ಮೂಲ್ಕಿ: ಪಡುಪಣಂಬೂರು ವ್ಯವಸಾಯಿಕ ಸಹಕಾರ ಸಂಘವು ಬ್ಯಾಂಕಿಂಗ್ ಜೊತೆಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಾಧಕರಾಗಿ ಪಡೆದುಕೊಂಡ ಸಹಾಯವನ್ನು ಮರೆಯಬಾರದೆಂದು ಹಳೆಯಂಗಡಿ ಪಿ.ಸಿ.ಎ ಬ್ಯಾಂಕ್ ಮಾಜಿ ನಿರ್ದೇಶಕ ಭೋಜ್ ರಾಜ್ ಕರ್ಕೇರ ಹೇಳಿದರು.
ಸಂಘದ ಉಪಾಧ್ಯಕ್ಷೆ ಮೀರಾ ಬಾಯಿ ಕೆ. ನಿರ್ದೇಶಕರಾದ ವಿನೋದ್ ಕುಮಾರ್ ಬೊಳ್ಳೂರು, ಎಚ್. ವಸಂತ್ ಬೆರ್ನಾರ್ಡ್, ಧರ್ಮಾನಂದ ಶೆಟ್ಟಿಗಾರ್, ಅಶೋಕ್ ಬಂಗೇರ, ಸೇಸಪ್ಪ ಟಿ. ಸಾಲ್ಯಾನ್, ಸಂಧ್ಯಾ, ಮುಖೇಶ್ ಸುವರ್ಣ, ಶಿವರಾಮ ಶೆಟ್ಟಿ , ರೋಶನಾಬಿ ಧನಂಜಯ ಕುಮಾರ್, ಸೊಸೈಟಿಯ ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ, ನಾಮ ನಿರ್ದೇಶಕರಾದ ಹಿಮಕರ ಆರ್ ಪುತ್ರನ್, ಮನೋಜ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮಕರ್ ಉಪಸ್ಥಿತರಿದ್ದರು. ಕಾರ್ಯನಿರ್ವಣಾಧಿಕಾರಿ ಹಿಮಕರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಶ್ರೀಕಾಂತಿ ಶೆಟ್ಟಿ ವಂದಿಸಿದರು. ಸಿಬ್ಬಂದಿ ಅಭಿಷೇಕ್ ನಿರೂಪಿಸಿದರು.