ಮುಂಡಗೋಡ: ದಲಿತ ವರ್ಗದ ಏಳ್ಗೆಗಾಗಿ ರಾಜ್ಯದಲ್ಲಿ ಮತ್ತಷ್ಟು ಮೀಸಲು ವಿಧಾನಸಭಾ ಕ್ಷೇತ್ರಗಳ ಅವಶ್ಯಕತೆ ಇದೆ. ಕ್ಷೇತ್ರ ವಿಂಗಡಣೆ ಸಂದರ್ಭದಲ್ಲಿ ಜಿಲ್ಲೆಗೆ ಒಂದು ಮೀಸಲು ಕ್ಷೇತ್ರ ನಿರ್ಮಾಣ ಮಾಡಬೇಕಿದ್ದು, ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ತಿಳಿಸಿದರು.
ಭಾನುವಾರ ಪಟ್ಟಣದ ನಗರಸಭಾ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ(ಚಂದ್ರಕಾಂತ ಕಾದ್ರೋಳ್ಳಿ)ಬಣ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿಸ್ವಾರ್ಥ ಮನೋಭಾವ ಹೊಂದಿದರೆ ಮಾತ್ರ ಸಮಾಜದ ಹಿತದೃಷ್ಟಿಯಿಂದ ಸಂಘಟನೆ ಬೆಳೆಸಲು ಸಾಧ್ಯ. ಜೀವನ ಪೂರ್ತಿ ಸಂಘಟನೆಗಾಗಿ ಮುಡಿಪಾಗಿಟ್ಟಿದ್ದು, ಮಕ್ಕಳನ್ನು ಓದಿಸಲು ಶಕ್ತಿ ಇಲ್ಲದವರು ನಮ್ಮ ಸಂಘಟನೆಗೆ ತಿಳಿಸಿದರೆ ಸ್ವತಃ ಸಂಘಟನೆಯೇ ಶಾಲೆಯ ಶುಲ್ಕಭರಿಸಲು ಬದ್ಧವಿದೆ ಎಂದರು.ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಜೀವನದಲ್ಲಿ ಸಮಾಜದ ಬಗ್ಗೆ ಅರಿತುಕೊಂಡವರಿಂದ ಮಾತ್ರ ಉತ್ತಮವಾಗಿ ಸಂಘಟನೆಯನ್ನು ಬೆಳೆಸಲು ಸಾಧ್ಯ. ನಮ್ಮ ಸಂವಿಧಾನದ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಅತ್ಯವಶ್ಯ ಎಂದರು. ಬಸವರಾಜ ಸಂಗಮೇಶ್ವರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ದಲಿತ, ನಿರ್ಗತಿಕ ಸೇರಿದಂತೆ ಶೋಷಣೆಗೊಳಗಾದ ಎಲ್ಲ ವರ್ಗದವರನ್ನು ಮೇಲಕ್ಕೆತ್ತುವ ದೃಷ್ಟಿಯಿಂದ ಕೆಲಸ ಮಾಡುವುದಾಗಿ ಹೇಳಿದರು. ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಜಗತ್ತೇ ಮೆಚ್ಚುವ ಸಂವಿಧಾನ ನೀಡಿದ ಕೀರ್ತಿ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ಸಲ್ಲುತ್ತದೆ. ದಲಿತ ವರ್ಗಕ್ಕೆ ಸಮರ್ಪಕ ಸರ್ಕಾರಿ ಸವಲತ್ತು ದೊರಕಿಸಿಕೊಡುವಲ್ಲಿ ಡಿಎಸ್ಎಸ್ ಪ್ರಮುಖ ಪಾತ್ರ ವಹಿಸಿದೆ ಎಂದರು.ಪ್ರಗತಿಪರ ರೈತ ಬಸವರಾಜ ನಡುವಿನಮನಿ ಮಾತನಾಡಿ, ಅಂಬೇಡ್ಕರ ಅವರ ಹೆಸರಿನಲ್ಲಿ ಕೆಲಸ ಮಾಡುವ ಬದಲು ಅವರ ತತ್ವ- ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದರು. ಬೆಳಗಾವಿ ವಿಭಾಗದ ಅಧ್ಯಕ್ಷರಾಗಿ ಕಲ್ಲಪ್ಪ ಕಾದ್ರೋಳ್ಳಿ ಅಧಿಕಾರ ಸ್ವೀಕರಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಜಿಲ್ಲಾಧ್ಯಕ್ಷ, ಬೆಳಗಾವಿ ವಿಭಾಗದ ಅಧ್ಯಕ್ಷರಾಗಿ ಕಲ್ಲಪ್ಪ ಕಾದ್ರೋಳ್ಳಿ, ರಾಜೋತ್ಸವ ಪ್ರಶಸ್ತಿ ವಿಜೇತ ಸಹದೇವ ನಡಗೇರಿ, ಅಶೋಕ ಚಲವಾದಿ, ನ್ಯಾಯವಾದಿ ರಾಘವೇಂದ್ರ ಮಳಗಿಕರ, ಧುರೀಣ ಕೃಷ್ಣ ಹಿರೇಹಳ್ಳಿ, ಎಚ್.ಎಂ. ನಾಯ್ಕ, ಆರ್.ಜಿ. ಬೆಳ್ಳನವರ, ಹಡಪದ ಸಮಾಜದ ರಾಜ್ಯಾಧ್ಯಕ್ಷ ಸಿದ್ದು ಹಡಪದ, ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ಮಹ್ಮದಗೌಸ ಮಖಾನದಾರ, ಧರ್ಮರಾಜ ನಡಗೇರಿ, ಕಲ್ಲನಗೌಡ, ಚಿದಾನಂದ ಹರಿಜನ, ಅನಿತಾ ಶೇಟ, ಎಸ್.ಡಿ. ರಾಯ್ಕರ, ನಾಗರಾಜ ಬೆಣ್ಣಿ, ರವಿ ಹಾವೇರಿ, ಸುರೇಶ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು. ವಿನಾಯಕ ಶೇಟ್ ನಿರೂಪಿಸಿದರು. ಲಕ್ಷ್ಮಣ ಮುಳೆ ಹಾಗೂ ಸಂಗಡಿಗರು ಕ್ರಾಂತಿ ಗೀತೆ ಹಾಡಿದರು. ನಾಗರಾಜ ಕಟ್ಟಿಮನಿ ಸ್ವಾಗತಿಸಿದರು. ವಿನಾಯಕ ಶೇಟ್ ವಂದಿಸಿದರು.