ಗದಗ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಕೆಳಕಾಣಿಸಿದ ತೆರೆದ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ದಾಸ್ತಾನು ಮಾಡಿ ಮಾರಾಟ ಮಾಡುವ ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಆದೇಶಿಸಲಾಗಿದೆ.
ಗದಗ:ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಅಧಿಕೃತ ಲೈಸೆನ್ಸ್ ಪಡೆದುಕೊಂಡು ಕ್ರಮಬದ್ಧವಾಗಿ ನವೀಕರಣವಾಗಿರುವ ಪಟಾಕಿ ಲೈಸೆನ್ಸ್‌ದಾರರ ಅಂಗಡಿಗಳನ್ನು ಗಣೇಶ ಚತುರ್ಥಿಯ ಪ್ರಯುಕ್ತ ಆ. 27ರಿಂದ ಸೆಪ್ಟೆಂಬರ್ 7ರ ವರೆಗೆ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 19 ರಿಂದ 23ರ ವರೆಗೆ ಗದಗ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಕೆಳಕಾಣಿಸಿದ ತೆರೆದ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ದಾಸ್ತಾನು ಮಾಡಿ ಮಾರಾಟ ಮಾಡುವ ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಆದೇಶಿಸಲಾಗಿದೆ.
ಅನಧಿಕೃತ ಪಟಾಕಿ ಅಂಗಡಿಗಳಿಗೆ ವ್ಯಾಪಾರ ಮಾಡುವುದನ್ನು ನಿರ್ಬಂಧಿಸಿದೆ.ಲಕ್ಷ್ಮೇಶ್ವರ ತಾಲೂಕಿನ ಲಕ್ಷ್ಮೇಶ್ವರದ ಉಮಾ ಮಹಾವಿದ್ಯಾಲಯದ ಕ್ರೀಡಾಂಗಣ, ಶಿಗ್ಲಿಯ ಹೊಸ ಬಸ್ ಸ್ಟ್ಯಾಂಡ್ ಹತ್ತಿರ ಬಯಲು ಜಾಗೆ, ಶಿರಹಟ್ಟಿ ತಾಲೂಕಿನಲ್ಲಿ ಶಿರಹಟ್ಟಿಯ ಎಫ್.ಎಂ. ಡಬಾಲಿ ಹೈಸ್ಕೂಲ್ ಮೈದಾನ ಹಾಗೂ ಬೆಳ್ಳಟ್ಟಿಯ ಶ್ರೀಯೋಗಿ ವೇಮನ ಪ್ರೌಢಶಾಲೆ ಮೈದಾನ, ಮುಂಡರಗಿ ತಾಲೂಕಿನಲ್ಲಿ ಮುಂಡರಗಿ ತಾಲೂಕು ಕ್ರೀಡಾಂಗಣ, ರೋಣ ತಾಲೂಕಿನಲ್ಲಿ ರೋಣದ ಜಕ್ಕಲಿ ರಸ್ತೆಯಲ್ಲಿ ಬರುವ ಸೊಸೈಟಿಯ ಬಯಲು ಜಾಗೆ ಹಾಗೂ ಹೊಳೆಆಲೂರದ ಎ.ಪಿ.ಎಂ.ಸಿ. ಬಯಲು ಜಾಗೆ, ಗಜೇಂದ್ರಗಡ ತಾಲೂಕಿನಲ್ಲಿ ಗಜೇಂದ್ರಗಡದ ಸಂತೋಷ ಶ್ಯಾಮಸುಂದರ ಮಂತ್ರಿ ಇವರ ಖುಲ್ಲಾ ಜಾಗೆ, ನರೇಗಲ್‌ದ ಎ.ಪಿ.ಎಂ.ಸಿ ಗೋದಾಮು ಹತ್ತಿರ ಬಯಲು ಜಾಗೆ, ನರಗುಂದ ತಾಲೂಕಿನಲ್ಲಿ ನರಗುಂದ ದಂಡಾಪೂರದ ಶ್ರೀರಾಮ ಮಂದಿರದ ಪಕ್ಕ ಇರುವ ಸರ್ಕಾರಿ ಜಾಗೆ, ಗದಗ ತಾಲೂಕಿನಲ್ಲಿ ವಿ.ಡಿ.ಎಸ್.ಟಿ ಕಾಲೇಜು ಮೈದಾನ ಹಾಗೂ ಮುಳಗುಂದದ ಎಸ್.ಜೆ.ಜೆ.ಎಂ.ಸಂ ಪಪೂ ಕಾಲೇಜು ಮೈದಾನ ಈ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ದಾಸ್ತಾನು ಮಾಡಿ ಮಾರಾಟ ಮಾಡುವ ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.