ಹುಲಸೂರು ತಾಲೂಕಿನ ಹಾಲಹಳ್ಳಿ ಕ್ರಾಸ್ ಬಳಿ ಸೋಮವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಹಳ್ಳಕ್ಕೆ ಉರುಳಿದ್ದು ಅಪಘಾತದಲ್ಲಿ 15ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕಿಯರು ಸೇರಿದಂತೆ ಚಾಲಕನಿಗೂ ಗಾಯಗಳಾದ ಘಟನೆ ಜರುಗಿದೆ.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಹುಲಸೂರು ತಾಲೂಕಿನ ಹಾಲಹಳ್ಳಿ ಕ್ರಾಸ್ ಬಳಿ ಸೋಮವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಹಳ್ಳಕ್ಕೆ ಉರುಳಿದ್ದು ಅಪಘಾತದಲ್ಲಿ 15ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕಿಯರು ಸೇರಿದಂತೆ ಚಾಲಕನಿಗೂ ಗಾಯಗಳಾದ ಘಟನೆ ಜರುಗಿದೆ.
ಪಟ್ಟಣದಿಂದ ಪ್ರತಿದಿನದಂತೆ ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಹೊಗುವ ಶಾಲಾ ಬಸ್ ಪಟ್ಟಣದಿಂದ ಕೆಸರ ಜವಳಗಾ, ಕಾದ್ರಾಬಾದವಾಡಿ ಮಾರ್ಗವಾಗಿ ಹಾಲಹಳ್ಳಿ ಗ್ರಾಮಕ್ಕೆ ತೆರಳುವ ಮಧ್ಯೆ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದೆ.
ಹುಲಸೂರು ಪಟ್ಟಣದ ಇಕ್ಬಾಲ್ ಪಟೇಲ್ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ್ದ ಶಾಲಾ ವಾಹನದಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕಿಯರು, ಅಡುಗೆ ಸಹಾಯಕಿಯರು ಇದ್ದರು.
ಅಪಘಾತವಾದ ತಕ್ಷಣವೇ ಗ್ರಾಮಸ್ಥರು ಆಂಬ್ಯುಲೆನ್ಸ್ ಮೂಲಕ ಪಟ್ಟಣದ ಸಮುದಾಯ ಆಸ್ಪತ್ರೆ, ಬಸವಕಲ್ಯಾಣ ಆಸ್ಪತ್ರೆ, ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದೊಯ್ಯಲಾಯಿತು.
ಆಸ್ಪತ್ರೆಗೆ ಶಾಸಕ ಶರಣು ಸಲಗರ್ ಭೇಟಿ: ಘಟನೆಯ ಸುದ್ದಿ ತಿಳಿಯುತಿದ್ದಂತೆ ಬಸವಕಲ್ಯಾಣ ಶಾಸಕ ಶರಣು ಸಲಗರ್ ಅವರು ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದರಲ್ಲದೇ ಗಾಯಳುಗಳಿಗೆ ಶಾಸಕರು ಧೈರ್ಯ ತುಂಬಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.