30 ಬಯೋಟೆಕ್ನಾಲಜಿ ವಿದ್ಯಾರ್ಥಿಗಳು ಆಪ್ಟಮ್ ಕಂಪನಿ ಉದ್ಯೋಗಕ್ಕೆ ಆಯ್ಕೆ

KannadaprabhaNewsNetwork |  
Published : Jul 09, 2025, 12:18 AM IST
ಕ್ಯಾಪ್ಷನ6ಕೆಡಿವಿಜಿ35 ದಾವಣಗೆರೆ ಜಿಎಂಐಟಿ ಕಾಲೇಜು.....ಕ್ಯಾಪ್ಷನ6ಕೆಡಿವಿಜಿ36 ಟಿ.ಆರ್‌.ತೇಜಸ್ವಿ ಕಟ್ಟಿಮನಿ | Kannada Prabha

ಸಾರಾಂಶ

ಆರೋಗ್ಯ ಸೇವಾ ಕ್ಷೇತ್ರದ ಪ್ರತಿಷ್ಠಿತ ಕಂಪನಿ ಆಪ್ಟಮ್ ಇತ್ತೀಚೆಗೆ ಜಿಎಂ ಯುನಿವರ್ಸಿಟಿ (GMU) ಕಾಲೇಜು ಪರಿಸರದಲ್ಲಿ ಬಿಇ ಬಯೋಟೆಕ್ನಾಲಜಿ ವಿದ್ಯಾರ್ಥಿಗಳಿಗಾಗಿ ನೇಮಕಾತಿ ಅಭಿಯಾನ ನಡೆಸಿತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ 23 ವಿದ್ಯಾರ್ಥಿಗಳು ಮೆಡಿಕಲ್ ಕೋಡರ್ ಹುದ್ದೆಗೆ ವಾರ್ಷಿಕ ವೇತನ ₹4,07,320 ಗೆ ಆಯ್ಕೆಯಾಗಿದ್ದಾರೆ ಎಂದು ಜಿಎಂ ಯುನಿವರ್ಸಿಟಿಯ ತರಬೇತಿ ಮತ್ತು ಉದ್ಯೋಗ ಇಲಾಖೆ ನಿರ್ದೇಶಕ ಟಿ.ಆರ್‌. ತೇಜಸ್ವಿ ಕಟ್ಟಿಮನಿ ತಿಳಿಸಿದ್ದಾರೆ.

ದಾವಣಗೆರೆ: ಆರೋಗ್ಯ ಸೇವಾ ಕ್ಷೇತ್ರದ ಪ್ರತಿಷ್ಠಿತ ಕಂಪನಿ ಆಪ್ಟಮ್ ಇತ್ತೀಚೆಗೆ ಜಿಎಂ ಯುನಿವರ್ಸಿಟಿ (GMU) ಕಾಲೇಜು ಪರಿಸರದಲ್ಲಿ ಬಿಇ ಬಯೋಟೆಕ್ನಾಲಜಿ ವಿದ್ಯಾರ್ಥಿಗಳಿಗಾಗಿ ನೇಮಕಾತಿ ಅಭಿಯಾನ ನಡೆಸಿತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ 23 ವಿದ್ಯಾರ್ಥಿಗಳು ಮೆಡಿಕಲ್ ಕೋಡರ್ ಹುದ್ದೆಗೆ ವಾರ್ಷಿಕ ವೇತನ ₹4,07,320 ಗೆ ಆಯ್ಕೆಯಾಗಿದ್ದಾರೆ ಎಂದು ಜಿಎಂ ಯುನಿವರ್ಸಿಟಿಯ ತರಬೇತಿ ಮತ್ತು ಉದ್ಯೋಗ ಇಲಾಖೆ ನಿರ್ದೇಶಕ ಟಿ.ಆರ್‌. ತೇಜಸ್ವಿ ಕಟ್ಟಿಮನಿ ತಿಳಿಸಿದ್ದಾರೆ.

ಈ ಹಿಂದೆ ಕೇವಲ 3 ತಿಂಗಳ ಹಿಂದೆ ಆಪ್ಟಮ್ ಕಂಪನಿಯವರು ಇದೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಸಂದರ್ಶನ ನಡೆಸಿ 7 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅವರು ಭೇಟಿ ಕೊಟ್ಟು 23 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಆಪ್ಟಮ್‌ಗೆ ಆಯ್ಕೆಯಾಗಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 30ಕ್ಕೆ ಏರಿದೆ. ಇದರಿಂದಾಗಿ ಈ ವರ್ಷ ಜಿಎಂಐಟಿ ಯ ಒಟ್ಟು ಉದ್ಯೋಗ ಆಯ್ಕೆಗಳ ಸಂಖ್ಯೆ 1127ಕ್ಕೆ ತಲುಪಿದೆ. ಮಧ್ಯ ಕರ್ನಾಟಕದ ಪ್ರದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಕಲ್ಪಿಸಿರುವ ಸಂಸ್ಥೆಯಾಗಿ ಜಿಎಂಐಟಿ ಹೆಸರು ಗಳಿಸಿದೆ.

ಜಿಎಂ ವಿವಿ ಚಾನ್ಸೆಲರ್ ಜಿಎಂ ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಉಪಕುಲಪತಿ ಡಾ.ಎಚ್.ಡಿ. ಮಹೇಶಪ್ಪ, ಆಡಳಿತ ಮಂಡಳಿಯ ಪ್ರತಿನಿಧಿ ವೈ.ಯು. ಸುಭಾಷ್‌ ಚಂದ್ರ, ಜಿಎಂಐಟಿ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ , ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್, ಪ್ಲೇಸ್ಮೆಂಟ್ ಸಂಯೋಜಕ ಆಕಾಶ್ ಮತ್ತು ಉಪನ್ಯಾಸಕರ ತಂಡ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

- - -

-6ಕೆಡಿವಿಜಿ35: ದಾವಣಗೆರೆ ಜಿಎಂಐಟಿ ಕಾಲೇಜು

-6ಕೆಡಿವಿಜಿ36: ಟಿ.ಆರ್‌.ತೇಜಸ್ವಿ ಕಟ್ಟಿಮನಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ