ಕಲ್ಲಿನಲ್ಲಿಯು ದೇವರು ಕಾಣುವ ಸಂಸ್ಕೃತಿ ನಮ್ಮದು

KannadaprabhaNewsNetwork | Published : Feb 19, 2024 1:31 AM

ಸಾರಾಂಶ

ನಮ್ಮದು ಕಲ್ಲಿಗೂ ಕೈ ಮುಗಿದು, ಕಲ್ಲಿನಲ್ಲಿಯೂ ದೇವರನ್ನು ಕಾಣುವ ಸಂಸ್ಕೃತಿ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗದಿದ್ದರೂ ಗಣೇಶ ಭಟ್ಟ ಅವರು ಕೆತ್ತಿದ ಮೂರ್ತಿ ಅದ್ಭುತವಾಗಿದೆ.

(ಓಕೆ) ಕಲ್ಲಿನಲ್ಲಿಯು ದೇವರು ಕಾಣುವ ಸಂಸ್ಕೃತಿ ನಮ್ಮದು

ಬಾಲ ಶ್ರೀರಾಮನ ಮೂರ್ತಿಯನ್ನು ರಚಿಸಿಕೊಟ್ಟ ಶಿಲ್ಪಿ ಗಣೇಶಗೆ ನಾಗರಿಕ ಸನ್ಮಾನಕನ್ನಡಪ್ರಭ ವಾರ್ತೆ ಹೊನ್ನಾವರಅಯೋಧ್ಯೆಯ ಶ್ರೀರಾಮ ಮಂದಿರ ಟ್ರಸ್ಟ್ ಆಹ್ವಾನದಂತೆ ಅಯೋಧ್ಯೆಯಲ್ಲಿ 7 ತಿಂಗಳು ತಮ್ಮ ಸಹ ಶಿಲ್ಪಿಗಳೊಂದಿಗೆ ವಾಸ ಮಾಡಿ ಶಾಸ್ತ್ರೋಕ್ತವಾಗಿ ಬಾಲ ಶ್ರೀರಾಮನ ಮೂರ್ತಿ ರಚಿಸಿಕೊಟ್ಟು ಬಂದ ಇಡಗುಂಜಿಯ ಶಿಲ್ಪಿ ಗಣೇಶ ಭಟ್ಟ ಅವರಿಗೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‌ ಸಭಾಭವನದಲ್ಲಿ ಸಾರ್ವಜನಿಕ ಸನ್ಮಾನವನ್ನು ಭಾನುವಾರ ಹುಟ್ಟೂರಿನ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಪರವಾಗಿ ಆಯೋಜಿಸಲಾಗಿತ್ತು.ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳು ವೈದ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮದು ಕಲ್ಲಿಗೂ ಕೈ ಮುಗಿದು, ಕಲ್ಲಿನಲ್ಲಿಯೂ ದೇವರನ್ನು ಕಾಣುವ ಸಂಸ್ಕೃತಿ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗದಿದ್ದರೂ ಗಣೇಶ ಭಟ್ಟ ಅವರು ಕೆತ್ತಿದ ಮೂರ್ತಿ ಅದ್ಭುತವಾಗಿದೆ. ಈಗಾಗಲೇ ಹಲವು ಮಠಾಧೀಶರು ಈ ಮೂರ್ತಿ ಪ್ರತಿಷ್ಠಾಪನೆಗೆ ಕೇಳಿರುವ ಮಾಹಿತಿ ಇದೆ. ಅವಕಾಶ ನೀಡಿದರೆ ತಮ್ಮ ಕ್ಷೇತ್ರದಲ್ಲಿಯೇ ಅಥವಾ ಜಿಲ್ಲೆಯಲ್ಲಿ ಅದ್ಭುತವಾದ ದೇವಸ್ಥಾನ ನಿರ್ಮಿಸಿ ಪ್ರತಿಷ್ಠಾಪನೆ ಮಾಡುತ್ತೇವೆ. ಇದು ಯಾರಿಗೂ ಪೈಪೋಟಿ ನೀಡುವುದಕ್ಕಲ್ಲ. ಇದು ನಮಗೆ ಒದಗಿ ಬರುವ ಭಾಗ್ಯ ಎಂದುಕೊಳ್ಳುತ್ತೇನೆ. ನಮಗೆ ಸಿಗಬಹುದೆಂಬ ಮಹದಾಸೆಯು ಇದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಗಣೇಶ್ ಭಟ್ಟ ಅವರು ಕೇವಲ 7 ತಿಂಗಳಲ್ಲಿ ಅತ್ಯುತ್ತಮವಾದ ಮೂರ್ತಿ ನಿರ್ಮಾಣ ಮಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿಯೂ ಇಂತಹ ಅನೇಕ ಶಿಲ್ಪಿಗಳು ಇದ್ದಾರೆ ಎಂಬುದನ್ನು ಅಯೋಧ್ಯೆಯಲ್ಲಿ ಸಹ ತೋರಿಸಿಕೊಟ್ಟಿದ್ದಾರೆ ಎಂದರು.ಶಿಲ್ಪಿ ಗಣೇಶ ಭಟ್ಟ ದಂಪತಿಗೆ, ತಾಯಿ ಮಂಕಾಳಿ ಭಟ್ಟ, ಹುಟ್ಟೂರಿನ ಸಾರ್ವಜನಿಕರು, ಬಂಧುಮಿತ್ರರು ಮತ್ತು ಸಂಘ ಸಂಸ್ಥೆಗಳಿಂದ ಸನ್ಮಾನ ನಡೆಯಿತು. ಗಣೇಶ ಭಟ್ಟ ಶಿಷ್ಯ ಮಾಳ್ಕೋಡಿನ ಸಂದೀಪ ನಾಯ್ಕ ಅವರನ್ನು ಸಹ ಇದೇ ವೇಳೆ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಶಿಲ್ಪಿ ಗಣೇಶ ಭಟ್ಟ ಮಾತನಾಡಿ, ಬಾಲ ರಾಮನ ಮೂರ್ತಿ ಕೆತ್ತನೆಗೆ ಎಳೆಂಟು ಜನರ ಶ್ರಮವಿದೆ. ಅವರೆಲ್ಲರೂ ಅಭಿನಂದನಾರ್ಹರು. ಅವರೆಲ್ಲರನ್ನು ಸ್ಮರಿಸುತ್ತೇನೆ. ಅಯೋಧ್ಯೆಯಲ್ಲಿ ರಾಮನ ಪುನರ್ ಪ್ರತಿಷ್ಠಾಪನೆಯಾಗಿರುವುದಕ್ಕೆ ಜಗತ್ತು ಸಾಕ್ಷಿಯಾಗಿದೆ. ಇದು ನಾವೆಲ್ಲ ಹೆಮ್ಮೆಪಡುವ ಸಂಗತಿಯಾಗಿದೆ ಎಂದರು.ತಾವು ರಚಿಸಿದ ಬಾಲ ಶ್ರೀರಾಮ ಮೂರ್ತಿಯ ವೈಶಿಷ್ಟ್ಯಗಳ ಕುರಿತು ವಿವರಿಸುತ್ತಾ, ಇಡಗುಂಜಿ ಗಣಪತಿ ಕಲ್ಲಿನ ಸ್ವರೂಪದ ಸಂಯೋಜನೆಗಳನ್ನು ಬಾಲರಾಮನಲ್ಲಿ ನಾನು ಇಟ್ಟಿದ್ದೇನೆ. ಇಡಗುಂಜಿಯ ಗಣಪತಿ ಜನಿವಾರದ ರೂಪದಲ್ಲಿರುವ ಗಂಟೆಯ ಸರ ಹಾಕಿಕೊಂಡಿದ್ದಾನೆ. ಹಾಗೆಯೇ ಈ ಬಾಲರೂಪಿ ರಾಮನಲ್ಲಿಯೂ ಅದೇ ಗಜ್ಜೆಯ ಸರ ಸೊಂಟಕ್ಕೆ ಮತ್ತೆ ಕಾಲಿಗೆ ಕಟ್ಟಿಕೊಂಡಿದ್ದಾನೆ. ಬಾಲಕರನ್ನು ಶಿಲ್ಪದಲ್ಲಿ ತೋರಿಸುವಾಗ ಇದೊಂದು ಪರಂಪರೆ ಇದೆ. ನಾಟ್ಯ ಗಣಪತಿಯ ಶಿಲ್ಪದಲ್ಲಿ ಇದನ್ನೇ ನೋಡಬಹುದು. ಸೊಂಟಕ್ಕೆ ಕಟಿಬಂದ ಅಥವಾ ಗಂಟೆ ಸರಗಳನ್ನು ಪ್ರಾಣಿ ದೇವರುಗಳಿಗೆ ಅಥವಾ ಪ್ರಾಣಿಗಳಿಗೆ ಸಂಯೋಜನೆ ಮಾಡುವಂತಹ ಒಂದು ವಿಶೇಷ. ಗಂಟೆ ಅಥವಾ ಗಜ್ಜೆಯ ಅಂದರೆ ಶಬ್ದ ಉತ್ಪತ್ತಿ ಮಾಡುವಂತಹ ವಸ್ತುವನ್ನು ಮಕ್ಕಳಿಗೆ ಕೊಟ್ಟಿರುವ ಪರಂಪರೆ ಇದೆ. ಅದನ್ನು ಕಟ್ಟಿದ್ದಾರೆ ಅಂದರೆ ಅವರು ಮಕ್ಕಳು ಅಂತ ಅರ್ಥವಾಗುತ್ತದೆ. ಹೀಗೆ ಹಲವು ವಿಶೇಷತೆ ಈ ರಾಮನ ವಿಗ್ರಹದಲ್ಲಿದೆ ಎಂದು ವಿವರಿಸಿದರು.ಎಸ್.ಆರ್.ಎಲ್. ಸಾರಿಗೆ ಮುಖ್ಯಸ್ಥ ವೆಂಕಟರಮಣ ಹೆಗಡೆ, ಕವಲಕ್ಕಿ ಅಧ್ಯಕ್ಷತೆ ವಹಿಸಿದ್ದರು.ಮಂಕಾಳಿ ಭಟ್ಟ, ಸುನಂದಾ ಭಟ್ಟ ಉಪಸ್ಥಿತರಿದ್ದರು. ನಗರದ ಮತ್ತು ತಾಲೂಕಿನ ವಿವಿಧ ದೇವಾಲಯಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ರೋಟರಿ, ಲಯನ್ಸ್ ಮತ್ತು ಸೇವಾ ಸಂಸ್ಥೆಗಳ ಅಧ್ಯಕ್ಷರು ಗಣೇಶ್ ಭಟ್ಟ ಅವರನ್ನು ಅಭಿನಂದಿಸಿದರು. ಪತ್ರಕರ್ತ ಜಿ.ಯು. ಭಟ್ಟ ಸ್ವಾಗತಿಸಿದರು. ಪ್ರಶಾಂತ ಹೆಗಡೆ ನಿರ್ವಹಿಸಿದರು.ಫೋಟೋ: 18ಎಚ್ ಎನ್ ಆರ್ 1: ಶಿಲ್ಪಿ ಗಣೇಶ ಭಟ್ಟ ದಂಪತಿಗೆ, ತಾಯಿ ಮಂಕಾಳಿ ಭಟ್ಟರಿಗೆ ಹುಟ್ಟೂರಿನ ಸಾರ್ವಜನಿಕರ, ಬಂಧು-ಮಿತ್ರರು ಮತ್ತು ಸಂಘ ಸಂಸ್ಥೆಗಳಿಂದ ಸನ್ಮಾನ ನಡೆಯಿತು.ಅಯೋಧ್ಯೆಯ ಶ್ರೀರಾಮ ಮಂದಿರ ಟ್ರಸ್ಟ್ ಆಹ್ವಾನದಂತೆ ಅಯೋಧ್ಯೆಯಲ್ಲಿ 7 ತಿಂಗಳು ತಮ್ಮ ಸಹ ಶಿಲ್ಪಿಗಳೊಂದಿಗೆ ವಾಸ ಮಾಡಿ ಶಾಸ್ತ್ರೋಕ್ತವಾಗಿ ಬಾಲ ಶ್ರೀರಾಮನ ಮೂರ್ತಿ ರಚಿಸಿಕೊಟ್ಟು ಬಂದ ಇಡಗುಂಜಿಯ ಶಿಲ್ಪಿ ಗಣೇಶ ಭಟ್ಟ ಅವರಿಗೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‌ ಸಭಾಭವನದಲ್ಲಿ ಸಾರ್ವಜನಿಕ ಸನ್ಮಾನವನ್ನು ಭಾನುವಾರ ಹುಟ್ಟೂರಿನ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಪರವಾಗಿ ಆಯೋಜಿಸಲಾಗಿತ್ತು.

ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳು ವೈದ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮದು ಕಲ್ಲಿಗೂ ಕೈ ಮುಗಿದು, ಕಲ್ಲಿನಲ್ಲಿಯೂ ದೇವರನ್ನು ಕಾಣುವ ಸಂಸ್ಕೃತಿ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗದಿದ್ದರೂ ಗಣೇಶ ಭಟ್ಟ ಅವರು ಕೆತ್ತಿದ ಮೂರ್ತಿ ಅದ್ಭುತವಾಗಿದೆ. ಈಗಾಗಲೇ ಹಲವು ಮಠಾಧೀಶರು ಈ ಮೂರ್ತಿ ಪ್ರತಿಷ್ಠಾಪನೆಗೆ ಕೇಳಿರುವ ಮಾಹಿತಿ ಇದೆ. ಅವಕಾಶ ನೀಡಿದರೆ ತಮ್ಮ ಕ್ಷೇತ್ರದಲ್ಲಿಯೇ ಅಥವಾ ಜಿಲ್ಲೆಯಲ್ಲಿ ಅದ್ಭುತವಾದ ದೇವಸ್ಥಾನ ನಿರ್ಮಿಸಿ ಪ್ರತಿಷ್ಠಾಪನೆ ಮಾಡುತ್ತೇವೆ. ಇದು ಯಾರಿಗೂ ಪೈಪೋಟಿ ನೀಡುವುದಕ್ಕಲ್ಲ. ಇದು ನಮಗೆ ಒದಗಿ ಬರುವ ಭಾಗ್ಯ ಎಂದುಕೊಳ್ಳುತ್ತೇನೆ. ನಮಗೆ ಸಿಗಬಹುದೆಂಬ ಮಹದಾಸೆಯು ಇದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಗಣೇಶ್ ಭಟ್ಟ ಅವರು ಕೇವಲ 7 ತಿಂಗಳಲ್ಲಿ ಅತ್ಯುತ್ತಮವಾದ ಮೂರ್ತಿ ನಿರ್ಮಾಣ ಮಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿಯೂ ಇಂತಹ ಅನೇಕ ಶಿಲ್ಪಿಗಳು ಇದ್ದಾರೆ ಎಂಬುದನ್ನು ಅಯೋಧ್ಯೆಯಲ್ಲಿ ಸಹ ತೋರಿಸಿಕೊಟ್ಟಿದ್ದಾರೆ ಎಂದರು.

ಶಿಲ್ಪಿ ಗಣೇಶ ಭಟ್ಟ ದಂಪತಿಗೆ, ತಾಯಿ ಮಂಕಾಳಿ ಭಟ್ಟ, ಹುಟ್ಟೂರಿನ ಸಾರ್ವಜನಿಕರು, ಬಂಧುಮಿತ್ರರು ಮತ್ತು ಸಂಘ ಸಂಸ್ಥೆಗಳಿಂದ ಸನ್ಮಾನ ನಡೆಯಿತು. ಗಣೇಶ ಭಟ್ಟ ಶಿಷ್ಯ ಮಾಳ್ಕೋಡಿನ ಸಂದೀಪ ನಾಯ್ಕ ಅವರನ್ನು ಸಹ ಇದೇ ವೇಳೆ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಶಿಲ್ಪಿ ಗಣೇಶ ಭಟ್ಟ ಮಾತನಾಡಿ, ಬಾಲ ರಾಮನ ಮೂರ್ತಿ ಕೆತ್ತನೆಗೆ ಎಳೆಂಟು ಜನರ ಶ್ರಮವಿದೆ. ಅವರೆಲ್ಲರೂ ಅಭಿನಂದನಾರ್ಹರು. ಅವರೆಲ್ಲರನ್ನು ಸ್ಮರಿಸುತ್ತೇನೆ. ಅಯೋಧ್ಯೆಯಲ್ಲಿ ರಾಮನ ಪುನರ್ ಪ್ರತಿಷ್ಠಾಪನೆಯಾಗಿರುವುದಕ್ಕೆ ಜಗತ್ತು ಸಾಕ್ಷಿಯಾಗಿದೆ. ಇದು ನಾವೆಲ್ಲ ಹೆಮ್ಮೆಪಡುವ ಸಂಗತಿಯಾಗಿದೆ ಎಂದರು.

ತಾವು ರಚಿಸಿದ ಬಾಲ ಶ್ರೀರಾಮ ಮೂರ್ತಿಯ ವೈಶಿಷ್ಟ್ಯಗಳ ಕುರಿತು ವಿವರಿಸುತ್ತಾ, ಇಡಗುಂಜಿ ಗಣಪತಿ ಕಲ್ಲಿನ ಸ್ವರೂಪದ ಸಂಯೋಜನೆಗಳನ್ನು ಬಾಲರಾಮನಲ್ಲಿ ನಾನು ಇಟ್ಟಿದ್ದೇನೆ. ಇಡಗುಂಜಿಯ ಗಣಪತಿ ಜನಿವಾರದ ರೂಪದಲ್ಲಿರುವ ಗಂಟೆಯ ಸರ ಹಾಕಿಕೊಂಡಿದ್ದಾನೆ. ಹಾಗೆಯೇ ಈ ಬಾಲರೂಪಿ ರಾಮನಲ್ಲಿಯೂ ಅದೇ ಗಜ್ಜೆಯ ಸರ ಸೊಂಟಕ್ಕೆ ಮತ್ತೆ ಕಾಲಿಗೆ ಕಟ್ಟಿಕೊಂಡಿದ್ದಾನೆ. ಬಾಲಕರನ್ನು ಶಿಲ್ಪದಲ್ಲಿ ತೋರಿಸುವಾಗ ಇದೊಂದು ಪರಂಪರೆ ಇದೆ. ನಾಟ್ಯ ಗಣಪತಿಯ ಶಿಲ್ಪದಲ್ಲಿ ಇದನ್ನೇ ನೋಡಬಹುದು. ಸೊಂಟಕ್ಕೆ ಕಟಿಬಂದ ಅಥವಾ ಗಂಟೆ ಸರಗಳನ್ನು ಪ್ರಾಣಿ ದೇವರುಗಳಿಗೆ ಅಥವಾ ಪ್ರಾಣಿಗಳಿಗೆ ಸಂಯೋಜನೆ ಮಾಡುವಂತಹ ಒಂದು ವಿಶೇಷ. ಗಂಟೆ ಅಥವಾ ಗಜ್ಜೆಯ ಅಂದರೆ ಶಬ್ದ ಉತ್ಪತ್ತಿ ಮಾಡುವಂತಹ ವಸ್ತುವನ್ನು ಮಕ್ಕಳಿಗೆ ಕೊಟ್ಟಿರುವ ಪರಂಪರೆ ಇದೆ. ಅದನ್ನು ಕಟ್ಟಿದ್ದಾರೆ ಅಂದರೆ ಅವರು ಮಕ್ಕಳು ಅಂತ ಅರ್ಥವಾಗುತ್ತದೆ. ಹೀಗೆ ಹಲವು ವಿಶೇಷತೆ ಈ ರಾಮನ ವಿಗ್ರಹದಲ್ಲಿದೆ ಎಂದು ವಿವರಿಸಿದರು.

ಎಸ್.ಆರ್.ಎಲ್. ಸಾರಿಗೆ ಮುಖ್ಯಸ್ಥ ವೆಂಕಟರಮಣ ಹೆಗಡೆ, ಕವಲಕ್ಕಿ ಅಧ್ಯಕ್ಷತೆ ವಹಿಸಿದ್ದರು.

ಮಂಕಾಳಿ ಭಟ್ಟ, ಸುನಂದಾ ಭಟ್ಟ ಉಪಸ್ಥಿತರಿದ್ದರು. ನಗರದ ಮತ್ತು ತಾಲೂಕಿನ ವಿವಿಧ ದೇವಾಲಯಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ರೋಟರಿ, ಲಯನ್ಸ್ ಮತ್ತು ಸೇವಾ ಸಂಸ್ಥೆಗಳ ಅಧ್ಯಕ್ಷರು ಗಣೇಶ್ ಭಟ್ಟ ಅವರನ್ನು ಅಭಿನಂದಿಸಿದರು. ಪತ್ರಕರ್ತ ಜಿ.ಯು. ಭಟ್ಟ ಸ್ವಾಗತಿಸಿದರು. ಪ್ರಶಾಂತ ಹೆಗಡೆ ನಿರ್ವಹಿಸಿದರು.

Share this article