ನಾಡು-ನುಡಿ ರಕ್ಷಣೆಗೆ ಸಂಘಟಿತರಾಗಿ: ಸುಜಾತ ಕೃಷ್ಣ

KannadaprabhaNewsNetwork |  
Published : Dec 02, 2025, 01:15 AM IST
12ಕೆಎಂಎನ್‌ಡಿ-3ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದಲ್ಲಿ ಕರವೇ ಜಿಲ್ಲಾ, ತಾಲೂಕು ಘಟಕದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ಕನ್ನಡಿಗರ ಹಿತಕಾಯುವ ಸರೋಜಿನಿ ಮಹಿಷಿ ವರದಿ ಜಾರಿಯಾಗದೇ ಆಗೆ ಉಳಿದೆ, ಆಡಳಿತ ಮಾಡುವ ಸರ್ಕಾರಗಳಿಗೆ ಎಚ್ಚರಿಸುವ ಅತ್ಯಗತ್ಯವಿದೆ, ಇಂದಿನ ಯುವಕರ ಮತ್ತು ಮುಂದಿನ ತಲೆಮಾರಿನ ಕನ್ನಡಿಗರ ಹಿತಕಾಯುವ ಜವಾಬ್ದಾರಿ ಸಂಘಟನೆಗಳ ಮೇಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವ ಸಮುದಾಯ ನಾಡು ನುಡಿ ರಕ್ಷಣೆಗೆ ಸ್ವಾಭಿಮಾನದಿಂದ ಸಂಘಟಿತರಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಗೌರವಾಧ್ಯಕ್ಷೆ ಸುಜಾತ ಕೃಷ್ಣ ಹೇಳಿದರು.

ತಾಲೂಕಿನ ದುದ್ದಹೊಬಳಿಯ ಹಾಡ್ಯ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಭೀಮ ಗೆಳೆಯರ ಬಳಗದಿಂದ ಆಯೋಜಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಹಾಗೂ ಕರವೇ ಸದಸ್ಯತ್ವ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡಭಾಷೆಯ ಮೇಲೆ ಅನ್ಯಭಾಷಿಗರ ದಾಳಿ, ದಬ್ಬಾಳಿಕೆ ಹೆಚ್ಚಾಗಿದೆ, ಕನ್ನಡಿಗರಿಗೆ ಕನ್ನಡ ನೆಲದಲ್ಲಿ ಉದ್ಯೋಗವಿಲ್ಲದಂತಾಗಿದೆ, ನೆರೆ ರಾಜ್ಯಗಳ ಕಂಪನಿಗಳು ನೆರೆರಾಜ್ಯದವರಿಗೆ ಉದ್ಯೋಗ ನೀಡುತ್ತಿದ್ದಾರೆ ಎಂದು ಎಚ್ಚರಿಸಿದರು.

ಕನ್ನಡಿಗರ ಹಿತಕಾಯುವ ಸರೋಜಿನಿ ಮಹಿಷಿ ವರದಿ ಜಾರಿಯಾಗದೇ ಆಗೆ ಉಳಿದೆ, ಆಡಳಿತ ಮಾಡುವ ಸರ್ಕಾರಗಳಿಗೆ ಎಚ್ಚರಿಸುವ ಅತ್ಯಗತ್ಯವಿದೆ, ಇಂದಿನ ಯುವಕರ ಮತ್ತು ಮುಂದಿನ ತಲೆಮಾರಿನ ಕನ್ನಡಿಗರ ಹಿತಕಾಯುವ ಜವಾಬ್ದಾರಿ ಸಂಘಟನೆಗಳ ಮೇಲಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದ ಅನೇಕ ಯುವಕರು ಕರವೇ ಸಂಘಟನೆಯ ಸದಸ್ಯತ್ವ ಸ್ವೀಕರಿಸಿದರು. ಬಳಿಕ ಮನರಂಜನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕರವೇ ಮಂಡ್ಯ ತಾಲೂಕು ಅಧ್ಯಕ್ಷ ಎಸ್.ಎನ್. ತೇಜುಕುಮಾರ್, ಮಹಿಳಾ ತಾಲೂಕು ಅಧ್ಯಕ್ಷೆ ಶೋಭಾ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಉದಯ್ ಕುಮಾರ್, ಎನ್ ಮಂಜುನಾಥ್ ಮತ್ತು ಭೀಮ ಗೆಳೆಯರ ಬಳಗದ ಕಾರ್ತಿಕ್ ಗೌಡ, ಪ್ರಶಾಂತ್, ಗುರುಪ್ರಸಾದ್, ಕೀರ್ತಿ, ಅಭಿಜಿತ್, ಶ್ರೀನಿಧಿ, ಕೆಂಪರಾಜು, ಸಚಿನ್, ಚಂದನ್, ಮನೋಹರ್ ಮತ್ತು ಹಾಡ್ಯ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಲವು ಕವಿಗಳು ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತ ಗೊಳಿಸಿದ್ದಾರೆ: ಪ್ರೊ.ಎಚ್.ಎಂ.ಕಲಾಶ್ರೀ

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನ ವತಿಯಿಂದ ಸೋಮವಾರ ಕೆ.ಟಿ.ಸೋಮಶೇಖರ್ ಅವರ ಸ್ಮರಣಾರ್ಥ ಎರಡನೇ ವರ್ಷದ ತಾಲೂಕು ಮಟ್ಟದ ಪುಸ್ತಕ ವಿಮರ್ಶೆ ಸ್ಪರ್ಧೆ ನಡೆಯಿತು.

ಕಾರ್ಯಕ್ರಮವನ್ನು ಮೈಸೂರಿನ ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಚ್.ಎಂ.ಕಲಾಶ್ರೀ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಪಂಪನಿಂದ ಕುವೆಂಪು ಆದಿಯಾಗಿ ಹಲವರು ಕೃತಿ, ಮಹಾಕಾವ್ಯಗಳು, ವಿಮರ್ಶೆಗಳು, ನಾಟಕಗಳು ಹಾಗೂ ಕಾದಂಬರಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು.

ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಬಹುಮಾನ ವಿತರಿಸಿ ಮಾತನಾಡಿ, ಸ್ಪರ್ಧಾತ್ಮಕ ಮನೋಭಾವ ರೂಡಿಸಿಕೊಂಡು ಕೇಂದ್ರ ಸರ್ಕಾರದ ಆಡಳಿತ ಸೇವೆಗಳಿಗೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಎಂ.ಎಚ್.ಚನ್ನೇಗೌಡ ವಿದ್ಯಾನಿಲಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂಚೂಣಿಯಲ್ಲಿ ಇರಬೇಕಾದರೆ ವಿದ್ಯಾರ್ಥಿಗಳು ಪುಸ್ತಕಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು ಎಂದರು.

ತೀರ್ಪುಗಾರರಾಗಿ ಮಳವಳ್ಳಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಕುಮಾರ್, ಶಾಂತಿ ಕಾಲೇಜು ಗ್ರಂಥಪಾಲಕ ಡಾ.ಎನ್.ರಾಘವೇಂದ್ರ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಎಂ.ಐ.ದರ್ಶನ್, ಎಚ್.ಕೆ.ವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಪಿ.ಕಿರಣ್, ಜಿ.ಸುರೇಂದ್ರ , ಗ್ರಂಥಪಾಲಕರಾದ ಆರ್.ಪಿ.ಚಂದನ, ಸಂದೀಪ್ ಆರ್.ಎಸ್., ಪ್ರದೀಪ್ ಎ.ವಿ, ಸ್ಮಿತಾ.ಸಿ, ಗಂಗಾಧರ್, ರಾಜೇಶ್, ಹರ್ಷ, ರೇಖಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌