ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ವಿರೋಧ

KannadaprabhaNewsNetwork |  
Published : Apr 08, 2025, 12:31 AM IST
ಲೋಕಾಪುರ ಕಾಯಿಪಲ್ಲೇ ಮಾರ್ಕೇಟ್‌ನಲ್ಲಿ ನಿರ್ಮಿಸುತ್ತಿರುವ ಶೌಚಾಲಯಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಈಶ್ವರ ಹವಳಖೋಡ, ಮುರಗೇಶ ಕೊಣ್ಣೂರ, ಕುಬೇರ ಭಾಗಲೆ ಇದ್ದರು. | Kannada Prabha

ಸಾರಾಂಶ

ಲೋಕಾಪುರ ಪಟ್ಟಣದ ಕಾಯಿಪಲ್ಲೆ ಬಜಾರದಲ್ಲಿ ಪಟ್ಟಣ ಪಂಚಾಯತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಈ ಜಾಗದಲ್ಲಿ ಶೌಚಾಲಯ ನಿರ್ಮಿಸಬಾರದು ಎಂದು ಸ್ಥಳೀಯ ಸಾರ್ವಜನಿಕರು ಭಾನುವಾರ ವಿರೋಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ಕಾಯಿಪಲ್ಲೆ ಬಜಾರದಲ್ಲಿ ಪಟ್ಟಣ ಪಂಚಾಯತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಈ ಜಾಗದಲ್ಲಿ ಶೌಚಾಲಯ ನಿರ್ಮಿಸಬಾರದು ಎಂದು ಸ್ಥಳೀಯ ಸಾರ್ವಜನಿಕರು ಭಾನುವಾರ ವಿರೋಧ ವ್ಯಕ್ತಪಡಿಸಿದರು.

ರಸ್ತೆಯ ಪಕ್ಕದಲ್ಲಿ ಶೌಚಾಲಯ ನಿರ್ಮಿಸಿದರೆ ಸುತ್ತಲಿನ ಪರಿಸರ ಮಲೀನಗೊಳ್ಳುತ್ತದೆ, ಬೇರೆ ಜಾಗದಲ್ಲಿ ಶೌಚಾಲಯ ನಿರ್ಮಿಸಿ ನಮ್ಮ ಅಭ್ಯಂತರಿವಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು. ಕೇವಲ ಶೌಚಾಲಯ ನಿರ್ಮಿಸಿದರೆ ಸಾಲದು ಸ್ಛಚ್ಛತೆಗೂ ಆದ್ಯತೆ ನೀಡಬೇಕಾಗುತ್ತದೆ, ಶೌಚಾಲಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯ ಈಶ್ವರ ಹವಳಖೋಡ ತಿಳಿಸಿದರು.

ಅಂಗಡಿ ಮಾಲೀಕ ಮುರುಗೇಶ ಕೊಣ್ಣೂರ ಮಾತನಾಡಿ, ಚರಂಡಿಗಳು ಅವೈಜ್ಞಾನಿಕಗಳಾಗಿದ್ದು,ಮೂತ್ರಿ ಹರಿದುಹೋಗದೆ ನಿಂತಲ್ಲೇ ನಿಂತು ದುರ್ವಾಸನೆ ಬೀರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಕುಬೇರ ಬಾಗಲೆ, ಶ್ರೀಧರ ರಂಗೋಜಿ, ಶ್ರೀಶೈಲ ಪಲ್ಲೇದ, ಸಂಗಮೇಶ ಶಿಲವಂತರ, ಸದಾನಂದ ಬೋಳಿಶೆಟ್ಟಿ, ಅಜ್ಜಪ್ಪ ಹವಳಖೋಡ, ಶಾನೂರ ಭಾಗವಾನ, ಡಾ. ಬಾರಡ್ಡಿ, ಶಂಭು ಕೊಣ್ಣೂರ, ಮಹೇಶ ಕೊಣ್ಣೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌