ವಿಜಯಪುರ: ಜೆಡಿಎಸ್ ಕಾರ್ಯಕರ್ತರು, ಮುಖಂಡರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಮುಂದಿನ ಪಂಚಾಯಿತಿ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ಗೊಡ್ಲುಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಮುರಳೀಧರ್ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು, ಪ್ರಾದೇಶಿಕ ಪಕ್ಷವನ್ನು ಸದೃಢವಾಗಿ ಕಟ್ಟುವಂತಹ ಕಾರ್ಯವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕಿದೆ. ತಾಲ್ಲೂಕಿನಲ್ಲಿ ಸದೃಢವಾಗಿದ್ದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಮುಖಂಡರು, ಕಾರ್ಯಕರ್ತರಲ್ಲಿರುವ ಭಿನ್ನಾಭಿಪ್ರಾಯ ಬದಿಗಿರಿಸಿ ಪಕ್ಷವನ್ನು ಕಟ್ಟಬೇಕಾಗಿದೆ. ಪಂಚಾಯತಿ ಚುನಾವಣೆಗಳಲ್ಲಿ ಸ್ವಂತ ಶಕ್ತಿಯ ಮೇಲೆ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದರು.
ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಹೋಬಳಿ ಅಧ್ಯಕ್ಷ ಪುರ ಕೃಷ್ಣಪ್ಪ, ಮುಖಂಡರಾದ ಮುನಿರಾಜು, ಎಸ್.ಭೀಮರಾಜ್, ಕೋರಮಂಗಲ ವೀರಪ್ಪ, ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಕಲ್ಯಾಣ್ ಕುಮಾರ್ ಬಾಬು, ಯಲುವಹಳ್ಳಿ ಅಶೋಕ್, ಹೊಸಹಳ್ಳಿ ರವಿ, ದೊಡ್ಡಮುದ್ದೇನಹಳ್ಳಿ ಸತೀಶ್, ಸುರೇಶ್, ವಿ.ಎನ್.ಚನ್ನೇಗೌಡ, ವೆಂಕಟೇಶಪ್ಪ, ರವಿಕುಮಾರ್ ಹಾಜರಿದ್ದರು.(ಫೋಟೊ ಕ್ಯಾಪ್ಷನ್)
ವಿಜಯಪುರ ಹೋಬಳಿ ಹರಳೂರು ನಾಗೇನಹಳ್ಳಿಯಲ್ಲಿ ಆಯೋಜಿಸಿದ್ದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿದರು.