ನಮ್ಮ ಸಂವಿಧಾನ ನಮ್ಮ ಹೆಮ್ಮೆ: ಪ್ರಶಾಂತ್ ಅಭಿಮತ

KannadaprabhaNewsNetwork | Published : Nov 28, 2024 12:30 AM

ಸಾರಾಂಶ

Our Constitution is our pride: Prashant Abhimat

-ಕಡ್ಲೇಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಸಂವಿಧಾನ ದಿನೋತ್ಸವ

-----

ಕನ್ನಡಪ್ರಭ ವಾರ್ತೆ ಸಿರಿಗೆರೆ

ಭಾರತದ ಸಂವಿಧಾನ ಇಡೀ ವಿಶ್ವದಲ್ಲಿಯೇ ಆದರ್ಶಪ್ರಾಯವಾಗಿದೆ. ಸಂವಿಧಾನದಲ್ಲಿರುವ ಮೌಲ್ಯಗಳನ್ನು ಮಕ್ಕಳಲ್ಲಿ ಜಾಗೃತಿಗೊಳಿಸುವ ಕಾರ್ಯವಾಗಬೇಕಿದೆ. ಸಂವಿಧಾನದ ಆಶೋತ್ತರಗಳು ಸರ್ವರಿಗೂ ತಿಳಿಯುವಂತಾಗಲಿ ಎನ್ನುವುದೇ ಸಂವಿಧಾನ ದಿನದ ಆಶಯ ಎಂದು ಉಪ ನಿರ್ದೇಶಕರ ಕಚೇರಿಯ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಪ್ರಶಾಂತ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ಪ್ರೌಢಶಾಲೆಯಿಂದ ಆಯೋಜಿಸಿದ್ದ ಸಂವಿಧಾನೋತ್ಸವ ಕಾರ್ಯಕ್ರಮವನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು

ಪ್ರತಿವರ್ಷ ನ.26 ರಂದು ಭಾರತದ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಕಡ್ಲೆಗುದ್ದು ಗ್ರಾಮದಲ್ಲಿ ಪ್ರಭಾತ್ ಪೇರಿ ತೆರಳುವುದರ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಈ ದಿನದ ಪ್ರಾಮುಖ್ಯತೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗಿದೆ ಎಂದರು.

ಡಯಟ್ ಉಪನ್ಯಾಸಕ ಬಸವರಾಜ್, ನ.26, ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. 1949 ರ ನ.26 ರಂದು ನಮ್ಮ ಸಂವಿಧಾನ ಅಳವಡಿಸಿಕೊಳ್ಳಲಾಯಿತು. ಆದರೆ, ಅನುಷ್ಠಾನಕ್ಕೆ ಬಂದಿದ್ದು 1950ರ ಜನವರಿ 26 ರಂದು. ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂದರು.

ಮುಖ್ಯ ಶಿಕ್ಷಕ ಡಾ ಮಹೇಶ್ ಮಾತನಾಡಿ, ನಮ್ಮ ಸಂವಿಧಾನ ದೇಶದ ಪ್ರಜೆಗಳಿಗೆ ಹಕ್ಕುಗಳು ಹಾಗೂ ಕರ್ತವ್ಯಗಳನ್ನೂ ನೀಡಿ ಸಶಕ್ತಗೊಳಿಸಿದೆ.

ಸರ್ವರಿಗೂ ಸಮಾನತೆಯೊದಗಿಸಿದೆ. ನಾವುಗಳು ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ನಾವುಗಳು ನಮ್ಮ ಕರ್ತವ್ಯಗಳನ್ನು ದೇಶದ ಪ್ರಜೆಗಳಾಗಿ ನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ವಶಿಕ್ಷಣ ಅಭಿಯಾನ ನಿರ್ದೇಶಕ ನಾಗರಾಜ್ ಮೇಲ್ವಿಚಾರಕ ಶಿವಗಂಗಮ್ಮ ಮುಖ್ಯ ಶಿಕ್ಷಕಿ ಉಷಾ, ಶಿಕ್ಷಕ ಮಂಜುನಾಥ್ ನಾಗರಾಜ್, ನಟರಾಜ್, ಕರಿಬಸಪ್ಪ, ಚನ್ನಕೇಶವ, ಜಗದೀಶ್ ಹಾಗೂ ಸುಜಾತ ಮತ್ತು ಪೋಷಕರು ಇದ್ದರು----

ಫೋಟೊ: ಸಿರಿಗೆರೆ ಸಮೀಪದ ಕಡ್ಲೇಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಸಂವಿಧಾನ ದಿನೋತ್ಸವ ಆಚರಿಸಲಾಯಿತು.

Share this article