ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯಲ್ಲಿ ಒಂದು ಅವಲೋಕನ ಮಾಡಬೇಕು. ಅದೇನೇ ನಿರ್ದೇಶನ ಬಂದರೂ ಬಿಜೆಪಿಯಲ್ಲಿ ಉಚ್ಛಾಟನೆ ಹಂತಕ್ಕೆ ಹೋಗಿರೋದನ್ನು ನೋಡಿದ್ದೀನಿ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಏನಿದೆ ಅಂತ ನಮ್ಮ ಮುಂದೆ ಪುನರುಚ್ಛರಣೆ ಮಾಡಿ ತೋರಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಂಡರು.
ರಾಷ್ಟ್ರಪತಿ ಆಡಳಿತ ಹೇರಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಆಕ್ರೋಶ ವ್ಯಕ್ತಪಡಿಸಿ, ಅಲ್ಲಾ ರೀ ಹಿಂದಿನ ಐದು ವರ್ಷದಲ್ಲಿ ಬಿಜೆಪಿ ಸರ್ಕಾರ ಹೇಗೆ ಆಡಳಿತ ನಡೆಸಿತ್ತು ಅನ್ನೋದು ಗೊತ್ತಿದೆ. ನಮ್ಮ ಆಡಳಿತ ನಿಂತು ಹೋಗಿಲ್ಲ, ಆಡಳಿತ ವೇಗದಲ್ಲಿದಲ್ಲಿ ನಡೆಯುತ್ತಿದೆ. ನಿಂತಿದ್ದು ವಿರೋಧ ಪಕ್ಷದ ಚಟುವಟಿಕೆ. ಅದು ಅವರಿಗೆ ಆಗುತ್ತಿಲ್ಲ. ಸರ್ಕಾರದ ಲೋಪಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುವಲ್ಲಿ ವಿರೋಧ ಪಕ್ಷ ಶಕ್ತಿಹೀನ ಆಗಿದೆ. ರಾಜ್ಯದಲ್ಲಿ ವಿರೋಧ ಪಕ್ಷ ಎಲ್ಲಿದೆ, ಬಿಜೆಪಿ ಮನೆಯೊಂದು ಐದು ಬಾಗಿಲಾಗಿದೆ. ಬಿಜೆಪಿಯವರು ತಮ್ಮ ಹುಳುಕು ಮುಚ್ಚಿಕೊಳ್ಳಲು ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರಷ್ಟೇ ಎಂದರು.ಅಧಿಕಾರ ಹಸ್ತಾಂತರ ಮಾಡದಿದ್ದರೆ ಡಿಕೆಶಿ ಬಿಜೆಪಿಗೆ ಹೋಗ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸವದಿ ಉತ್ತರಿಸುವಾಗ ಮಧ್ಯ ಪ್ರವೇಶಿಸಿದ ಎಚ್.ಕೆ. ಪಾಟೀಲ, ಹುಚ್ಚು ತನದ ಮಾತು. ಅನಾವಶ್ಯಕವಾಗಿ ಉದ್ಭ ಮಾಡುತ್ತಿದ್ದಾರೆ. ನಮ್ಮ ಯಾವ ಶಾಸಕ, ಕಾರ್ಯಕರ್ತ ಹೇಳಿದ್ದಾನೆ ಅನ್ನೋದು ಸಾಕ್ಷಿ ನೀಡಿ, ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ ಎಂದ ಸ್ವತಃ ಡಿಕೆಶಿ ಅವರೇ ಹೇಳಿದ್ದಾರೆ. ಉಸಿರಾಡುವರಗೂ ಕಾಂಗ್ರೆಸ್ ನಲ್ಲಿ ಇರ್ತಿನಿ ಎಂದು ಹೇಳಿದ್ದಾರೆ.ಇನ್ನು ಯಾರ ಹೇಳಬೇಕು ಹೇಳಿ, ಬೇರೆಯವರ ಮಾತಿಗೆ ಬೆಲೆ ಕೊಡಬೇಡಿ ಎಂದು ಸಲಹೆ ನೀಡಿದರು.