ರಾಮನಗರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಹೇರಿರುವ ನಿಷೇಧದ ಆದೇಶವನ್ನು ವಾಪಸ್ಸು ಪಡೆಯುವಂತೆ ಹಾಗೂ ೩೨ ಅಂಶದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘ, ದಲಿತ ಹಾಗೂ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ವಿವಿಧ ಸಂಘಟನೆಗಳ ಮುಖಂಡರ ಬಂಧನದ ಮೂಲಕ ಅಂತ್ಯ ಖಂಡಿತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾಕಾರರು ತೆರಳದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಕಚೇರಿ ಮುಂಭಾಗದ ಬೃಹತ್ ಗೇಟ್ ಹಾಕಿ ಪೊಲೀಸ್ ಬ್ಯಾರಿಕೇಡ್‌ನಿಂದ ಬಂದ್ ಮಾಡಲಾಗಿತ್ತು. ಪ್ರತಿಭಟನೆ ನಡೆಸಲು ಆಗಮಿಸಿದ ಪ್ರತಿಭಟನಾನಿರತರನ್ನು ತಡೆಯಲಾಯಿತು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ಹಳೆಯ ಬೆಂಗಳೂರು ಮೈಸೂರು ಹೆದ್ದಾರಿಯನ್ನು ತಡೆದ ರಸ್ತೆಯಲ್ಲಿ ಕುಳಿತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ನಿಷೇಧಿಸುವ ಮೂಲಕ ಜಿಲ್ಲಾಡಳಿತ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಈ ಕೂಡಲೇ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿ ಪ್ರತಿಭಟನೆ ನಡೆಸುವ ವೇಳೆ ಬ್ರಿಟಿಷರು ರಕ್ಷಣೆ ನೀಡುತ್ತಿದ್ದರು. ಆದರೆ, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸದಂತೆ ಹೊರಡಿಸಿರುವ ನಿಷೇಧಾಜ್ಞೆಯು ಸಾರ್ವಧಿಕಾರ ಧೋರಣೆಯನ್ನು ಸಹ ಮೀರಿದ್ದಾಗಿದೆ. ಜಿಲ್ಲಾಧಿಕಾರಿಯು ಜಿಲ್ಲೆಯ ಮೊದಲ ಸೇವಕನಾಗಿದ್ದು, ಇದನ್ನು ಅರಿತು ಜನರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆ ಹತ್ತಿಕ್ಕುವ ಹುನ್ನಾರ:
ಪ್ರತಿಭಟನೆಗೆ ಮಳೆ ಅಡ್ಡಿ:
ಬಾಕ್ಸ್.............
ಪ್ರತಿಭಟನೆ ನಡೆಸುವ ಶೌಚಾಲಯಕ್ಕಾಗಿ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆಯಿತು. ಪ್ರತಿಭಟನೆ ವೇಳೆ ಮಹಿಳಾ ಸದಸ್ಯರಿಗೆ ಡಿಸಿ ಕಚೇರಿಯಲ್ಲಿನ ಶೌಚಾಲಯ ಬಳಸಲು ಅವಕಾಶ ಮಾಡಿಕೊಡಬೇಕೆಂದು ಹೋರಾಟಗಾರರು ಪೊಲೀಸರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪೊಲೀಸ್ ಸಿಬ್ಬಂದಿ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಬಿಗಿ ಪೊಲೀಸ್ ಬಂದೋಬಸ್ತ್
ಜಿಲ್ಲಾಧಿಕಾರಿ ಕಚೇರಿ ಬಳಿ ಸುಮಾರು ೧೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಿಸಲಾಗಿತ್ತು. ಇದರಲ್ಲಿ ಎಎಸ್ಪಿ ನೇತೃತ್ವದ ೨೦ ಪೊಲೀಸ್ ಅಧಿಕಾರಿಗಳ ತಂಡ, ೫೦ ಪೊಲೀಸ್ ಸಿಬ್ಬಂದಿ, ಎರಡು ತುಕಡಿ ಮೀಸಲು ಪೊಲೀಸ್ ತಂಡದ ಜತೆಗೆ, ೧ ಜಿಲ್ಲಾ ಪೊಲೀಸ್ ತಂಡ ನೇಮಿಸಲಾಗಿತ್ತು. ಇನ್ನು ಹೋರಾಟಗಾರರನ್ನು ಬಂಧಿಸುವ ಸಲುವಾಗಿ ಪ್ರತಿಭಟನೆ ಆರಂಭಕ್ಕೂ ಮುನ್ನ ಪೊಲೀಸರು ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಿತ್ತು.ಪೊಟೋ೯ಸಿಪಿಟಿ೨:
ಪೊಟೋ೯ಸಿಪಿಟಿ೩:
ಮಳೆಯ ನಡುವೆಯೂ ಹೋರಾಟಗಾರ ಬಂಧನಕ್ಕೆ ಹರಸಾಹಸ ಪಡುತ್ತಿರುವ ಪೊಲೀಸರು.