ಹಿಟ್ ಆ್ಯಂಡ್‌ ರನ್ ಕಾಯ್ದೆಗೆ ಹಳಿಯಾಳದಲ್ಲಿ ವಿರೋಧ

KannadaprabhaNewsNetwork |  
Published : Jan 18, 2024, 02:03 AM IST
ಹಿಟ್ ಯ್ಯಾಂಡ್ ರನ್ ಕಾಯಿದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಹಳಿಯಾಳ ಪಟ್ಟಣದಲ್ಲಿ ಚಾಲಕರ ಒಕ್ಕೂಟ ತಾಲೂಕ ಘಟಕದಿಂದ ಬುಧವಾರ ದಿನವಿಡಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಹಿಟ್ ಆ್ಯಂಡ್‌ ರನ್ ಕಾಯ್ದೆ ಜಾರಿಗೊಳಿಸುವುದುರಿಂದ ಚಾಲಕ, ಮಾಲಕರು ಮನೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ.

ಹಳಿಯಾಳ:

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಹಿಟ್ ಆ್ಯಂಡ್‌ ರನ್ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಕರ್ನಾಟಕ ಚಾಲಕರ ಒಕ್ಕೂಟದ ತಾಲೂಕು ಘಟಕದಿಂದ ಬುಧವಾರ ದಿನವಿಡಿ ಪ್ರತಿಭಟನೆ ನಡೆಸಲಾಯಿತು.ಆಡಳಿತ ಸೌಧದೆದುರು ಪ್ರತಿಭಟನೆ ನಡೆಸಿದ ಟ್ರಕ್, ಟ್ರ್ಯಾಕ್ಸ್, ಆಟೋ, ಗೂಡ್ಸ್ ಗಾಡಿ ಚಾಲಕರು ಮತ್ತು ಮಾಲಕರು ಹಿಟ್ ಆ್ಯಂಡ್‌ ರನ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾಲಕರಿಗೆ ಶಿಕ್ಷೆ ವಿಧಿಸುವ ವಿಧೇಯಕ ಹಿಂಪಡೆಯಬೇಕೆಂದು ಆಗ್ರಹಿಸಿದರು.ಚಾಲಕರ ಒಕ್ಕೂಟದ ತಾಲೂಕು ಸಂಘದ ಅಧ್ಯಕ್ಷ ಬಸವರಾಜ ಗೌಳಿ, ಉಪಾಧ್ಯಕ್ಷ ಅಲ್ಲಾಭಕ್ಷ ಬಂಕಾಪುರ, ಗೌರವ ಅಧ್ಯಕ್ಷ ರೆಹಮಾನ ಜಂಬೂವಾಲೆ, ಕಾರ್ಯದರ್ಶಿ ಸುಭಾನಜಿ ನಾಯ್ಕ, ಆಟೋ ಚಾಲಕರ ಸಂಘದ ಅಧ್ಯಕ್ಷ ಚಂದ್ರು ದೊಡ್ಮಣಿ, ಪ್ರಮುಖರಾದ ಕಲ್ಲಪ್ಪ ಕಾದ್ರೋಳ್ಳಿ, ಸುಂದರರಾಜ ಮಾದರ, ಬಾಳು ಸಾವಂತ, ನಾಗರಾಜ ಇಟಗಿ, ಸುಭಾನಿ ಹುಬ್ಬಳ್ಳಿ, ಉಮೇಶ ಬೊಳಶೆಟ್ಟಿ, ಅಣ್ಣಪ್ಪ ವಡ್ಡರ, ಭರಮೋಜಿ ವಡ್ಡರ, ಇಮ್ರಾನ್ ಶೇಖ್ ಇದ್ದರು.ಕಾಂಗ್ರೆಸ್ ಬೆಂಬಲ:ಪ್ರತಿಭಟನೆ ಬೆಂಬಲಿಸಿ ಮುಷ್ಕರದಲ್ಲಿ ಪಾಲ್ಗೊಂಡ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಜನವಿರೋಧಿ ಕಾಯ್ದೆಯಾಗಿರುವ ಹಿಟ್ ಆ್ಯಂಡ್‌ ರನ್ ವಿಧೇಯಕ ಹಿಂಪಡೆಯಬೇಕೆಂದು ಆಗ್ರಹಿಸಿದರು. ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲಾ ಬೃಗಾಂಜಾ ಹಾಗೂ ಮುಖಂಡರು ಇದ್ದರು.ಪ್ರತಿಭಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಟೋ, ಟ್ಯಾಕ್ಸಿ ಹಾಗೂ ಇನ್ನಿತರ ಖಾಸಗಿ ಪ್ರಯಾಣಿಕ ಮತ್ತು ವಾಣಿಜ್ಯ ಸೇವೆ ವಾಹನಗಳ ಸೇವೆಯು ಸ್ಥಗಿತಗೊಂಡಿತು.

ಚಾಲಕರಿಂದ ಸರ್ಕಾರಕ್ಕೆ ಮನವಿಮುಂಡಗೋಡ: ಹಿಟ್ ಆ್ಯಂಡ್‌ ರನ್ ಭಾರತೀಯ ನ್ಯಾಯ ಸಂಹಿತೆ ಕಲಂ-೧೦೫ ವಿರೋಧಿಸಿ ಕರ್ನಾಟಕ ಚಾಲಕರ ಒಕ್ಕೂಟ ಬುಧವಾರ ಮುಂಡಗೋಡ ಗ್ರೇಡ್‌-೨ ತಹಸೀಲ್ದಾರ್‌ ಜಿ.ಬಿ. ಭಟ್ ಮೂಲಕ ರಾಜ್ಯ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿತು.

ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಿಟ್ ಆ್ಯಂಡ್‌ ರನ್ ಕಾಯ್ದೆಯಲ್ಲಿ ಯಾವುದೇ ಚಾಲಕರು ವಾಹನ ಅಪಘಾತಪಡಿಸಿ ದುರ್ಘಟನೆ ಸಂಭವಿಸಿದರೆ ಚಾಲಕನಿಗೆ ₹ ೭ ಲಕ್ಷ ದಂಡ ಮತ್ತು ೧೦ ವರ್ಷ ಕಾರಾಗೃಹ ಶಿಕ್ಷೆಗೆ ಒಳಪಡಿಸಲಾಗುವುದು ಎಂಬ ಕಾಯ್ದೆ ಜಾರಿಗೊಳಿಸಿದೆ. ಈ ಕಾಯ್ದೆ ವಿರೋಧಿಸಿ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಬಂದ್ ಕರೆ ಕೊಟ್ಟಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿ, ನಾವು ಎಲ್ಲ ರೀತಿಯ ವಾಹನ ಚಾಲಕರು ಸಂಘಟನೆಗಳೊಂದಿಗೆ ಸ್ವ-ಇಚ್ಛೆಯಿಂದ ಬಂದ್ ಮಾಡುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ವೇಳೆ ಜಿಲ್ಲಾಧ್ಯಕ್ಷ ಮುನ್ನಾ ಗಣೇಶಪುರ, ಜಿಲ್ಲಾ ಸಂಚಾಲಕ ಲಿಂಗರಾಜ ಕನ್ನೂರ, ತಾಲೂಕು ಗೌರವಾಧ್ಯಕ್ಷ ರವಿ ಲಮಾಣಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಫೀಕ ಇಂಗಳಗಿ, ತಾಲೂಕು ಕಾರ್ಯಾಧ್ಯಕ್ಷ ಉದಯಕುಮಾರ ಗೊಂದಳೆ, ತಾಲೂಕು ಸಂಚಾಲಕ ಮಂಜುನಾಥ ಪೆಟ್ಟಾಡಿಲ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ಸೂರಣ್ಣನವರ, ಪದಾಧಿಕಾರಿಗಳು, ಸದಸ್ಯರು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು