ಪಡುಬೆಳ್ಳೆ: ಪ್ರತಿಭಾ ಪುರಸ್ಕಾರ, ವನಮಹೋತ್ಸವ, ಇಂಟರ್‍ಯಾಕ್ಟ್ ಪದಗ್ರಹಣ

KannadaprabhaNewsNetwork |  
Published : Jul 30, 2025, 12:51 AM IST
29ಪಡುಬೆಳ್ಳೆ | Kannada Prabha

ಸಾರಾಂಶ

ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಭವಿಷ್ಯಾ, ಡೇವಿಡ್ ತರಂಗ್, ದೀಕ್ಷಾ ಆಚಾರ್ಯ, ಸೃಜನ್ ಮೂಲ್ಯ ಅವರನ್ನು ಇಂಟರ್‍ಯಾಕ್ಟ್ ಕ್ಲಬ್‌ಗಳ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಶಿರ್ವ ರೋಟರಿ ವತಿಯಿಂದ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಭವಿಷ್ಯಾ, ಡೇವಿಡ್ ತರಂಗ್, ದೀಕ್ಷಾ ಆಚಾರ್ಯ, ಸೃಜನ್ ಮೂಲ್ಯ ಅವರನ್ನು ಇಂಟರ್‍ಯಾಕ್ಟ್ ಕ್ಲಬ್‌ಗಳ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಶಿರ್ವ ರೋಟರಿ ವತಿಯಿಂದ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸೋಮವಾರ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ಶಿರ್ವ ರೋಟರಿ ಅಧ್ಯಕ್ಷ ವಿಲಿಯಮ್ ಮಚಾದೋ ಇವರು ಆಂಗ್ಲ ಮಾಧ್ಯಮ ಶಾಲಾ ಇಂಟರ್‍ಯಾಕ್ಟ್ ನೂತನ ಅಧ್ಯಕ್ಷ ಸಿಂಚನಾ, ಕಾರ್ಯದರ್ಶಿ ಸ್ನಿಗ್ದ ಹಾಗೂ ಕನ್ನಡ ಮಾಧ್ಯಮ ಪ್ರೌಢ ಶಾಲಾ ಇಂಟರ್‍ಯಾಕ್ಟ್ ನೂತನ ಅಧ್ಯಕ್ಷ ಆಶಿನಿ, ಕಾರ್ಯದರ್ಶಿ ಪ್ರಣೀತ ಮತ್ತು ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ ಶುಭ ಹಾರೈಸಿದರು.

ಶಾಲಾ ಆಡಳಿತ ಮಂಡಳಿಯ ಶಿವಾಜಿ ಎಸ್.ಸುವರ್ಣ, ಕಟಪಾಡಿ ಶಂಕರ ಪೂಜಾರಿ, ರೋಟೆರಿಯನ್ ಗಳಾದ ಡಾ, ವಿಠಲ್ ನಾಯಕ್, ಬಿ.ಪುಂಡಲೀಕ ಮರಾಠೆ, ಉಭಯ ಶಾಲೆಗಳ ಮುಖ್ಯೋಪಾಧ್ಯಾಯರಾದ ರಾಘವೇಂದ್ರ, ಉಪಾ ಎಸ್. ಮಾತನಾಡಿದರು.ಶಿಕ್ಷಕ ಸಂಯೋಜಕರಾದ ಸುರೇಶ್ ನಾಯಕ್, ವೀಣಾ ಆಚಾರ್ಯ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ನಿಕಟಪೂರ್ವ ಅಧ್ಯಕ್ಷರಾದ ದಿವ್ಯಾಂಶ್, ಧೀರಜ್, ಕಾರ್ಯದರ್ಶಿಗಳಾದ ಪೂರ್ವಿ, ವರ್ಷಾ ವೇದಿಕೆಯಲ್ಲಿದ್ದರು. ತ್ರಿಶಾ ನಿರೂಪಿಸಿದರು. ಅಶಿನಿ ಧನ್ಯವಾದವಿತ್ತರು.ನಂತರ ಉಭಯ ಶಾಲಾ ವಠಾರದಲ್ಲಿ ನೆಟ್ಟು ಬೆಳೆಸಲು ತಲಾ 20 ಫಲ ಬರುವ ಗಿಡಗಳನ್ನು ವಿತರಿಸಿ ವನಮಹೋತ್ಸವ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಹುದ್ದೆ ಬಗ್ಗೆ ರಾಹುಲ್‌ ನಿರ್ಧಾರ ಮಾಡ್ತಾರೆ : ಸಿದ್ದು
ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ