ಮಾಲ್ ನಿರ್ಮಾಣಕ್ಕೆ ವಿರೋಧ: ಬಿಜೆಪಿ ಗೊಸುಂಬೆ ನೀತಿ

KannadaprabhaNewsNetwork |  
Published : Aug 01, 2024, 12:16 AM IST

ಸಾರಾಂಶ

ಮಾಲ್ ನಿರ್ಮಾಣಕ್ಕೆ ವಿರೋಧ: ಬಿಜೆಪಿ ಗೊಸುಂಬೆ ನೀತಿ

ಕನ್ನಡಪ್ರಭ ವಾರ್ತೆ ತುಮಕೂರುಸ್ಮಾರ್ಟ್ ಸಿಟಿ ಯೋಜನೆಯಡಿ ಮಾರುಕಟ್ಟೆ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರ ಹಾಗೂ ಬಹು ಹಂತದ ವಾಹನ ನಿಲುಗಡೆ ಕಟ್ಟಡ ಸಂಕಿರ್ಣ ನಿರ್ಮಿಸಲು ಮುಂದಾಗಿದ್ದು ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲವೆಂದು ಹೋರಾಟ ನಡೆಸುತ್ತಿದೆ. ಇದು ಯಾರನ್ನು ರಕ್ಷಿಸಲು ಮತ್ತು ಯಾರ ಹಿತಾಸಕ್ತಿಗಾಗಿ ಎಂಬುದನ್ನು ಬಿಜೆಪಿ ಸಾರ್ವಜನಿಕರಲ್ಲಿ ಬಹಿರಂಗ ಪಡಿಸಬೇಕು ಎಂದು ಸಿಪಿಐಎಂ ತುಮಕೂರು ನಗರ ಸಮಿತಿ ಕಾರ್ಯದರ್ಶಿ ಎ. ಲೋಕೇಶ್ ಆಗ್ರಹಿಸಿದ್ದಾರೆ.ಈಗ ಮಾಲ್‌ನಲ್ಲಿ ಸಣ್ಣ ವ್ಯಾಪಾರಿಗಳಿಗೆ ಅವಕಾಶ ನೀಡಬೇಕು ಎಂದು ಅವರನ್ನು ಮುಂದೆ ಮಾಡಿಕೊಂಡು ಹೋರಾಟದ ನಾಟವಾಡುತ್ತಿರುವ ಬಿಜೆಪಿ ಈ ಹಿಂದೆ ಇದೇ ಜಾಗದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇದೇ ವಿಳೆದೆಲೆ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದಾಗ ನಮಗೆ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಹೋರಾಟ ನಡೆಸುತ್ತಿದ್ದಾಗ ತಲೆ ಹಾಕು ಮಲಗದ, ಸಣ್ಣ ಧ್ವನಿಯನ್ನು ಎತ್ತದ ಬಿಜೆಪಿಗೆ ಬಾಯಿ ಇರಲಿಲ್ಲಿವೇ ಅಥವಾ ಬಾಯಿಗೆ ಯಾರದರೂ ಬೀಗ ಜಡಿದಿದ್ದರೇ ಇದನ್ನು ಮೊದಲು ಬಿಜೆಪಿ ಉತ್ತರಿಸಬೇಕಾಗಿದೆ. ಸಣ್ಣ ವ್ಯಾಪಾರಿಗಳ ಜೀವನ ನಿರ್ವಹಣೆಗಾಗಿ ಅವಕಾಶ ಕಲ್ಪಿಸುವಂತೆ ಸಿಪಿಐ(ಎಂ)ಹೋರಾಟ ನಡೆಸಿದ ಪರಿಣಾಮ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಎಂದಿದ್ದಾರೆ.ಬಿಜೆಪಿ ಪಕ್ಷ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಹಲವಾರು ಯೋಜನೆಗಳಿಗೆ ಮಂಜೂರಾತಿ ನೀಡಿದೆ. ಜಾರಿ ಹಂತದಲ್ಲಿ ಮಾತ್ರ ವಿರೋಧಕ್ಕಾಗಿ ಮಾತ್ರವೇ ವಿರೋಧಿಸುತ್ತಿದೆಯೇ ಅಥವಾ ಅದರಲ್ಲಿ ಎಲ್ಲಾ ರೀತಿಯ ಪಾಲು ತನಗೆ ಸಿಗದೆ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕದ ಕಾರಣದಿಂದ ಇದನ್ನು ವಿರೋಧಿಸುತ್ತಿದೆಯೇ ಎಂದು ಜನತೆಗೆ ಅನುಮಾನ ಬರುತ್ತಿದೆ. ಆದ್ದರಿಂದ ಇದನ್ನು ಬಹಿರಂಗ ಪಡಿಸುವಂತೆ ಸಿಪಿಐ(ಎಂ) ನಗರ ಸಮಿತಿ ಆಗ್ರಹಿಸುತ್ತದೆ. ಇದರಿಂದ ಬಿಜೆಪಿಯ ಗೊಸುಂಬೆತನ ಬಯಲಾಗಿದೆ ಎಂದು ಸಿಪಿಐ(ಎಂ) ಪಕ್ಷ ಟೀಕಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''