅತ್ಯಂತ ಹಿಂಸಾತ್ಮಕವಾಗಿ ಒಂದೇ ವಾಹನದಲ್ಲಿ ಸಾಗಾಣಿಕೆಯಾಗುತ್ತಿದ್ದವು. ನಿಗದಿತ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಜಾನುವಾರುಗಳನ್ನು ಕ್ರೂರವಾಗಿ ಒಂದರ ಮೇಲೊಂದು ಹಾಕಿ ಸಾಗಾಟ ಮಾಡುತ್ತಿದ್ದರು. 2021ರಲ್ಲಿ ಈ ಕಾಯ್ದೆ ಜಾರಿಯಾದ ನಂತರ ಈ ಕ್ರೂರತೆ ಕಡಿಮೆಯಾಗಿತ್ತು. ಆದರೆ, ಸರ್ಕಾರ ಈ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬದಲು ಕಾನೂನು ಸಡಿಸುವ ಮೂಲಕ ವಾಹನ ನಾಗಾಟಗಾರರಿಗೆ, ಗೋ ಹಂತಕರಿಗೆ ನೀವು ಹೇಗೆ ಬೇಕಾದರೂ ಸಾಗಾಟ ಮಾಡಬಹುದು ನಾವು ನಿಮ್ಮ ಜೊತೆಗಿದ್ದೇವೆ'''''''' ಎಂದು ಹೇಳುವಂತಿದೆ. ತನ್ಮೂಲಕ ಗೋವುಗಳಿಗೆ ಹಿಂಸೆ ಹಾಗೂ ಅವುಗಳ ಹತ್ಯೆ ಇನ್ನೂ ಹೆಚ್ಚಾಗಲಿದೆ. ಹಿಂದೂಗಳ ಪೂಜನೀಯ ಗೋವುಗಳಿಗೆ ನೋವು, ಹಿಂಸೆ ಮಾಡಲು ಕಾಂಗ್ರೆಸ್ ಸಹಕಾರ ಮಾಡುವುದು ಬೇಡ. ಕೂಡಲೇ ತಿದ್ದುಪಡಿ ಚಿಂತನೆ ಕೈ ಬಿಡಬೇಕೆಂದು ಆಗ್ರಹಿಸಿದರು.ಈ ವೇಳೆ ವಿವಿಧ ಮಠಾಧೀಶರು ಹಾಗೂ ಸಂಘಟನೆಯ ಮಹೇಶ ಪಾಟೀಲ ದೀಪಕ ಅಳಗವಾಡಿ, ಈರೇಶ ಅಂಚಟಗೇರಿ, ಸಿದ್ದು ಹಿರೇಮಠ, ಅನುದೀಪ ಕುಲಕರ್ಣಿ, ವೀರಯ್ಯ ಚಿಕ್ಕಮಠ, ಆನಂದ ಢವಳೆ ಸೇರಿದಂತೆ ಹಲವುರಿದ್ದರು.