ರಾಜ್ಯದಲ್ಲಿವೇ 3000ಕ್ಕೂ ಹೆಚ್ಚು ಕೊಳಗೇರಿ

KannadaprabhaNewsNetwork |  
Published : Nov 21, 2026, 02:00 AM IST
ಕರ್ನಾಟಕ ವಿವಿವಿಯಲ್ಲಿ ಶುಕ್ರವಾರ ನಡೆದ ಸಮಾಜಶಾಸ್ತ್ರ ಸಮ್ಮೇಳನವನ್ನು ಶಾಸಕ ಪ್ರಸಾದ ಅಬ್ಬಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ಕೊಳಗೇರಿಗಳಲ್ಲಿ ವಾಸಿಸುವ ಜನರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ಅಲ್ಲಿ ವಾಸಿಸುವ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವುದು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದು ಇಂದಿನ ಅಗತ್ಯವಿದೆ.

ಧಾರವಾಡ:

ಕೊಳಗೇರಿಗಳಲ್ಲಿ ವಾಸಿಸುವ ಜನರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ಅಲ್ಲಿ ವಾಸಿಸುವ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವುದು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದು ಇಂದಿನ ಅಗತ್ಯ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ ಹೇಳಿದರು.

ಕರ್ನಾಟಕ ಸಮಾಜಶಾಸ್ತ್ರ ಸಂಘವು ಕರ್ನಾಟಕ ವಿಶ್ವವಿದ್ಯಾಲಯ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ನಗರ ಭಾರತದ ಕೊಳಗೇರಿ ಪ್ರದೇಶಗಳು, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ನ್ಯಾಯ: ನಗರ ಅಂಚಿನ ಸಮುದಾಯಗಳ ನೆಲೆಗಳು " ವಿಷಯದ ಕುರಿತು ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ 18ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಕರ್ನಾಟಕದಲ್ಲಿ 3 ಸಾವಿರ ಕೊಳಗೇರಿಗಳನ್ನು ಹೊಂದಿದ್ದು, ಸಾವಿರಾರು ಜನರು ಮೂಲಭೂತ ಸೌಕರ್ಯಗಳಿಲ್ಲದೇ ಅಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯ ಜನರನ್ನು ಕಾನೂನು ಬಾಹಿರ ಚಟುವಟಿಕೆಗಳೆ ಬಳಸಿಕೊಳ್ಖುತ್ತಿರುವುದು ವಿಷಾದದ ಸಂಗತಿ ಎಂದ ಅವರು, ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅಲ್ಲಿಯ ಜನರಿಗೆ ಅನೇಕ ಯೋಜನೆ, ಕಾನೂನುಗಳನ್ನು ರೂಪಿಸಿದೆ. ಹುಬ್ಬಳ್ಳಿಯಲ್ಲಿ ಕೊಳಗೇರಿ ನಿವಾಸಿಗಳಿಗೆ ಅಪಾರ್ಟ್ಮೆಂಟ್ ಮಾದರಿಯಲ್ಲಿ ಮನೆಗಳನ್ನು ‌ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ‌ನೀಡಿದೆ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕೊಳಗೇರಿ ಸಮುದಾಯಕ್ಕೆ ನೀಡಿದ ಮೂಲಭೂತ ಸೌಕರ್ಯಗಳ ಕುರಿತು ಮೌಲ್ಯಮಾಪನದ ಅಗತ್ಯವಿದೆ. ಅಲ್ಲಿಯ ಜನರಿಗೆ ಭೂಮಿ ಹಾಗೂ ಗುಣಮಟ್ಟದ ಮನೆ ಒದಗಿಸುವ ಅಗತ್ಯವಿದೆ. ಪಶ್ಚಿಮ ಕ್ಷೇತ್ರದ ಕೊಳಗೇರಿ ನಿವಾಸಿಗಳಿಗೆ ಮನೆಗಳನ್ನು ಕಲ್ಯಾಣ ಮಂಟಪಗಳನ್ನು ನೀಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಕೊಳಗೇರಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ. ಅರವಿಂದರ್ ಅನ್ಸಾರಿ ದಿಕ್ಸೂಚಿ ಭಾಷಣ ಮಾಡಿದರು. ನಗರ ಭಾರತವು ಹೆಚ್ಚು ಕೊಳಗೇರಿಗಳನ್ನು ಹೊಂದಿರುವುದು ಆತಂಕ ತಂದಿದೆ. ದೆಹಲಿ, ಮುಂಬೈ,‌ ಬೆಂಗಳೂರು, ಚೆನ್ನೈ ಅಂತಹ ಮಹಾನಗರಗಳ ಕೊಳಗೇರಿಗಳಲ್ಲಿ ವಾಸದ ಅಸ್ಥಿರತೆ, ಅಭದ್ರತೆ, ಆರೋಗ್ಯ ಮತ್ತು ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹು-ಧಾ, ‌ಬೆಳಗಾವಿ ಹಾಗೂ 2ನೇ ಹಂತದ ನಗರಗಳಲ್ಲಿ ಕೊಳಗೇರಿಗಳು ರೂಪಗೊಳ್ಳುವ ಮುನ್ನ ಪೂರ್ಣ ಪ್ರಮಾಣದ ಯೋಜನೆ ರೂಪಿಸುವ ಅವಶ್ಯಕತೆ ಇದೆ ಎಂಬ ಸಲಹೆ ನೀಡಿದರು.

ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, ಕೊಳಗೇರಿಯಲ್ಲಿ ವಾಸಿಸುವ ಸಮುದಾಯಗಳಿಗೆ ಯಾವ ರೀತಿಯಲ್ಲಿ ಪರಿಹಾರ ನೀಡುವಲ್ಲಿ ಸಮಾಜಶಾಸ್ತ್ರಜ್ಞರು ಚಿಂತನೆ ‌ನಡೆಸುವ ಅಗತ್ಯವಿದೆ ಎಂದರು.

ಇದೇ ವೇಳೆ ಅಕ್ಷರ ಸೂರ್ಯ ಹೆಸರಿನ ಹನ್ನೆರಡು ಸಂಶೋಧನಾ ಸಂಚಿಕೆ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರೊ. ಎಂ. ಗುರಲಿಂಗಯ್ಯ, ಕುಲಸಚಿವ ಡಾ. ಅರವಿಂದ ಕರಬಸಣ್ಣಗೌಡ, ಪ್ರೊ. ಸುಧಾ ಕೊಕಾಟೆ, ಡಾ. ಶಾಂತಾ ಅಷ್ಟಗಿ, ಡಾ. ಸುಭಾಷ ನಾಟೀಕಾರ, ಶೌಕತ್ ಅಜೀಮ್, ಡಾ. ಧ್ರುವ ಜ್ಯೋತಿ, ಡಾ. ಹನುಮಗೌಡ. ಸಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ