ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕು, ಸೇವಾ ಅವಧಿಯಲ್ಲಿ ಮೃತರಾದರೆ 10 ಲಕ್ಷ ರು ಇಡಿ ಗಂಟು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾ ಸಂಘದ ವತಿಯಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ, ತುಮಕೂರು ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕು, ಸೇವಾ ಅವಧಿಯಲ್ಲಿ ಮೃತರಾದರೆ 10 ಲಕ್ಷ ರು ಇಡಿ ಗಂಟು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾ ಸಂಘದ ವತಿಯಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.ಸಂಘದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ನೇತೃತ್ವದಲ್ಲಿ ನೂರಾರು ಪೌರ ನೀರು ಸರಬರಾಜು ನೌಕರರು ನಗರದ ಸಿದ್ದಗಂಗಾ ಮಠದಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗದಿಂದ ಚಾಲನೆ ದೊರೆಯಿತು.ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಪೌರ ಸೇವಾ ನೀರು ಸರಬರಾಜು ನೌಕರರ ಮಹಾ ಸಂಘದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್,ಸತತ 25 ಕ್ಕೂ ಹೆಚ್ಚು ವರ್ಷಗಳಿಂದ ಮಳೆ,ಚಳಿ,ಹಬ್ಬ, ಹರಿದಿನಗಳೆನ್ನದೆ ಜೀವ ಜಲ ಸರಬರಾಜು ಮಾಡುತ್ತಿರುವ ನೌಕರರಿಗೆ ಇಲ್ಲಿಯವರೆಗೂ ಕನಿಷ್ಠ ವೇತನ ಇಲ್ಲ . ಸರ್ಕಾರ ನೇರ ನೇಮಕಾತಿ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿದೆ.ಆದರೆ ತಾಂತ್ರಿಕ ಕಾರಣದಿಂದ ಹಣಕಾಸು ಇಲಾಖೆ ಪೌರಾಡಳಿತ ಇಲಾಖೆಗೆ ವಾಪಸ್ಸು ಮಾಡಿದೆ.ಈ ಬಾರಿ ರಾಜ್ಯದ 6 ಸಾವಿರ ನೀರು ಸರಬರಾಜು ನೌಕರರು ಒಗ್ಗೂಡಿ, ಮುಖ್ಯಮಂತ್ರಿಗಳ ಮನೆಯವರೆಗೆ ಪಾದಯಾತ್ರೆ ಕೈಗೊಂಡಿದ್ದು, ಸರ್ಕಾರದ ಸ್ಪಷ್ಟ ಆದೇಶ ಬರುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಪಾವಗಡ ಶ್ರೀರಾಮ್ ಸ್ಪಷ್ಟಪಡಿಸಿದರು.
ಪೌರ ನೀರು ಸರಬರಾಜು ನೌಕರರ ಪಾದಯಾತ್ರೆಗೆ ಬೆಂಬಲ ಸೂಚಿಸಿ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಧನಿಯಕುಮಾರ್, ನೀರು ಸರಬರಾಜು ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ.ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿರುವ ನೌಕರರಿಗೆ ನ್ಯಾಯ ಸಿಗಬೇಕು. ಇಂದಿನ ಬೆಲೆ ಹೆಚ್ಚಳದ ಸಂರ್ಭಯದಲ್ಲಿ ಸರ್ಕಾರ ಇವರ ಮನವಿಗೆ ಸ್ಪಂದಿಸಬೇಕು.ಅಲ್ಲದೆ ಪೌರಕರ್ಮಿಯಕರು, ನೀರು ಸರಬರಾಜು ನೌಕರರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಬೇಕೆಂದು ಒತ್ತಾಯಿಸಿದರು. ಪಾಲಿಕೆಯ ಪರವಾಗಿ ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತರಾದ ಶುಭ, 2016 ರಲ್ಲಿಯೇ ಇಲಾಖೆಯ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2017 ರಲ್ಲಿ ವಿಶಾಲ್ ಅವರು ಪೌರಾಡಳಿತ ಇಲಾಖೆಯ ಆಯುಕ್ತರಾಗಿದ್ದ ಸಂರ್ಭನದಲ್ಲಿ ನೇರ ನೇಮಕ ಹಾಗೂ ನೇರಪಾವತಿಗೆ ಒಳಪಡಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದ ಮುಂದಿದೆ. ಅಲ್ಲದೆ ಕನಿಷ್ಠ ವೇತನ ಯೋಜನೆಗೆ ತಾತ್ಕಾಲಿಕ ತಡೆ ಇದೆ. ಅದು ತೆರವಾದ ತಕ್ಷಣ ತುಮಕೂರು ಪಾಲಿಕೆಯ ವತಿಯಿಂದ ಎಲ್ಲಾ ಪೌರ ಸೇವಾ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಸಿದ್ದ, ಸೆಪ್ಟಂಬರ್ 23ಕ್ಕೆ ಪೌರಕಾರ್ಮಿಕರ ದಿನಾಚರಣೆ ಇದ್ದು, ಅವರ ರೀತಿಯಲ್ಲಿಯೇ ನೀರು ಸರಬರಾಜು ನೌಕರರ ದಿನವನ್ನು ಆಚರಿಸುವಂತಾಗಲಿ ಎಂದು ಪಾದಯಾತ್ರೆ ಶುಭ ಕೋರಿದರು. ಈ ವೇಳೆ ದಸಂಸ ಮುಖಂಡ ಕಿರಣ್‌ಕುಮಾರ್, ಕರ್ನಾಟಕ ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾ ಸಂಘದ ಉಪಾಧ್ಯಕ್ಷ ಸತೀಶ್, ಮಂಜುನಾಥ್.ಡಿ.ಆರ್, ಪುರುಷೋತ್ತಮ್, ಪ್ರಧಾನ ಕಾರ್ಯೇದರ್ಶಿಗಳಾದ ಕಿರಣಕುಮಾರ್, ನವೀನಾಕ್ಷ, ರಮೇಶ್.ಕೆ.ಎಸ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.