ಸಂವಿಧಾನ ಬದ್ಧ ಹಕ್ಕು ಪಡೆಯಲು ಸಂಘಟನೆ ಅವಶ್ಯ

KannadaprabhaNewsNetwork |  
Published : Aug 29, 2024, 12:45 AM IST
ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಸಂಘಟನೆ ಅವಶ್ಯ : ಡಾ.ಪ್ರಸಾದ್‌ಮೂರ್ತಿ | Kannada Prabha

ಸಾರಾಂಶ

ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘ ಜಿಲ್ಲಾ ಶಾಖೆ ಉದ್ಘಾಟನೆ, ಪಶುಸೇವಕ ಪ್ರಶಸ್ತಿ ಪ್ರದಾನ, ಸರ್ವ ಸದಸ್ಯರ ವಾರ್ಷಿಕ ಮಹಾಸಭೆಮತ್ತು ತಾಂತ್ರಿಕ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪಶುವೈದ್ಯಕೀಯ ಪರೀಕ್ಷಕರು ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಸಂಘಟನೆ ಅವಶ್ಯಕವಾಗಿದೆ ಎಂದು ಬೆಂಗಳೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಪರ ನಿರ್ದೇಶಕ ಡಾ.ಪ್ರಸಾದ್ ಮೂರ್ತಿ ಹೇಳಿದರು.

ನಗರದಲ್ಲಿ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘ ಜಿಲ್ಲಾ ಶಾಖೆ ಉದ್ಘಾಟನೆ, ಪಶುಸೇವಕ ಪ್ರಶಸ್ತಿ ಪ್ರದಾನ, ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ತಾಂತ್ರಿಕ ಕಾರ್ಯಾಗಾರದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.

ಬೇರೆ ಕಡೆಗಳೆಲ್ಲ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿದ್ದವು, ಅದನ್ನು ನೋಡಿ ನಮಗೆ ಬೇಸರವಾಗುತ್ತಿತು. ಇದಕ್ಕೆ ಕಾರಣ ನಮ್ಮಲ್ಲಿ ಸಂಘಟನೆ ಕೊರತೆ ಇತ್ತು. ನಮಗೆ ಒಂದು ಸಂಘಟಣೆಯ ಅವಶ್ಯಕತೆ ಇತ್ತು. ನನ್ನ ಅಧ್ಯಕ್ಷನಾಗಿ ಆಯ್ಕೆ ಮಾಡಿದಕ್ಕಾಗಿ ತಮಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಆಶಯದಂತೆ ನಮಗಿರುವ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಾಗುತ್ತದೆ. ಅದಕ್ಕಾಗಿ ಒಂದು ಸಂಘಟನೆ ಅವಶ್ಯಕವಾಗಿರುತ್ತದೆ ಎಂದರು. ಪಶುಪಾಲನಾ ಮತ್ತು ಪಶು ಇಲಾಖೆ ಉಪ ನಿರ್ದೇಶಕ ಡಾ.ಹನುಮೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್ ಶಿವಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಸಂಘ ಉದ್ಘಾಟನೆಯಾಗಿದ್ದು, ಸಂಘವನ್ನು ಬಲ ಪಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಮತ್ತು ವೃತ್ತಿ ಬಾಂಧವರಿಗೆ ಸನ್ಮಾನಿಸಲಾಯಿತು.

ಮೈಸೂರು ಜಂಟಿ ನಿರ್ದೆಶಕ ಡಾ.ಶಿವಣ್ಣ, ರಾಜ್ಯಾಧ್ಯಕ್ಷ ಡಾ.ಪಾಂಡುರಂಗ ಹೊಸಮನಿ, ಡಾ.ಜನಾರ್ಧನ್, ಡಾ. ನಟರಾಜು, ಡಾ.ಮೋಹನ್, ಡಾ.ಸಿದ್ದರಾಜು, ಡಾ.ಶಿವಕುಮಾರ್, ಡಾ.ನಾಗೇಂದ್ರಸ್ವಾಮಿ, ಡಾ.ಶಿವರಾಜು ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ