ಪಾವಗಡ: ನಗರ ಹಾಗೂ ಗ್ರಾಮೀಣ ಸ್ನೇಹಿತರ ಕೂಟದ ವತಿಯಂದ ಭಾನುವಾರ ತಾಲೂಕಿನ ಪಳವಳ್ಳಿಯ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಮೀಪದ ಮೈದಾನದಲ್ಲಿ ಒಂದು ದಿನದ ಕ್ರಿಕೆಟ್ ಪಂದ್ಯಾವಳಿಯ ಕ್ರೀಡಾಕೂಟ ಹಮ್ಮಿಕೊಂಡಿದ್ದು, ರೊದ್ದಂ ಗಲ್ಲಿಬಾಯ್ಸ್ ತಂಡ ಪ್ರಥಮ ಹಾಗೂ ನಗರದ ತಂಡೊರ್ ರಾಕ್ಸ್ ಯುವಕರ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ನಗರ ಹಾಗೂ ಗ್ರಾಮೀಣ ಯುವಕರ ಸ್ನೇಹಿತರ ಕೂಟದಿಂದ ಪ್ರೆಂಡ್ಲಿ ಮ್ಯಾಚ್ ಕ್ರಿಕೆಟ್ ಟೂರ್ನಿಮೆಂಟ್ ಹಮ್ಮಿಕೊಳ್ಳಲಾಗಿತ್ತು. ಪಂದ್ಯಾವಳಿಯಲ್ಲಿ ಸುಮಾರು 10 ತಂಡಗಳು ಭಾಗವಹಿಸಿದ್ದವು. ನಿಯಮಾನುಸಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕ್ರಿಕೆಟ್ ಪಂದ್ಯಾವಳಿ ಸುಗಮವಾಗಿ ನಡೆದಿದ್ದು, ರೊದ್ದಂ ಗಲ್ಲಿಬಾಯ್ಸ್ ತಂಡ ಪ್ರಥಮ ಬಹುಮಾನದೊಂದಿಗೆ ಟ್ರೋಪಿ ಹಾಗೂ 3 ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಪಾವಗಡದ ತಂಡೋರ್ ರಾಕ್ಸ್ ಯುವಕರ ತಂಡ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಟ್ರೋಪಿ ಹಾಗೂ 2 ಸಾವಿರ ನಗದು ಪಡೆದಿದೆ.