ಅಂಗಾಂಗ ದಾನದಿಂದ ಹಲವರಿಗೆ ಜೀವದಾನ: ಆರ್.ಜಿ. ನಾಯ್ಕ

KannadaprabhaNewsNetwork |  
Published : Oct 01, 2026, 02:30 AM IST
ಫೋಟೋ : ೩೦ಕೆಎಂಟಿ_ಎಸ್‌ಇಪಿ_ಕೆಪಿ೧ : ಅಂಗಾಂಗ ದಾನ ಜಾಗೃತಿ ಕುರಿತು ಬಾಳಿಗಾ ವಾಣಿಜ್ಯ ಕಾಲೇಜ್ ನಲ್ಲಿ ಆರ್.ಜಿ.ನಾಯ್ಕ ಮಾತನಾಡಿದರು. ಡಾ.ಅರವಿಂದ ನಾಯಕ, ಪ್ರೊ.ವಿ.ಡಿ.ಭಟ್, ಪ್ರದೀಪ ನಾಯ್ಕ, ಸಂತೋಷ ಶಾನಭಾಗ ಇತರರು ಇದ್ದರು.  | Kannada Prabha

ಸಾರಾಂಶ

ದಾನಿಗಳು ಮುಂದೆ ಬಂದು ತಮ್ಮ ಮರಣದ ನಂತರ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅನೇಕ ಬಡ ರೋಗಿಗಳ ಬದುಕಿಗೆ ಆಶಾಕಿರಣವಾಗಬೇಕು. ಅಂಗಾಂಗ ದಾನ ಎಲ್ಲ ದಾನಗಳಲ್ಲಿ ಶ್ರೇಷ್ಠದಾನವಾಗಿದೆ.

ಕುಮಟಾ: ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ಹೆಚ್ಚೆಚ್ಚು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಅಪಘಾತ ಮೊದಲಾದವುಗಳಿಂದ ಅಂಗಾಂಗ ವೈಫಲ್ಯವೂ ಆಗುತ್ತಿದೆ. ದೇಶದಲ್ಲಿ ಪ್ರತಿನಿತ್ಯ ಐದು ಲಕ್ಷಕ್ಕೂ ಹೆಚ್ಚು ಅಂಗಾಂಗಗಳ ಬೇಡಿಕೆ ಇದ್ದು, ಶೇಕಡಾ ಮೂರರಷ್ಟನ್ನು ಕೂಡ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಅಂಗಾಂಗ ದಾನವೊಂದೇ ಪರಿಹಾರ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ. ನಾಯ್ಕ ಹೇಳಿದರು.

ಪಟ್ಟಣದ ಡಾ. ಬಾಳಿಗಾ ವಾಣಿಜ್ಯ ಕಾಲೇಜ್ನಿಲ್ಲಿ ಬುಧವಾರ ಎನ್‌ಎಸ್‌ಎಸ್ ಘಟಕ, ಆರೋಗ್ಯ ಇಲಾಖೆ, ಭಾರತಿ ಸಂಸ್ಥೆ, ರೆಡ್‌ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಭಾರತ ಸ್ಕೌಟ್ ಆ್ಯಂಡ್ ಗೈಡ್ಸ್ ಹಾಗೂ ಯುನಿಯನ್ ಆಶ್ರಯದಲ್ಲಿ ಎನ್‌ಎಸ್‌ಎಸ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಂಗಾಂಗ ದಾನದ ಮಹತ್ವದ ಜಾಗೃತಿ ಕಾರ್ಯಕ್ರಮ ಹಾಗೂ ಬೃಹತ್ ಅಂಗಾಂಗ ದಾನ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ದಾನಿಗಳು ಮುಂದೆ ಬಂದು ತಮ್ಮ ಮರಣದ ನಂತರ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅನೇಕ ಬಡ ರೋಗಿಗಳ ಬದುಕಿಗೆ ಆಶಾಕಿರಣವಾಗಬೇಕು. ಅಂಗಾಂಗ ದಾನ ಎಲ್ಲ ದಾನಗಳಲ್ಲಿ ಶ್ರೇಷ್ಠದಾನವಾಗಿದೆ ಎಂದರು.

ತಾಲೂಕಾಸ್ಪತ್ರೆ ಆಪ್ತ ಸಮಾಲೋಚಕ ಪ್ರದೀಪ ನಾಯ್ಕ ಮಾತನಾಡಿ, ಅಂಗಾಂಗಗಳ ಜತೆಗೆ ರಕ್ತದಾನವೂ ಅತಿ ಶ್ರೇಷ್ಠದಾನವಾಗಿದೆ. ರಕ್ತದ ಕೊರತೆಯಿಂದ ಆಸ್ಪತ್ರೆಗಳಲ್ಲಿ ತೀವ್ರ ಸಮಸ್ಯೆಯಾಗುತ್ತದೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದೆ ಬರಬೇಕು. ಸಮಾಜಮುಖಿಗಳಾಗಬೇಕು ಎಂದರು.

ಭಾರತಿ ಸಂಸ್ಥೆ ನಿರ್ದೇಶಕ ಪ್ರೊ. ವಿ.ಡಿ. ಭಟ್, ಭಾರತಿ ಸಂಸ್ಥೆಯು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಇಂಥ ಕಾರ್ಯಕ್ಕೆ ಸದಾ ಮುಂದಿರಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅರವಿಂದ ನಾಯಕ, ನಶ್ವರವಾದ ದೇಹ ಮಣ್ಣಾಗುವುದರ ಬದಲು ಅನೇಕ ರೋಗಿಗಳಿಗೆ ಜೀವದಾನವಾಗುವಂತಹ ಚಿಂತನೆ ಬೆಳೆಯಬೇಕು. ವಿದ್ಯಾರ್ಥಿಗಳು ಸಮಾಜ ಸೇವೆಯನ್ನು ತೊಡಗಿಸಿಕೊಳ್ಳಲು ಇಂಥ ಕಾರ್ಯಕ್ರಮಗಳು ಪ್ರೇರೇಪಣೆಯಾಗಿದೆ ಎಂದರು.

ಬಿಬಿಎ ವಿಭಾಗ ಮುಖ್ಯಸ್ಥ ಪ್ರೊ. ಸಂತೋಷ ಶಾನಭಾಗ, ಯುನಿಯನ್ ಕಾರ್ಯಾಧ್ಯಕ್ಷ ಡಾ. ಮಂಜುನಾಥ ವೆರ್ಣೆಕರ, ಯುನಿಯನ್ ಕಾರ್ಯದರ್ಶಿ ದಿಲೀಪ್ ಪಟೇಲ್, ಎನ್‌ಎಸ್‌ಎಸ್ ಕಾರ್ಯದರ್ಶಿ ತ್ರಯಂಬಕ ಹೆಗಡೆ, ನಿಶಾ ವೇದಿಕೆಯಲ್ಲಿದ್ದರು. ಕೆಲವು ವಿದ್ಯಾರ್ಥಿಗಳು ಅಂಗಾಂಗ ದಾನ ನೋಂದಣಿ ಮಾಡಿಸಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಒತ್ತಾಯ
ಡಾ. ಐ.ಆರ್. ಭಟ್ಟರ ಮಾನವೀಯ ಗುಣ ಸ್ಮರಿಸಿದ ಒಡನಾಡಿಗಳು