- ಕರ್ನಾಟಕ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ, ಜಿಲ್ಲಾ ಘಟಕದ ಪದಗ್ರಹಣ ಸಮಾರಂಭಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ನಡೆದ ಕರ್ನಾಟಕ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂಘಟನೆಗಳಲ್ಲಿ ಸ್ವಾರ್ಥ ನುಸುಳಿದರೆ, ಅಹಂಗೆ ಅವಕಾಶ ನೀಡಿದರೆ, ಒಳಗಿರುವವರ ಪ್ರತಿಷ್ಟೆಗೆ ವೇದಿಕೆಯಾದರೆ ಬಹುಕಾಲ ಉಳಿಗಾಲವಿಲ್ಲ. ಹೀಗಾಗಿ ಸಂಘಟನೆ ನೇತೃತ್ವದ ರೂವಾರಿಗಳು ನಿಸ್ವಾರ್ಥದಿಂದ ಕಾರ್ಯನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಟ್ಯಾಕ್ಸಿ ಸಂಘಟನೆ ಅಧ್ಯಕ್ಷರು, ಚಾಲಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ನೆರವಿಗೆ ಧಾವಿಸಬೇಕು ಎಂದು ಸಲಹೆ ಮಾಡಿದರು.
ನದಿಗಳು ಎಂದಿಗೂ ದೊಡ್ಡ ಪ್ರವಾಹದಿಂದ ಹುಟ್ಟುವುದಿಲ್ಲ. ನದಿಗಳ ಉಗಮ ಸ್ಥಾನವನ್ನು ಗಮನಿಸಿರ ಬಹುದು. ಸಣ್ಣ ಸಣ್ಣ ತೊರೆಗಳಿಂದ ಹೊಳೆಯಾಗಿ, ನದಿಗಳಾಗುತ್ತವೆ. ಆ ರೀತಿಯಲ್ಲಿ ಇದೀಗ ತೊರೆಗಳಾಗಿ ಉಗಮಿಸಿರುವ ಟ್ಯಾಕ್ಸಿ ಚಾಲಕರ ಸಂಘಟನೆಗೆ ಹಲವರ ಕೈಜೋಡಣೆಯಿಂದ ದೊಡ್ಡ ನದಿಗಳಾಗಿ ಸಾಮರ್ಥ್ಯ ವಿಸ್ತರಿಸಬೇಕು ಎಂದು ತಿಳಿಸಿದರು.ಪ್ರಸ್ತುತ ಟ್ಯಾಕ್ಸಿ ಚಾಲಕರೊಂದಿಗೆ ಸಂಕಷ್ಟದ ಸಮಯ ಹಾಗೂ ಒಳ್ಳೆಯ ಕೆಲಸಕ್ಕೆ ಮನೆಮಗನಂತೆ ಸದಾ ನಿಮ್ಮೊಂದಿಗೆ ನಿಲ್ಲಲು ಸಿದ್ಧ. ಸಂಘಟನೆ ಪದಾಧಿಕಾರಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಸಂಘಟನೆ ಬಲಿಷ್ಟಗೊಳಿಸುವಲ್ಲಿ ಹೆಜ್ಜೆ ಹಾಕುವ ಜೊತೆಗೆ ಸಾರಿಗೆ ಇಲಾಖೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಪ್ರಸ್ತುತ ರಾಜ್ಯದಲ್ಲಿ 270 ಕ್ಕೂ ಹೆಚ್ಚು ಸದಸ್ಯರು ನೋಂದಣಿಯಾಗಿದೆ. ಈ ಪೈಕಿ ಜಿಲ್ಲೆಯಲ್ಲಿ 110 ಚಾಲಕರು ವೇದಿಕೆಯಲ್ಲಿ ಸದಸ್ಯತ್ವ ಹೊಂದಿದ್ದಾರೆ. ಜಿಲ್ಲೆಯಿಂದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಮುಂದಿನ ದಿನಗಳಲ್ಲಿ ಮಂಡ್ಯ, ಶಿವ ಮೊಗ್ಗ ಜಿಲ್ಲೆಗಳಲ್ಲಿ ಸಂಘಟನೆಯ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ಹೇಳಿದರು.