ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನ ಮಾಲೀಕರು ವಾಹನ ಪರವಾನಗಿ, ಸುಸ್ಥಿತಿ ದೃಢೀಕರಣ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ಸರಿಪಡಿಸಿಕೊಂಡಿರಬೇಕು ಎಂದು ನಾಗಮಂಗಲದ ಆರ್‌ಟಿಒ ನಿರೀಕ್ಷಕಿ ಶಬಾಜಾಬಾನು ತಿಳಿಸಿದರು.ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಸಭೆ ನಡೆಸಿ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.
ರಸ್ತೆಯ ಎಲ್ಲರೂ ನಿಯಮ ಪಾಲನೆ ಮಾಡಿದರೆ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಕಡಿಮೆಯಾಗಲಿವೆ. ಬಹುತೇಕ ಅಪಘಾತಗಳು ಸಂಭವಿಸುತ್ತಿರುವುದು ಅತೀವೇಘ, ಅಜಾಗರೂಕತೆ ಚಾಲನೆ ಮತ್ತು ಮದ್ಯ ಪಾನ ಮಾಡಿ ಚಾಲನೆ ಮಾಡುತ್ತಿರುವುದೇ ಕಾರಣ ಎಂದರು.ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಜೊತೆಗೆ ಜಾಗೃತಿಯಿಂದ ಚಾಲನೆ ಮಾಡಬೇಕು, ರಸ್ತೆ ವಿಶಾಲಾವಿದ್ದಾಗ ಮಾತ್ರ ಬೇರೊಂದು ವಾಹನವನ್ನು ಓವರ್ ಟೆಕ್ ಮಾಡಬೇಕು. ಎಷ್ಟೇ ತುರ್ತು ಕೆಲಸ ಇದ್ದರೂ ಆತುರದಿಂದ ವಾಹನ ಚಾಲನೆ ಮಾಡಬಾರದು. ಒಂದು ವೇಳೆ ನಿಯಮ ಪಾಲನೆ ಮಾಡಿರುವುದು ಕಂಡುಬಂದರೆ ದಂಡ ವಿಧಿಸುವ ಜೊತೆಗೆ ವಾಹನವನ್ನು ಮುಟ್ಟುಗೊಲು ಹಾಕಿಕೊಳ್ಳುವ ಅವಕಾಶ ಇದ್ದು ವಾಹನ ಮಾಲೀಕರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ಅಗ್ರಹಾರ ರಾಜೇಶ್, ಆಟೋ ಚಾಲಕ ಮತ್ತು ಮಾಲೀಕರ ಸಂಘದ ತಾಲೂಕು ಗೌರವ ಅದ್ಯಕ್ಷ ಎಚ್.ಬಿ.ಮಂಜುನಾಥ, ಚಾಲಕರಾದ ನಟರಾಜ್, ಮಂಜು, ಕಮಾರ್, ಅನಿಲ್, ವಿಜಿ ಮತ್ತಿತರರು ಹಾಜರಿದ್ದರು.100 ದಿನಗಳ ಕ್ಷಯ ಮುಕ್ತ ಭಾರತ ವಿಶೇಷ ಅಭಿಯಾನದ ಪೋಸ್ಟರ್ ಬಿಡುಗಡೆ
ಶ್ರೀರಂಗಪಟ್ಟಣ:ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ 100 ದಿನಗಳ ಕ್ಷಯ ಮುಕ್ತ ಭಾರತ ವಿಶೇಷ ಅಭಿಯಾನದ ಪೋಸ್ಟರನ್ನು ಪುರಸಭೆ ಉಪಾಧ್ಯಕ್ಷ ಎಂ.ಎಲ್.ದಿನೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಹಾಗು ಪುರಸಭೆ ಸದಸ್ಯ ನಂದೀಶ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡಿದರು.
ನಂತರ ದಿನೇಶ್ ಮಾತನಾಡಿ, ದುರ್ಬಲ ವರ್ಗದ ಎಲ್ಲಾ ಸಾರ್ವಜನಿಕರು, ಕ್ಷಯ ರೋಗ ಲಕ್ಷಣವುಳ್ಳವರು, ಮಧುಮೇಹಿಗಳು, ಕ್ಷಯ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳ ಕುಟುಂಬದ ಸದಸ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕಫ ಪರೀಕ್ಷೆ, ಕ್ಷ ಕಿರಣ ಪರೀಕ್ಷೆ ಮಾಡಿಸಿಕೊಂಡು ಕ್ಷಯ ರೋಗವಿರುವುದು ಕಂಡುಬಂದಲ್ಲಿ ಉಚಿತ ಚಿಕಿತ್ಸೆ ಪಡೆದುಕೊಂಡು ಗುಣ ಮುಕ್ತರಾಗಿ ಕ್ಷಯ ಮುಕ್ತ ಭಾರತ ಮಾಡಲು ಎಲ್ಲರೂ ಸಹಕರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರು, ಪುರಸಭೆ ನೌಕರರು, ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.