ಜು.8ರಂದು ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜನೆ: ಕುಂದನಕುಪ್ಪೆ ಕುಮಾರ್

KannadaprabhaNewsNetwork | Published : Jul 17, 2024 12:54 AM

ಸಾರಾಂಶ

ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಸಮುಖ ಸೇವಾ ಟ್ರಸ್ಟ್ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಕೆಲಸ ಮಾಡುತ್ತಿದೆ. ಈ ಬಾರಿ ಕುಂದನಕುಪ್ಪೆ ಗ್ರಾಮದ ಶ್ರೀನಂಜುಂಡೇಶ್ವರ ಕಾಂಪ್ಲೆಕ್ಸ್ ಆವರಣದಲ್ಲಿ ನೇತ್ರ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ ಗ್ರಾಮದಲ್ಲಿ ಜು.8ರಂದು ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕುಂದನಕುಪ್ಪೆ ಕುಮಾರ್ ಮಂಗಳವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಶಂಕರ್ ಕಣ್ಣಿನ ಆಸ್ಪತ್ರೆ, ಸುಮುಖ ಸೇವಾ ಟ್ರಸ್ಟ್‌ನಿಂದ ಶಿಬಿರ ನಡೆಯಲಿದೆ. ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಸಮುಖ ಸೇವಾ ಟ್ರಸ್ಟ್ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಕೆಲಸ ಮಾಡುತ್ತಿದೆ. ಈ ಬಾರಿ ಕುಂದನಕುಪ್ಪೆ ಗ್ರಾಮದ ಶ್ರೀನಂಜುಂಡೇಶ್ವರ ಕಾಂಪ್ಲೆಕ್ಸ್ ಆವರಣದಲ್ಲಿ ನೇತ್ರ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ತಜ್ಞ ವೈದ್ಯರ ತಂಡ ಶಿಬಿರದಲ್ಲಿ ಅಂದತ್ವ ಉಳ್ಳ ಜನರಿಗೆ ಸ್ಥಳದಲ್ಲಿಯೇ ತಪಾಸಣೆ ನಡೆಸಿದ ನಂತರ ಶಂಕರ್ ಕಣ್ಣಿನ ಆಸ್ಪತ್ರೆಗೆ ಕರೆದೊಯ್ದು ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಿ.ಕೆ.ಸತೀಶ್, ಪೊಲೀಸ್ ಸಿದ್ದರಾಜು ಹಾಗೂ ಪದಾಧಿಕಾರಿಗಳು ಇದ್ದರು.ಜು.೨೦ಕ್ಕೆ ಜಿಲ್ಲಾ ಮಟ್ಟದ ಗಾಳಿಪಟ ಹಾರಾಟ ಸ್ಪರ್ಧೆ

ಮಂಡ್ಯ:ಭಾರತ ಸೇವಾ ದಳ ಜಿಲ್ಲಾ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸೇಂಟ್ ಜಾನ್ ಅಂಬುಲೆನ್ಸ್ (ಇಂಡಿಯಾ) ಮತ್ತು ಚುಟುಕು ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ೨೭ನೇ ವರ್ಷದ ಜಿಲ್ಲಾ ಮಟ್ಟದ ಗಾಳಿಪಟ ಹಾರಾಟ ಸ್ಪರ್ಧೆಯನ್ನು ಜು.೨೦ರಂದು ಬೆಳಗ್ಗೆ ೧೦.೩೦ಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಅತ್ಯುತ್ತಮ ಪಟಕ್ಕೆ ಈ ಬಾರಿ ವಿಶೇಷವಾಗಿ ಮಾಜಿ ಸಚಿವ ಎಸ್.ಡಿ.ಜಯರಾಂ, ಡಾ.ಎಂ.ಎಚ್.ಅಂಬರೀಶ್, ಡಾ.ಕೆ.ಎಸ್. ನಾರಾಯಣಸ್ವಾಮಿ ಮತ್ತು ಡಾ.ವೈ.ಎಸ್. ರಾಮರಾವ್ ಹೆಸರಿನಲ್ಲಿ ಪ್ರತಿಯೊಂದು ವಿಭಾಗಕ್ಕೂ ಪಾರಿತೋಷಕ ನೀಡಲಾಗುವುದು ಎಂದು ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಜಿ.ವಿ.ನಾಗರಾಜು ತಿಳಿಸಿದ್ದಾರೆ.ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಮತ್ತು ವಿಜೇತರಿಗೆ ಬಹುಮಾನವನ್ನು ಕೊಡಲಾಗುವುದು. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕಿರಿಯ ವಿಭಾಗ, ಎಂಟನೇ ತರಗತಿಯಿಂದ ಪಿಯುಸಿವರೆಗೆ ಹಿರಿಯ ವಿಭಾಗ, ಮುಕ್ತ ವಿಭಾಗದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿಯೊಂದು ವಿಭಾಗಕ್ಕೂ ೩ ಬಹುಮಾನಗಳನ್ನು ವಿಶೇಷ ಪಟಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಅನೇಕ ಸಮಾಧಾನಕರ ಬಹುಮಾನಗಳನ್ನು ಕೊಡಲಾಗುತ್ತದೆ ಎಂದು ಹೇಳಿದ್ದಾರೆ.ಹೆಚ್ಚಿನ ವಿವರಗಳಿಗೆ ಜಿ.ವಿ.ನಾಗರಾಜು, ಕಾರ್ಯದರ್ಶಿ, ಮೊ.:೦೪೪೮೧೦೬೫೬೧, ಸಿ.ಎಸ್.ಗಣೇಶ್, ಭಾರತ ಸೇವಾದಳ, ಜಿಲ್ಲಾ ಸಂಘಟಕರು ಮೊ: ೭೮೯೯೩೭೯೧೧೪ ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

19ರಿಂದ ಆರಾಧ್ಯ ಜನಾಂಗಕ್ಕೆ ತರಬೇತಿ ಕಾರ್ಯಾಗಾರ

ಮಳವಳ್ಳಿ: ಪಟ್ಟಣದ ಕನಕಪುರ ರಸ್ತೆಯ ಸಿದ್ಧಿ ವಿನಾಯಕ ಹಾಗೂ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಜು.19ರಿಂದ ಆರಾಧ್ಯ ಜನಾಂಗದವರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಆರಾಧ್ಯ ಜೋತಿಷ್ಯ ಮತ್ತು ಪುರೋಹಿತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಂಚೆದೊಡ್ಡಿ ಎಸ್.ನಾಗಭೂಷಣಾರಾಧ್ಯ ತಿಳಿಸಿದ್ದಾರೆ.ಜು.19ರಿಂದ ಪ್ರತಿ ಶನಿವಾರ ನಡೆಯಲಿರುವ ಕಾರ್ಯಾಗಾರದಲ್ಲಿ ಆರಾಧ್ಯ ಜನಾಂಗದವರಿಗೆ ಜೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ತಂಬೂಲಶಾಸ್ತ್ರ, ಪ್ರಶ್ನಶಾಸ್ತ್ರದ ತರಬೇತಿ ನೀಡಲಾಗುವುದು. ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Share this article