ಖರೀದಿ ಮಾಡುವ ರಸಗೊಬ್ಬರ ಜತೆ ಅವಶ್ಯಕತೆ ಇಲ್ಲದ ಲಿಂಕ್ ಗೊಬ್ಬರ ತೆಗೆದುಕೊಳ್ಳಬೇಕೆನ್ನುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು.
ಮುಂಡರಗಿ: ರಸಗೊಬ್ಬರವನ್ನು ಎಫ್ಐಡಿ ಮೂಲಕ ತೆಗೆದುಕೊಳ್ಳಬೇಕೆಂದು ಆದೇಶ ಮಾಡಿದ್ದು, ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತದೆ. ಕೂಡಲೇ ಎಫ್‌ಐಡಿ ಗೊಂದಲ ಬಗೆಹರಿಸಬೇಕೆಂದು ಕಿಸಾನ್ ಜಾಗೃತಿ ವಿಕಾಸ ಸಂಘದ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ರೈತರ ಬೆಳೆಗಳ ಅವಶ್ಯಕತೆ ತಕ್ಕಂತೆ ಯುರಿಯಾ ಮತ್ತು ರಸಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರದ ಮುಖಾಂತರ ಅಥವಾ ಸೊಸೈಟಿಗಳ ಮುಖಾಂತರ ವಿತರಣೆ ಮಾಡಿದರೆ ಅನುಕೂಲವಾಗುತ್ತದೆ. ಎಫ್ಐಡಿ ಮೂಲಕ ಪ್ರತಿ ಎಕರೆಗೆ ಪ್ರತಿ ತಿಂಗಳು ಒಂದು ಚೀಲ ಯೂರಿಯಾ ಎಂಬುದನ್ನು ರದ್ದುಪಡಿಸಬೇಕು.
ಖರೀದಿ ಮಾಡುವ ರಸಗೊಬ್ಬರ ಜತೆ ಅವಶ್ಯಕತೆ ಇಲ್ಲದ ಲಿಂಕ್ ಗೊಬ್ಬರ ತೆಗೆದುಕೊಳ್ಳಬೇಕೆನ್ನುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಹಾಗೂ ಲಿಂಕ್ ಗೊಬ್ಬರ ಖರೀದಿ ಮಾಡುವಂತೆ ಒತ್ತಾಯ ಮಾಡುವ ವಿತರಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರಸಗೊಬ್ಬರ ಖರೀದಿಸುವ ರೈತರಿಗೆ ಎಫ್ಐಡಿ ರದ್ದುಪಡಿಸಬೇಕು. ಕಾಳಸಂತೆಯಲ್ಲಿ ಮಾರಾಟವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಿಸಾನ್ ಜಾಗೃತಿ ವಿಕಾಸ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಬಂಡಾರಿ, ತಾಲೂಕು ಅಧ್ಯಕ್ಷ ವಿ.ಎಸ್. ಘಟ್ಟಿ, ಕಾಶೀಂಸಾಬ್ ಸೈದರ್, ಅಂಬವ್ವ ಕಟ್ಟಿಮನಿ, ಯಲ್ಲಪ್ಪ ಜಾಲವಾಡಗಿ, ತಿಮ್ಮಣ್ಣ ಭಜಮ್ಮನವರ, ಫಕ್ಕೀರಪ್ಪ ವಡ್ಡಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಮಳೆಗೆ ಪಾರ್ಥಿಸಿ ವಿಶೇಷ ಪೂಜೆ
ನರಗುಂದ: ತಾಲೂಕಿನಲ್ಲಿ ಪ್ರಸಕ್ತ ವರ್ಷದ ಬಿತ್ತನೆ ದಿನಗಳು ಪ್ರಾರಂಭವಾದರೂ ಮಳೆ ಆಗದ್ದರಿಂದ ಮಹದಾಯಿ ಹೋರಾಟ ವೇದಿಕೆ ರೈತರು ವೇದಿಕೆ ಹತ್ತಿರುವ ಬನ್ನಿಮಹಾಂಕಾಳಿ ದೇವಿಗೆ ಅಂಬಲಿ ಪ್ರಸಾದ ಮಾಡಿ ಪೂಜೆ ಸಲ್ಲಿಸಿದರು.ರೈತ ಮುಖಂಡ ವೀರಭಸಪ್ಪ ಹೂಗಾರ ಮಾತನಾಡಿ, ಹಿಂದಿನ ವರ್ಷ ಈ ಸಮಯದಲ್ಲಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿ ರೈತ ಸಮುದಾಯ ಬಿತ್ತನೆ ಮಾಡಿದ್ದರು. ಆದರೆ ಈ ವರ್ಷ ಮೇ ತಿಂಗಳು ಮುಗಿಯಲು ಬಂದರೂ ತಾಲೂಕಿನಲ್ಲಿ ಉತ್ತಮ ಮಳೆ ಆಗದ್ದರಿಂದ ರೈತ ಸಮುದಾಯ ಚಿಂತೆಗೆ ಸಿಲುಕಿದೆ ಎಂದರು.
ಇದೇ ಸಂದರ್ಭದಲ್ಲಿ ಬನ್ನಿಮಹಾಂಕಾಳಿ ದೇವಿಗೆ ಅಂಬಲಿ ಪ್ರಸಾದ ಎಡೆ ಮಾಡಿ ಪೂಜೆ ಸಲ್ಲಿಸಿ, ಆನಂತರ ಅಂಬಲಿ ಪ್ರಸಾದವನ್ನು ಸಾರ್ವಜನಿಕರಗೆ ಪ್ರಸಾದ ಮಾಡಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.