ಚಳ್ಳಕೆರೆ: ತಾಲೂಕಿನ ಗಡಿ ಭಾಗವಾದ ಮೊಳಕಾಲ್ಮುರು ವಿಧಾನಸಭಾ ವ್ಯಾಪ್ತಿ ಮೈಲನಹಳ್ಳಿ ಸಮೀಪದ ಕಸವಿಗೊಂಡನಹಳ್ಳಿ ಬಳಿ ೨೦೨೦ರಲ್ಲಿ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿಯಾಗಿದ್ದ ಬಿ.ಶ್ರೀರಾಮುಲು ಕಸವಿಗೊಂಡನಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಭೂಮಿ ಪೂಜೆ ನೆರವೇರಿಸಿದ್ದು, ಶೀಘ್ರ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಆಶ್ವಾಸನೆ ನೀಡಿದ್ದರು.
ಕಳೆದ ಹಲವಾರು ದಶಕಗಳಿಂದ ಮೈಲನಹಳ್ಳಿ, ಕಸವಿಗೊಂಡನಹಳ್ಳಿ ಸಂಪರ್ಕಕ್ಕೆ ಯಾವುದೇ ನೇರ ರಸ್ತೆಗಳಿರಲಿಲ್ಲ. ವೇದಾವತಿ ನದಿ ಮಾತ್ರ ಇದ್ದು ಇದರಿಂದ ಎರಡೂ ಗ್ರಾಮದ ಜನರು ತಮ್ಮ ಗ್ರಾಮಗಳಿಗೆ ಕೆಲವು ಕಿ.ಮೀ ದೂರದಿಂದ ಓಡಾಡಬೇಕಿತ್ತು. ಬ್ಯಾರೇಜ್ ನಿರ್ಮಾಣದಿಂದ ಎರಡೂ ಗ್ರಾಮಕ್ಕೆ ರಸ್ತೆ ಸಂಪರ್ಕ ದೊರಕಿದ್ದು, ಈ ಭಾಗದ ಜನರ ದಶಕಗಳ ಕನಸು ನನಸಾಗಿದೆ ಎಂದು ಗ್ರಾಮಸ್ಥರು ಸಂತಸ ಪಟ್ಟರು.