ಕುಣಿಗಲ್ ತಾಲೂಕಿಗೆ ಬರುವ ನೀರಿನ ಪಾಲನ್ನು ಪಡೆಯುವ ಉದ್ದೇಶದಿಂದ ತುರುವೇಕೆರೆ ಭಾಗದ ರೈತರನ್ನು ಮನವೊಲಿಸಲು ಕಾಲುವೆ ಮೇಲೆ ಪಾದಯಾತ್ರೆ ಮಾಡಲು ಸಿದ್ಧನಿದ್ದೇನೆ ಕುಣಿಗಲ್ ಶಾಸಕ ಡಾ.ರಂಗನಾಥ್ ತಿಳಿಸಿದ್ದಾರೆ .
ಕನ್ನಡ ಪ್ರಭ ವಾರ್ತೆ ಕುಣಿಗಲ್
ಕುಣಿಗಲ್ ತಾಲೂಕಿಗೆ ಬರುವ ನೀರಿನ ಪಾಲನ್ನು ಪಡೆಯುವ ಉದ್ದೇಶದಿಂದ ತುರುವೇಕೆರೆ ಭಾಗದ ರೈತರನ್ನು ಮನವೊಲಿಸಲು ಕಾಲುವೆ ಮೇಲೆ ಪಾದಯಾತ್ರೆ ಮಾಡಲು ಸಿದ್ಧನಿದ್ದೇನೆ ಕುಣಿಗಲ್ ಶಾಸಕ ಡಾ.ರಂಗನಾಥ್ ತಿಳಿಸಿದ್ದಾರೆ . ಕುಣಿಗಲ್ ಗೆ ಬಂದ ಹೇಮಾವತಿ ಜಲಾಶಯದ ನೀರಿಗೆ ಪೂಜೆ ಸಲ್ಲಿಸಿ ಮಾತನಾಡಿ ಶಾಸಕನಾಗಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಇಂತಹ ಸಮಸ್ಯೆಗಳು ಬರುವುದು ಮಾಮೂಲಿ. ರಾಜ್ಯದ ಬರಗಾಲಕ್ಕಾಗಿ ಮುಖ್ಯಮಂತ್ರಿಗಳು ವಿಶೇಷ ಯೋಜನೆಯನ್ನು ಸಿದ್ದಪಡಿಸುತ್ತಿದ್ದಾರೆ. ರಾಜ್ಯದ 101 ತಾಲೂಕುಗಳು ಬರದ ಪಟ್ಟಿಯಲ್ಲಿದೆ ರಾಜ್ಯ ಸರ್ಕಾರದ ಅನುದಾನದ ಜೊತೆಗೆ ಕೇಂದ್ರ ಸರ್ಕಾರದ ಅನುದಾನವನ್ನು ನಿರೀಕ್ಷಿಸುತ್ತಿದ್ದೇವೆ ಬರದ ಮಾನದಂಡಗಳ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲು ಸಿದ್ದವಿದ್ದೇವೆ . ಕಳೆದ ಬಾರಿ ನಡೆದ ಕಾವೇರಿ ನೀರಾವರಿ ನಿಗಮ ಮಂಡಳಿ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ನಾನು ಸಚಿವರು ಹಾಗೂ ಉಪಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ. 1400 ಕ್ಯೂಸೆಕ್ಸ್ನೀ ರು ಬಿಡಲಾಗಿದ್ದು ಕುಣಿಗಲ್ ಗೆ 60 ರಿಂದ 80 ಕ್ಯೂಸೆಕ್ಸ್ ಮಾತ್ರ ಬರುತ್ತಿದೆ. ಮುಂದಿನ 10 ದಿನ ನೀರು ನಿರಂತರವಾಗಿ ಹರಿಯಲಿದೆ. ನೀರಿನ ರಕ್ಷಣೆಗಾಗಿ ತುರುವೇಕೆರೆ , ಗುಬ್ಬಿ ಭಾಗದ ರೈತರಿಗೆ ಮನವರಿಕೆ ಮಾಡಲಿದ್ದು, ನೀರಿನ ಪಾಲನ್ನು ಪಡೆಯುವುದರ ಜೊತೆಗೆ ಪ್ರತಿಯೊಬ್ಬರಿಗೂ ಸಮಾನವಾದ ಹಂಚಿಕೆ ಆಗುವಂತೆ ನ್ಯಾಯಯುತ ಪಾಲು ನೀಡಲು ಅಧಿಕಾರಿಗೆ ತಿಳಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಹೇಮಾವತಿ ಇಲಾಖಾ ಅಧಿಕಾರಿ ರವಿ , ಮುಖಂಡರಾದ ರಂಗಣ್ಣಗೌಡ , ಪಾಪಣ್ಣ , ಜಬೀವುಲ್ಲಾ ಹರೀಶ್ ಸೇರಿದಂತೆ ಇತರರು ಇದ್ದರು .
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.