ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ನಡದ ನಾಮಫಲಕಗಳ ಅಳವಡಿಕೆಗಾಗಿ ಹೋರಾಡಿದ ಕರವೇ ರಾಜ್ಯಾಧ್ಯಕ್ಷ ಹಾಗೂ ಕಾರ್ಯರ್ತರನ್ನು ಬಿಡುಗಡೆ ಮಾಡದಿದ್ದರೆ ವಿಜಯಪುರ ಬಂದ್‌ಗೆ ಕರೆ ನೀಡಲಾಗುವುದು ಎಂದು ಸಾಹಿತಿ ಹಾಗೂ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶೇಷರಾವ್ ಮಾನೆ ತಿಳಿಸಿದರು.ನಗರದ ಕಂದಗಲ್ ಹಣಮಂತರಾಯ ರಂಗಮಂದಿರ ಸಭಾಂಗಣದಲ್ಲಿ ನಡೆದ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡ ವಿಷಯಕ್ಕೆ ಅಕ್ಕರೆಯ ಸ್ವಾಭಿಮಾನವೇ ಕನ್ನಡಿಗರ ಅಸ್ತ್ರವಾಗಿದ್ದು. ಅದನ್ನು ಝಳಪಿಸುವ ಕಾಲ ಕೂಡಿ ಬಂದಿದೆ. ಕನ್ನಡಕ್ಕಾಗಿ ಹೋರಾಟಗಾರರನ್ನು ಬಂಧಿಸಿ ರಾಜ್ಯ ಸರ್ಕಾರ ಕನ್ನಡ ವಿರೋಧಿ ನಡೆ ಅನುಸರಿಸಿದೆ. ಇದು ಸಮರ್ಥನಿಯವಲ್ಲ ಎಂದು ಕಿಡಿಕಾರಿದರು. ಕನ್ನೂರ ಗುರುಮಠದ ಶ್ರೀ ಸೋಮನಾಥ ಶಿವಾಚಾರ್ಯರು ಮಾತನಾಡಿ, ೬೮ ವರ್ಷಗಳಲ್ಲಿ ಕರ್ನಾಟಕ ಬೆಳೆದು ಹೆಮ್ಮರವಾಗಿದೆ. ಹೊರರಾಜ್ಯದವರು ಇಲ್ಲಿ ನೆಲೆಸಿ ಅದರ ಫಲ ತಿನ್ನುತ್ತಿದ್ದಾರೆ. ಕನ್ನಡಿಗರ ತಾಳ್ಮೆ ಅರಿತು ಕನ್ನಡದ ವಿಷಯದಲ್ಲಿ ದ್ರೋಹ ಬಗೆಯುತ್ತಿದ್ದಾರೆ ಎಂದರು. ಕನ್ನೂರಿನ ನಿಸರ್ಗಧಾಮ ರವೀಂದ್ರನಾಥ ಮಹಾರಾಜ ಕರ್ನಾಟಕ ಎಂಬುದು ಸಮಸ್ತ ಕನ್ನಡಿಗರ ಆಸ್ತಿ ಕರ್ನಾಟಕಕ್ಕೆ ಧಕ್ಕೆ ಬಂದರೆ ಕನ್ನಡಿಗರ ಸುಮ್ಮನಿರಲಾರರು ಎಂದರು.ಜೈಲಿನಲ್ಲಿರುವ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡಲು ಆಗ್ರಹಿಸಲಾಯಿತು. ಒಂದು ವೇಳೆ ಬಿಡುಗಡೆ ಮಾಡದೆ ಹೋದರೆ ವಿಜಯಪುರ ಜಿಲ್ಲಾ ಬಂದ್‌ಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒಕ್ಕೊರೆಲಿನ ಕೂಗನ್ನು ಮೊಳಗಿಸಿದರು. ಈ ವೇಳೆ ಕೆ.ಎಫ್. ಅಂಕಲಗಿ, ವಿದ್ಯಾವತಿ ಅಂಕಲಗಿ, ಸಾಗರ ಪಾತ್ರೋಟ, ದತ್ತಾತ್ರೇಯ ಪೂಜಾರಿ, ಗಿರೀಜಾ ಉಮೇಶ ವಂದಾಲ, ಶಿಲ್ಪಾ ಶಿವಾನಂದ ಭೂಯ್ಯಾರ ಭಾರತಿ ಟಂಕಸಾಲಿ, ಕೆ.ಕೆ. ಬನ್ನಟ್ಟಿ, ಭೀಮಾಶಂಕರಯ್ಯ ವಿರಕ್ತಮಠ, ದತ್ತಾತ್ರೇಯ ಪೂಜಾರಿ, ಆನಂದ ಸಾಗರ, ಎಂ.ಎಂ. ಖಲಾಸಿ, ಗುರುರಾಜ ಪಂಚಾಳ ಇದ್ದರು.