ನೈಸ್ ನ ಎಲ್ಲಾ ಅಕ್ರಮಗಳಿಗೆ ಸಿಎಂ ಅವರೇ ಹೊಣೆಗಾರರಾರು. ಅಕ್ರಮ ಭೂಸ್ವಾಧೀನ ಕೈ ಬಿಡಬೇಕು ಹಾಗೂ ರೈತರ ಭೂಮಿ ವಶಪಡಿಸಿಕೊಂಡಿರುವ ಅಕ್ರಮ ನೀತಿ ವಿರುದ್ಧವಾಗಿ ಹೈಕೋರ್ಟ್ ಛೀಮಾರಿ ಹಾಕಿದ್ದರೂ ನೈಸ್ ಶೋಷಣೆ ನಿಂತಿಲ್ಲ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ನೈಸ್ ಸಂಸ್ಥೆ ಅಕ್ರಮ ಟೋಲ್ ಸಂಗ್ರಹ ನಿಲ್ಲಿಸಿ ರೈತರಿಗೆ ಭೂಮಿ ವಾಪಸ್ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಸೇರಿದ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು. ಬೆಂಗಳೂರಿನ ಮದಾವರ ಟೋಲ್ ಬಳಿ ಪ್ರತಿಭಟಿಸುತ್ತಿದ್ದ ಹೋರಾಟಗಾರ ಬಂಧನವನ್ನು ಖಂಡಿಸಿದರು.
ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ನೈಸ್ ಸಂಸ್ಥೆ ಹಾಗೂ ರಿಯಲ್ ಎಸ್ಟೇಟ್ ಲೂಟಿಕೋರರ ಪರವಾಗಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ನೈಸ್ ನ ಎಲ್ಲಾ ಅಕ್ರಮಗಳಿಗೆ ಸಿಎಂ ಅವರೇ ಹೊಣೆಗಾರರಾರು. ಅಕ್ರಮ ಭೂಸ್ವಾಧೀನ ಕೈ ಬಿಡಬೇಕು ಹಾಗೂ ರೈತರ ಭೂಮಿ ವಶಪಡಿಸಿಕೊಂಡಿರುವ ಅಕ್ರಮ ನೀತಿ ವಿರುದ್ಧವಾಗಿ ಹೈಕೋರ್ಟ್ ಛೀಮಾರಿ ಹಾಕಿದ್ದರೂ ನೈಸ್ ಶೋಷಣೆ ನಿಂತಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ಜನಸಾಮಾನ್ಯರ ಪ್ರಶ್ನೆಗಳ ಎತ್ತಿಕೊಂಡು ಹೋರಾಟ ನಡೆಸದೆ ಬೀದಿಯಲ್ಲಿ ಸಣ್ಣಪುಟ್ಟ ವಿಷಯಗಳನ್ನು ಮುಂದಿಟ್ಟುಕೊಂಡು ದೇವರ ಹೆಸರಿನಲ್ಲಿ ಗಲಭೆ ಸೃಷ್ಟಿಸುತ್ತಿದೆ. ಮಣ್ಣಿನ ಮಕ್ಕಳು ಎನ್ನುವ ಜೆಡಿಎಸ್ ಸಹ ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್ ಅಕ್ರಮಗಳ ಬಗ್ಗೆ ಧ್ವನಿತ್ತದೇ ವ್ಯಕ್ತಿಗತ ನೆಲೆಯಲ್ಲಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯಮಂಡ್ಯ: 66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-06 ಹೊಸಹಳ್ಳಿ Urban ಫೀಡರ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆಪ್ಟೆಂಬರ್ 23 ರಂದು ಬೆಳಗ್ಗೆ 9 ರಿಂದ ಸಂಜೆ 6ಗಂಟೆವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ. 66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದ ಎಫ್-6 ಹೊಸಹಳ್ಳಿ Urban ಫೀಡರ್‌ನ ಪ್ರದೇಶಗಳಾದ ಹೊಸಹಳ್ಳಿ,ಹಾಲಹಳ್ಳಿ, ಹನಿಯಂಬಾಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೊತ್ತತ್ತಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.