ದಾವಣಗೆರೆಯಲ್ಲಿ ಭದ್ರಾ ಡ್ಯಾಂ ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ

KannadaprabhaNewsNetwork |  
Published : Jun 24, 2025, 01:47 AM ISTUpdated : Jun 24, 2025, 01:20 PM IST
23ಕೆಡಿವಿಜಿ6-ದಾವಣಗೆರೆ ಡಿಸಿ ಕಚೇರಿ ಬಳಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್‌ರಿಗೆ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿಮನವಿ ಅರ್ಪಿಸಲಾಯಿತು. ..................23ಕೆಡಿವಿಜಿ7, 8-ಭದ್ರಾ ಡ್ಯಾಂ ಬಲ ದಂಡೆ ನಾಲೆ ಸೀಳಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿರುವುದನ್ನು ಖಂಡಿಸಿ ದಾವಣಗೆರೆ ಡಿಸಿ ಕಚೇರಿ ಬಳಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಬೇರೆ ಜಿಲ್ಲೆಗಳಿಗೆ ನೀರು ಪೂರೈಸುವ ಮೂಲಕ ದಾವಣಗೆರೆ ಹಾಗೂ ಹೊಸಪೇಟೆ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ಸಂಕಷ್ಟ  - ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟಿಸಲಾಯಿತು.

  ದಾವಣಗೆರೆ :  ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಬೇರೆ ಜಿಲ್ಲೆಗಳಿಗೆ ನೀರು ಪೂರೈಸುವ ಮೂಲಕ ದಾವಣಗೆರೆ ಹಾಗೂ ಹೊಸಪೇಟೆ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ಸಂಕಷ್ಟ ತಂದೊಡ್ಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಎದುರು ಭದ್ರಾ ಡ್ಯಾಂನ ಬಲದಂಡೆ ನಾಲೆ ಸೀಳಿ ಪೈಪ್ ಲೈನ್ ಅಳವಡಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ತಕ್ಷಣ‍ವೇ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಪಿ.ಎನ್‌.ಲೋಕೇಶ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಡಾ.ಜಿ.ಎಂ.ಸಿದ್ದೇಶ್ವ, ಭದ್ರಾ ಡ್ಯಾಂನ ಬಲದಂಡೆ ನಾಲೆಯನ್ನು ಸೀಳಿ, ಚಿಕ್ಕಮಗಳೂರು, ತರೀಕೆರೆ, ಹೊಸದುರ್ಗ ನಗರಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ 30 ಕ್ಯುಸೆಕ್ ನೀರು ಹರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಅತ್ಯಂತ ಗುಪ್ತವಾಗಿ ಕಾಮಗಾರಿ ಆರಂಭಿಸಲು ಎಲ್ಲಾ ಸಿದ್ಥತೆ ಮಾಡಿಕೊಂಡಿದ್ದು ಸರಿಯಲ್ಲ. ಇದೇ ಯೋಜನೆ ವಿಚಾರಕ್ಕೆ ಜೂ.23ರಂದು ಚಿಕ್ಕಮಗಳೂರು ಜಿಪಂ ಕಚೇರಿಯಲ್ಲಿ ಹೊಸದುರ್ಗ, ತರೀಕೆರೆ ಶಾಸಕರ ನೇತೃತ್ವದಲ್ಲಿ ಸಭೆ ಕರೆದಿದ್ದಾರೆ. ಆದರೆ, ಭದ್ರಾ ನಾಲೆ ಅಚ್ಚುಕಟ್ಟು ವ್ಯಾಪ್ತಿಯ ಶಾಸಕರಿಗೆ ಸಭೆಗೆ ಆಹ್ವಾನಿಸಿಲ್ಲ ಎಂದರು.

ಈಗಾಗಲೇ ಭದ್ರಾ ನಾಲಾ ವ್ಯಾಪ್ತಿಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹೊನ್ನಾಳಿ ಭಾಗದ ರೈತರು, ಅಚ್ಚುಕಟ್ಟು ಕೊನೆಯ ಭಾಗದ ರೈತರು ನೀರು ಹಾಯಿಸಿಕೊಳ್ಳಲು ಕಷ್ಟದ ಪರಿಸ್ಥಿತಿ ಇದೆ ಎಂದರು.

ಶಾಸಕ ಬಿ.ಪಿ.ಹರೀಶ ಮಾತನಾಡಿ, ಭದ್ರಾ ಡ್ಯಾಂ ನಿರ್ಮಾಣವಾಗಿಯೇ ದಶಕಗಳು ಕಳೆದಿವೆ. ಭದ್ರಾ ಡ್ಯಾಂನ ಬಫರ್ ಝೋನ್‌ನಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು. ಜಲಾಶಯದ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಯಾವುದೇ ಕಾಮಗಾರಿ ಕೈಗೊಳ್ಳಬಾರದು. ಭದ್ರಾ ಡ್ಯಾಂನ ಬಲದಂಡೆ ಸೀಳಿ, ಸುಮಾರು 8 ಅಡಿ ಆಳದಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಸದ್ದಿಲ್ಲದೇ ಸರ್ಕಾರ, ನೀರಾವರಿ ಇಲಾಖೆ ಅಧಿಕಾರಿಗಳು ಮಾಡಲು ಹೊರಟಿರುವುದು ಖಂಡನೀಯ ಎಂದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಅಣಬೇರು ಜೀವನಮೂರ್ತಿ, ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಎ.ವೈ.ಪ್ರಕಾಶ, ಅಣ್ಣೇಶ ಕುಮಾರನಹಳ್ಳಿ, ಹರಿಹರದ ಲಿಂಗರಾಜ ಹಿಂಡಸಘಟ್ಟ, ಶಾಂತರಾಜ ಪಾಟೀಲ, ಮುರುಗೇಶ ಆರಾಧ್ಯ, ಶಿವನಹಳ್ಳಿ ರೇಶ, ಜಿ.ಎಸ್.ಶ್ಯಾಮ್ ಮಾಯಕೊಂಡ, ಎಂ.ಹಾಲೇಶ, ಕೆ.ಆರ್.ವಸಂತಕುಮಾರ, ಎಚ್.ಎನ್.ಶಿವಕುಮಾರ, ಅಣಬೇರು ನಂದಕುಮಾರ, ಶಿವರಾಜ ಪಾಟೀಲ, ಎಸ್.ಟಿ.ಯೋಗೇಶ್ವರ ಯಗ್ಗಪ್ಪ, ಸಿದ್ದೇಶ, ಸುರೇಶ ಗಂಡುಗಾಳೆ, ಜಯಪ್ರಕಾಶ, ಹೇಮಂತಕುಮಾರ, ದೊಗ್ಗಳ್ಳಿ ವೀರೇಶ, ಸಂಗನಗೌಡ್ರು, ಅನಿಲ್ ಕತ್ತಲಗೆರೆ, ಶ್ಯಾಗಲೆ ದೇವೇಂದ್ರಪ್ಪ, ಅಣಜಿ ಗುಡ್ಡೇಶ, ವಿಜಯಕುಮಾರ, ಹೆಮ್ಮನಬೇತೂರು ಶಶಿಧರ, ಕಂದನಕೋವಿ ಹನುಮಂತಪ್ಪ, ಮೆಳ್ಳೆಕಟ್ಟೆ ಹನುಮಂತಪ್ಪ, ಆಲೂರು ಅಜ್ಜಯ್ಯ, ರಾಜು ನೀಲಗುಂದ, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ, ಕಿಶೋರಕುಮಾರ, ಭಾಗ್ಯ ಪಿಸಾಳೆ, ಗೌರ ಬಾಯಿ, ಮಂಜುಳಾ ಇಟ್ಟಿಗೆ, ನೀತಾ ನಂದೀಶ, ಕಮಲ, ರೇಖಾ ಸೇರಿದಂತೆ ಅಚ್ಚುಕಟ್ಟು ರೈತರು, ಪಕ್ಷದ ಕಾರ್ಯಕರ್ತರು ಇದ್ದರು. ನಂತರ ಭದ್ರಾ ಡ್ಯಾಂಗೆ ಮುಖಂಡರು, ಕಾರ್ಯಕರ್ತರು ತೆರಳಿದರು.

PREV
Read more Articles on

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ