ಕುಕನೂರು: ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಹೋರಾಟಕ್ಕೆ ಸಂಘಟಿತರಾಗಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಡಾ. ಎಚ್.ಡಿ. ಪಾಟೀಲ್ ಹೇಳಿದರು.
ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ತಾಪಂ, ಜಿಪಂ ಚುನಾವಣೆಯಲ್ಲಿ ಕುರುಬ ಸಮಾಜಕ್ಕೆ ಪ್ರಾತಿನಿಧ್ಯ ಸಿಗಬೇಕು. ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ದೊರೆಯಬೇಕು. ಆರ್.ಜಿ.ಐ. ಹಂತದಲ್ಲಿ ಮೀಸಲಾತಿ ಪ್ರಕ್ರಿಯೆ ಇದೆ. ಇದನ್ನು ಸಾಕಾರಗೊಳಿಸಲು ಸಂಘಟನೆ, ಹೋರಾಟ ಮಾಡಬೇಕಿದೆ ಎಂದರು.
ರೈತರು ವಿಂಡ್ ಮಿಲ್ ಫ್ಯಾನ್‌ಗೆ, ಟ್ರಾನ್ಸ್‌ಮಿಷನ್ ಪವರ್ ಲೈನ್‌ಗೆ ಜಮೀನು ನೀಡಬೇಡಿ ಎಂದರು.ಉಪನ್ಯಾಸ ನೀಡಿದ ಎಂ.ಎಸ್. ಹಿರೇಮಠ ಅವರು, ಕನಕದಾಸರು ಕೀರ್ತನೆಗಳು, ವಚನಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಹಾಲುಮತ ಸಮಾಜದ ಕುಕನೂರು ಪಟ್ಟಣದ ಅಧ್ಯಕ್ಷ ಶೇಖಪ್ಪ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ರಾಘಾವಾನಂದ ಮಠದ ಶ್ರೀ ಆತ್ಮಾನಂದ ಭಾರತಿ ಸ್ವಾಮೀಜಿ, ವಿರೂಪಾಕ್ಷಯ್ಯ ಗುರುವಿನ ಮಠ, ಮಂಜುನಾಥಯ್ಯ ಗುರುವಿನ ಮಠ, ಸಿದ್ದಲಿಂಗಯ್ಯ, ದೊಡ್ಡಯ್ಯ ಗುರುವಿನಮಠ ಸಾನ್ನಿಧ್ಯ ವಹಿಸಿದ್ದರು. ಉಪತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿ, ಪಪಂ ಅಧ್ಯಕ್ಷೆ ಲೀಲಾವತಿ ಮೂಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಉದ್ಯಮಿ ಅನಿಲ್ ಆಚಾರ್, ಜಿಪಂ ಮಾಜಿ ಸದಸ್ಯೆ ಗಂಗಮ್ಮ ಗುಳಗಣ್ಣವರ, ಯಲಬುರ್ಗಾ ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪೊಪಾ, ಕುಕನೂರು ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಂಜುನಾಥ ಕಡೇಮನಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಪ್ರಮುಖರಾದ ರಾಮಣ್ಣ ಭಜಂತ್ರಿ, ಶಿವಣ್ಣ ರಾಯರೆಡ್ಡಿ, ಶ್ರೀನಿವಾಸ ತಿಮ್ಮಾಪುರ, ಶಿವಲೀಲಾ ದಳವಾಯಿ, ಮಹೇಶ ಲಕಮಾಪುರ, ಲಕ್ಷ್ಮಣ ಬೆದವಟ್ಟಿ, ಮಹೇಶ ಕವಲೂರು, ಪಪಂ ಸದಸ್ಯ ಸಿದ್ದು ಉಳ್ಳಾಗಡ್ಡಿ, ಎಸ್.ಎಸ್. ಕೊಪ್ಪದ, ವೀರೇಶ ಸಬರದ, ಹನುಮಂತಪ್ಪ ಭಂಗಿ, ರೇವಣಪ್ಪ ಹಟ್ಟಿ, ಸುರೇಶ್ ಶಿರೂರು, ಯಲ್ಲಪ್ಪ. ಕಲ್ಗೂಡಿ, ಪರಶುರಾಮ ಮೂಲಿಮನಿ, ಲಕ್ಷ್ಮಣ ಕಂಬಳಿ, ಅಶೋಕ ಜಗ್ಗಲ್, ಇತರರಿದ್ದರು. ಮುಖ್ಯ ಶಿಕ್ಷಕ ಸಂಗಪ್ಪ ಕಿಂದ್ರಿ ಪ್ರಾರ್ಥಿಸಿದರು. ಉಪನ್ಯಾಸಕ ಭರಮಪ್ಪ ಸಾಬಳ್ಳಿ ಕಾರ್ಯಕ್ರಮ ನಿರೂಪಿಸಿದರು.