ನ್ಯಾಯಾಲಯಕ್ಕೆ ನಮ್ಮ ಕ್ಲಿನಿಕ್ ಕಟ್ಟಡ ಸಿದ್ಧ: ಶಾಸಕ ನೇಮರಾಜ ನಾಯ್ಕ್

KannadaprabhaNewsNetwork |  
Published : Aug 20, 2025, 01:30 AM IST
ಕೊಟ್ಟೂರಿನ ತಾಪಂ ಕಾರ್ಯಾಲಯದಲ್ಲಿ ನಡೆದ ವಕೀಲರ ಸಭೆಯಲ್ಲಿ ಶಾಸಕ ಕೆ ನೇಮರಾಜ ನಾಯ್ಕ್ ಮಾತನಾಡಿದರು  | Kannada Prabha

ಸಾರಾಂಶ

ಕೊಟ್ಟೂರು ಪಟ್ಟಣದಲ್ಲಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪ್ರಾರಂಭಿಸಲು ಪಟ್ಟಣದಲ್ಲಿನ ನಮ್ಮ ಕ್ಲಿನಿಕ್ ಪಟ್ಟಣ ಪಂಚಾಯಿತಿ ಹಿಂಭಾಗದಲ್ಲಿನ ಕಟ್ಟಡವನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲು ಸಂಬಂಧಪಟ್ಟವರಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಕೊಟ್ಟೂರು ಪಟ್ಟಣದಲ್ಲಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪ್ರಾರಂಭಿಸಲು ಪಟ್ಟಣದಲ್ಲಿನ ನಮ್ಮ ಕ್ಲಿನಿಕ್ ಪಟ್ಟಣ ಪಂಚಾಯಿತಿ ಹಿಂಭಾಗದಲ್ಲಿನ ಕಟ್ಟಡವನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲು ಸಂಬಂಧಪಟ್ಟವರಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಕೆ. ನೇಮರಾಜ ನಾಯ್ಕ್ ಹೇಳಿದರು.

ಇಲ್ಲಿನ ತಾಪಂ ಕಾರ್ಯಾಲಯದಲ್ಲಿ ತಾಲೂಕು ವಕೀಲರ ನ್ಯಾಯಾಲಯ ಹೋರಾಟ ಸಮಿತಿಯವರೊಂದಿಗೆ ಸಭೆ ನಡೆಸಿ ನಮ್ಮ ಕ್ಲಿನಿಕ್ ಕಟ್ಟಡ ನ್ಯಾಯಾಲಯವನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲು ಸೂಕ್ತ ಕಟ್ಟಡವಾಗಿದೆ. ಇದನ್ನೆ ನೀಡುವಂತೆ ವಕೀಲರ ಸಂಘದವರು ಶಾಸಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಕ್ಕೆ ಪೂರಕವಾಗಿ ಉತ್ತರಿಸಿದ ಶಾಸಕರು ನ್ಯಾಯಾಲಯ ಪ್ರಾರಂಭಿಸಲು ಎಲ್ಲಾ ಬಗೆಯ ಸಹಕಾರ ನೀಡಬೇಕಿದ್ದು, ಈ ಕಾರಣಕ್ಕಾಗಿ ನಮ್ಮ ಕ್ಲಿನಿಕ್ ಕಟ್ಟಡವನ್ನು ಪಟ್ಟಣದಲ್ಲಿನ ಮತ್ತೊಂದು ಕಟ್ಟಡಕ್ಕೆ ಈ ನಿಟ್ಟಿನಲ್ಲಿ ಕೊಡಲೇ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ಟಿಎಚ್ ಓ ಡಾ. ಪ್ರದೀಪ್ ಕುಮಾರ್‌ಗೆ ಶಾಸಕರು ಸೂಚಿಸಿದರು.

ನಮ್ಮ ಕ್ಲಿನಿಕ್‌ನ್ನು ಕೊಟ್ಟೂರಿನ ಮಡ್ಡೆರ ಓಣಿಯಲ್ಲಿನ ಹಳೆಯ ಗ್ರಾಮಲೆಕ್ಕಧಿಕಾರಿಗಳ ಕಚೇರಿ ಕಟ್ಟಡಕ್ಕೆ ವರ್ಗಾಯಿಸಲು ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು. ಕೊಟ್ಟೂರು ಪಟ್ಟಣಕ್ಕೆ ಮತ್ತೊಂದು ನಮ ಕ್ಲಿನಿಕ್ ಆರಂಭಿಸಲು ಮಂಜೂರಾತಿ ದೂರಕಿದ್ದು, ಈ ಸಂಬಂಧ ಕಟ್ಟಡವನ್ನು ದೂರಕಿಸಿ ಕೊಡುವಂತೆ ಟಿಎಚ್‌ಓ ಮನವಿಗೆ ಸ್ಪಂದಿಸಿದ ಶಾಸಕರು ಅದಕ್ಕೂ ಸಹ ಸೂಕ್ತ ಕಟ್ಟಡ ದೂರಕಿಸಿ ಕೊಡಲು ಮುಂದಾಗುವುದಾಗಿ ಭರವಸೆ ನೀಡಿದರು.

ನ್ಯಾಯಾಲಯ ಶಾಶ್ವತ ಕಟ್ಟಡಕ್ಕೆ ಬೇಕಿರುವ ಅಂದಾಜು 3 ಎಕರೆಗೆ ವಿಸ್ತ್ರೀರ್ಣದ ಸರ್ಕಾರದ ಕಂದಾಯ ವ್ಯಾಪ್ತಿಗೆ ಬರುವ ಪಟ್ಟಣದ ಹೊರ ವಲಯದ ವಿಶಾಲ ನಿವೇಶನ ಗುರುತಿಸಲಾಗುವುದು ಎಂದರು.

ತಾಲೂಕು ವಕೀಲರ ಸಂಘದ ವತಿಯಿಂದ ಶಾಸಕ ಕೆ. ನೇಮರಾಜ ನಾಯ್ಕ್ ರನ್ನು ಅಧ್ಯಕ್ಷ ಎಂ. ಗುರುಸಿದ್ದನಗೌಡ , ಹಿರಿಯ ವಕೀಲ ಹೋಮ ಪಂಡಿತಾರಾಧ್ಯ ಮತ್ತಿತರ ಸಂಘದ ವಕೀಲರು ಸನ್ಮಾನಿಸಿ ಅಭಿನಂದಿಸಿದರು.

ತಹಶೀಲ್ದಾರ ಅಮರೇಶ್ ಜಿ.ಕೆ., ತಾಪಂ ಇಒ ಡಾ. ಆನಂದಕುಮಾರ್, ಎಡಿ ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ, ಎಪಿಎಂಸಿ ಮಾಜಿ ಅಧ್ಯಕ್ಷ ಜಗದೀಶ್ ಕುಮಾರ್, ವಕೀಲರಾದ ಬಾವಿಕಟ್ಟಿ ಶಿವಾನಂದ, ಟಿ ಹನುಮಂತಪ್ಪ, ಪಪಂ ಮುಖ್ಯಧಿಕಾರಿ ಎ. ನಸರುಲ್ಲಾ, ಟಿ.ಎಂ. ಸೋಮಯ್ಯ, ಲಿಂಗರಾಜ, ಪ್ರಕಾಶ್, ಸಿದ್ದೇಶ್, ಕಾಳಚಾರಿ ಪ್ರಭಾಕರ್, ನಾಗನಗೌಡ ,ನಾಗರಾಜ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ