ನಮ್ಮ ನಡೆ ಮತಗಟ್ಟೆ ಕಡೆ ಮತದಾನ ಜಾಗೃತಿಗೆ ಚಾಲನೆ

KannadaprabhaNewsNetwork |  
Published : May 07, 2024, 01:08 AM IST
29ಸಿಕೆಡಿ2ಚಿಕ್ಕೋಡಿಯಲ್ಲಿ ಮತದಾನ ಜಾಗೃತಿ ಸಲುವಾಗಿ ಸ್ವಿಪ್ ಚಟುವಟಿಕೆಯಡಿಯಲ್ಲಿ  ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ತಹಶೀಲ್ದಾರ ಚಿದಂಬರ ಕುಲಕರ್ಣಿ ಚಾಲನೆ ನೀಡಿದರು. ಜಗದೀಶ ಕಮ್ಮಾರ, ಮಹಾಂತೇಶ ನಿಡವಣಿ, ಭಾರತಿ ಕಾಂಬಳೆ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಜಿಲ್ಲಾಡಳಿತ, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ತಾಲೂಕು ಸ್ವೀಪ್ ಸಮಿತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಆರೋಗ್ಯ ಇಲಾಖೆ ಪುರಸಭೆ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನ ಜಾಗೃತಿಯ ಸ್ವೀಪ್ ಚಟುವಟಿಕೆಯ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ತಹಸೀಲ್ದಾರ್‌ ಚಿದಂಬರ ಕುಲಕರ್ಣಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.

ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪ್ರತಿಜ್ಞಾವಿಧಿ ಹಾಗೂ ಬೀದಿ ನಾಟಕ, ಜಾಥಾ ಕಾರ್ಯಕ್ರಮದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಸಿಡಿಪಿಒ ಭಾರತಿ ಕಾಂಬಳೆ, ಸಹಾಯಕ ನಿರ್ದೇಶಕರು(ಗ್ರಾಉ) ಶಿವಾನಂದ ಶಿರಗಾಂವೆ, ವ್ಯವಸ್ಥಾಪಕ ಉದಯಗೌಡ ಪಾಟೀಲ, ಸಹಾಯಕ ನಿರ್ದೇಶಕ (ಪಂ.ರಾ) ಎಸ್.ಎಸ್.ಮಠದ, ಐ.ಇ.ಸಿ ಸಂಯೋಜಕ ರಂಜಿತ ಕಾರ್ಣಿಕ, ಎಂ.ಐ.ಎಸ್ ಸಂಯೋಜಕ ಚೇತನ ಶಿರಹಟ್ಟಿ, ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ, ಸ್ವೀಪ್ ವಿಷಯ ನಿರ್ವಾಹಕಿ ಶ್ರೀದೇವಿ ನಡುವಿನಕೇರಿ, ಸೂಪರವೈಸರ್ ಬಸವರಾಜ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ-30,000 ಕೋಟಿ ರು. ವಿತರಣೆಯ ಗುರಿ
ಏಪ್ರಿಲ್‌ನಿಂದ ಆಲ್ಕೋಹಾಲ್‌ ಪ್ರಮಾಣಕ್ಕೆ ತಕ್ಕಂತೆ ಮದ್ಯ ಸುಂಕ