ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿ ಪುರಾತನವಾಗಿದ್ದು, ಅದು ಮಹಿಳಾಮಯವಾಗಿದೆ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿ ಪುರಾತನವಾಗಿದ್ದು, ಅದು ಮಹಿಳಾಮಯವಾಗಿದೆ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.ಪಟ್ಟಣದ ಸಿಟಿಇ ಸಂಸ್ಥೆಯ ಎ.ಎ.ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೇದ ಕಾಲದಿಂದಲೂ ಮಹಿಳೆಯರು ಶಕ್ತಿ ಸ್ವರೂಪಿಣಿಯರಾಗಿ ಸಮಾಜದ ಪ್ರಗತಿಗೆ ಆಧಾರಸ್ತಂಭರಾಗಿದ್ದಾರೆ. ಆದರೆ, ಪ್ರಸ್ತುತ ಕಾಲದಲ್ಲಿ ವಸಾಹತೀಕರಣದ ಪ್ರಭಾವದಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯುಂಟಾಗುತ್ತಿದೆ. ಇದರ ಬಗ್ಗೆ ನಾವು ಚಿಂತನೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಮಹಿಳಾ ಪರಂಪರೆ ನಮ್ಮ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ಹಿರಿಯರ ಆದರ್ಶಗಳನ್ನು ನಾವು ಪಾಲಿಸಬೇಕು. ಇಂದಿನ ಕಾಲದಲ್ಲಿ ಪರಂಪರೆಯನ್ನು ಕಾಪಾಡುವ ಜವಾಬ್ದಾರಿ ಮಹಿಳೆಯರ ಮೇಲಿದೆ. ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಆತ್ಮವಿಶ್ವಾಸದೊಂದಿಗೆ ಮುಂದುವರಿಯಬೇಕು ಎಂದರು.ತೃಪ್ತಿ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಕಿವಿಮಾತು ಹೇಳಿದರು.ಮಂಡಳಿ ಜಂಟಿ ಕಾರ್ಯದರ್ಶಿ ಡಾ.ಮಿಥುನ್ ದೇಶಪಾಂಡೆ, ಪ್ರಾಚಾರ್ಯ ಡಾ.ಎಸ್.ಸಿ.ಜಕಾತಿ, ಭಾಗ್ಯಶ್ರೀ ಕುಲಕರ್ಣಿ, ಶೋಭಾ ಮಾಂಜರೇಕರ, ನೀಲಂ ಅಡಕೆ, ಕೀರ್ತಿ ಕುಲಕರ್ಣಿ, ಸ್ವಾತಿ ದೇಶಪಾಂಡೆ, ಗೌರಿ ಮಾಂಜರೇಕರ, ರೇಖಾ ಕುಲಕರ್ಣಿ, ಗಾಯತ್ರಿ ಪಟ್ಲಿ ಉಪಸ್ಥಿತರಿದ್ದರು. ಶೃತಿ ಪಾಟೀಲ ಸ್ವಾಗತಿಸಿದರು. ಪೂಜಾ ಬಾಣಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಖೋತ ಹಾಗೂ ಪ್ರಿಯಾಂಕಾ ಹಿರೇಮಠ ವಂದಿಸಿದರು. ರೋಹಿಣಿ ಕಂಬಾರ, ಕಸ್ತೂರಿ ನಿಡೋಣಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.