- ಸರಸ್ವತಿ ನಾಗರಾಜ್ ಅಭಿಪ್ರಾಯ। ಕಿವಿ ತಪಾಸಣಾ ಶಿಬಿರ, ಶ್ರವಣ ಯಂತ್ರ ಖರೀದಿಗೆ ಸಹಾಯಧನ ವಿತರಣೆ
ಅಂಗ ವೈಫಲ್ಯವು ಮನುಷ್ಯನ ಜೀವನಕ್ಕೆ ಶಾಪವಾಗಬಾರದು ಎಂದು ಸಾಗರ ಶ್ರೀಗಂಧ ಲಯನ್ಸ್ ಕ್ಲಬ್ ಅಧ್ಯಕ್ಷ ಸರಸ್ವತಿ ನಾಗರಾಜ್ ತಿಳಿಸಿದರು.
ಅವರು ಗಣಪತಿ ಸಮುದಾಯ ಭವನದಲ್ಲಿ ಶ್ರೀಗಂಧ ಲಯನ್ಸ್ ಕ್ಲಬ್ ಸಾಗರ ಮತ್ತು ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಿವಿ ತಪಾಸಣಾ ಶಿಬಿರ ಮತ್ತು ಶ್ರವಣ ಯಂತ್ರ ಖರೀದಿಗೆ ಸಹಾಯಧನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮನುಷ್ಯನಿಗೆ ದೇಹದ ಎಲ್ಲ ಅಂಗಗಳ ಆರೋಗ್ಯ ಅತ್ಯಂತ ಮುಖ್ಯ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತಿ ಮುಖ್ಯ. ಆರೋಗ್ಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಆರಂಭದಲ್ಲಿಯೇ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಮನುಷ್ಯನ ಅಂಗದ ವೈಫಲ್ಯವು ಜೀವನಕ್ಕೆ ಶಾಪವಾಗಬಾರದು ಎಂದು ಹೇಳಿದರು.
ಇತಿಹಾಸ ಪರಂಪರೆ ಉಳಿಸಿ ಅಭಿಯಾನದ ಸಂಚಾಲಕ ಬಿ.ಡಿ. ರವಿಕುಮಾರ್ ಮಾತನಾಡಿ, ಅಭಿಯಾನದಿಂದ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ವಿವಿಧ ಆರೋಗ್ಯ ಶಿಬಿರಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.
ಈಶ್ವರ್ ಮಲ್ಪೆ ಆರೋಗ್ಯ ಶಿಬಿರ ಮುಖ್ಯ ಸಂಚಾಲಕ ಲವ ಬಂಗೇರ ಮಾತನಾಡಿ, ಈಶ್ವರ್ ಮಲ್ಪೆ ತಂಡದ ಸೇವಾ ಕಾರ್ಯಗಳ ಉದ್ದೇಶ ಹಾಗೂ ವಿವಿಧ ಆರೋಗ್ಯ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಯಶೋಧ, ಮೇಜರ್ ನಾಗರಾಜ್, ವೆಂಕಟೇಶ್ ಚಂದಳ್ಳಿ, ಜಿತೇಂದ್ರ, ಹನುಮಂತಪ್ಪ ಉಪಸ್ಥಿತರಿದ್ದರು.
ಆನಂದಪುರದಲ್ಲಿ ಶ್ರೀಗಂಧ ಲಯನ್ಸ್ ಕ್ಲಬ್ ಸಾಗರ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಆನಂದಪುರ ಇವರ ಸಹಯೋಗದಲ್ಲಿ ಕಿವಿ ತಪಾಸಣಾ ಶಿಬಿರ ಮತ್ತು ಶ್ರವಣ ಯಂತ್ರ ಖರೀದಿಗೆ ಸಹಾಯಧನ ವಿತರಣೆ ಕಾರ್ಯಕ್ರಮನ್ನು ಶ್ರವಣ ತಜ್ಞ ಡಾ. ಪವನ್ ರೋಗಿಗಳನ್ನು ಪರೀಕ್ಷಿಸುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.