ಜಗಳೂರು: ಪರಿಸರ, ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವಂತೆ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ಕೆ ಕನ್ನಡಪ್ರಭ, ಏಷ್ಯಾನೇಟ್ ಸುವರ್ಣ ನ್ಯೂಸ್ ಹಮ್ಮಿಕೊಂಡಿರುವುದು ಚಿತ್ರಕಲೆ ಸ್ವರ್ಧೆ ಶ್ಲಾಘನೀಯ. ಮುಂದಿನ ವರ್ಷದಲ್ಲಿ ಕನ್ನಡಪ್ರಭದಿಂದ ನಡೆಯುವ ಈ ಕಾರ್ಯಕ್ರಮಕ್ಕೆ ನಾನೇ ವೈಯಕ್ತಿಕವಾಗಿ ತಾಲೂಕಿನಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಬೈಸಿಕಲ್ ವಿತರಿಸುವೆ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬುಧವಾರ ಕನ್ನಡಪ್ರಭ / ಏಷ್ಯಾನೇಟ್ ಸುವರ್ಣ ನ್ಯೂಸ್ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಜಗಳೂರು ತಾಲೂಕುಮಟ್ಟದ ಚಿತ್ರ ಕಲಾ ಸ್ಪರ್ಧೆ-2025 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.ಜಗಳೂರು ತಾಲೂಕಿನಲ್ಲಿ ಕೊಂಡುಕುರಿ ವನ್ಯಧಾಮ, ಮಡ್ರಹಳ್ಳಿ ಸೇರಿದಂತೆ ವಿವಿಧ ಭಾಗದಲ್ಲಿ ಬೃಹತ್ ಅರಣ್ಯ ಪ್ರದೇಶವಿದ್ದು, ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಎಸ್‌ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಒಂದು ದಿವಸ ಪ್ರವಾಸ ಮಾಡಿಸಿ, ಅವರಿಗೆ ಊಟದ ವ್ಯವಸ್ಥೆಯನ್ನು ನಾನು ಮಾಡಿಸುವೆ. ಇದರಿಂದ ಕನ್ನಡಪ್ರಭ ಪತ್ರಿಕೆ ಪರಿಸರ, ವನ್ಯಜೀವಿಗಳ ಸಂರಕ್ಷಣೆಗೆ ವಿದ್ಯಾರ್ಥಿಗಳಲ್ಲಿ ಚಿತ್ರಕಲಾ ಸ್ಪರ್ಧೆ ಮೂಲಕ ಜಾಗೃತಿ ಮೂಡಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು. ಕನ್ನಡಪ್ರಭ ದಾವಣಗೆರೆ ಜಿಲ್ಲಾ ವರಿದಿಗಾರ ನಾಗರಾಜ್ ಬಡದಾಳ್ ಮಾತನಾಡಿ, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗೆಡೆ ಅವರು ಮಕ್ಕಳಲ್ಲಿ ಪರಿಸರ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಿರುವ ಬಗ್ಗೆ ತಾಲೂಕುಮಟ್ಟದಿಂದ ರಾಜ್ಯಮಟ್ಟದಲ್ಲೂ ಪ್ರಶಂಸೆ ವ್ಯಕ್ತವಾಗುತ್ತಿವೆ ಎಂದು ತಿಳಿಸಿದರು.
ಕನ್ನಡಪ್ರಭ ತಾಲೂಕು ವರಿದಿಗಾರ ಚಿದಾನಂದ.ಜಿ.ಎಸ್, ಕ್ಷೇತ್ರ ಸಮನ್ವಯಾಧಿಕಾರಿ ಅಧಿಕಾರಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರ ಡಿ.ಡಿ.ಹಾಲಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್.ಎಂ.ಐ.ಹೊಳೆ, ವಿಕಲಚೇತನರ ಅಭಿವೃದ್ಧಿ ಸಂಘ ಬೆಂಗಳೂರಿನ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ್ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖ್ಯೋಪಾಧ್ಯ ಸಿ.ಮಹಾಂತೇಶ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಚಿ ಬಾಬು ಎಚ್.ಮರೇನಹಳ್ಳಿ, ಇಸಿಓ ಬಸವಾರಾಜ್, ಓಬನಾಯ್ಕ, ಬಿಆರ್‌ಪಿ ರವಿಕುಮಾರ್.ಕೆ.ಎಸ್, ನಾಗಪ್ಪ, ತೀರ್ಪುಗಾರರಾದ ದಿದ್ದಿಗಿ ಶಾಲೆಯ ಆಂಜನೇಯ, ರಾಮಾಂಜಿನೇಯಾ, ಜಗಳೂರು ವಸತಿ ಶಾಲೆಯ ರವೀಂದ್ರಸುತಾರ್, ಮರಿಕುಂಟೆ ಸ.ಪ್ರೌಢ ಶಾಲೆ ಸವಿತ ಕೆ.ಜಿ.ಮುನ್ನಾಸಾಭ್, ಮಹಮ್ಮದ್ ಷರೀಪ್, ಕನ್ನಡಪ್ರಭ ಜಾಹಿರಾತು ವಿಭಾಗದ ಸುಧೀಂದ್ರ ಮತ್ತಿತರರಿದ್ದರು.ಬಹುಮಾನ ವಿತರಣೆ ಪ್ರಥಮ ಸ್ಥಾನ ಪಡೆದ ಡಾ.ಅಂಬೇಡ್ಕರ್ ವಸತಿ ಶಾಲೆಯ ಹೊಸಹಟ್ಟಿ ವಿದ್ಯಾರ್ಥಿ ಪ್ರಿಥ್ವಿ.ಎಂ ಅವರಿಗೆ ಕನ್ನಡಪ್ರಭದಿಂದ ಬ್ಯಾಗ್, ಪ್ರಶಸ್ತಿ ಪತ್ರ ಹಾಗೂ ಮಾಜಿ ಶಾಸಕ ರಾಮಚಂದ್ರ ಅವರಿಂದ ₹5 ಸಾವಿರ, ದ್ವಿತೀಯ ಸ್ಥಾನ ಪಡೆದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಧನುಷ್ ನಾಡಿಗಾರ್ ಅವರಿಗೆ ₹3 ಸಾವಿರ, ತೃತೀಯ ಸ್ಥಾನ ಪಡೆದ ರಸ್ತೆಮಾಚಿಕೆರೆ ಜಿ.ಎಚ್.ಶಾಲೆಯ ಅಭಿಷೇಕ್.ಬಿ ಅವರಿಗೆ ₹2 ಸಾವಿರ, ಸಮಾಧಾನಕರ ಬಹುಮಾನ ಪಡೆದ ಜಿ.ಎಚ್.ಎಸ್.ಮರಕುಂಟೆಯ ಅರ್ಪಿತ.ಎಂ, ಹಾಗೂ ಜಿಜೆಸಿ ಜಗಳೂರಿನ ನಿರಂಜನ್.ಆರ್.ಎನ್ ಅವರಿಗೆ ತಲಾ ₹1 ಸಾವಿರ, ಬ್ಯಾಗ್, ಪ್ರಶಸ್ತಿ ಪತ್ರ ನೀಡಲಾಯಿತು.
ಚಿತ್ರ ಕಲಾ ಸ್ಪರ್ಧೆಗೆ ಭಾಗವಹಿಸಿದ್ದ 80 ಮಕ್ಕಳಿಗೂ ಕನ್ನಡಪ್ರಭದಿಂದ ಪ್ರಶಸ್ತಿ ಪತ್ರನೀಡಿ ಪ್ರೋತ್ಸಾಹ ನೀಡಲಾಯಿತು.
ಕನ್ನಡಪ್ರಭ, ಸುವರ್ಣ ನ್ಯೂಸ್ ಪತ್ರಿಕಾ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಿಗೆ ಸದಾ ನನ್ನ ಬೆಂಬಲ ಇರುತ್ತದೆ. ರವಿ ಹೆಗಡೆ ಅವರ ಬಗ್ಗೆ ನನಗೆ ವಿಶೇಷ ಗೌರವವಿದ್ದು, ಅಧಿಕಾರ ಇದ್ದರೂ ಇಲ್ಲದಿದ್ದರೂ ಸದಾ ನಾನು ಸಂಸ್ಥೆಯೊಂದಿಗೆ ಇರುತ್ತೇನೆ.
- ಎಸ್.ವಿ.ರಾಮಚಂದ್ರ, ಮಾಜಿ ಶಾಸಕ, ಜಗಳೂರು