- "ಮನೆಗೆರಡು ಮರ- ದಾವಣಗೆರೆಗೆ ವರ " ಕಾರ್ಯಕ್ರಮ । ವನಸಂಪತ್ತು ರಕ್ಷಣೆಗೆ ಪಾಲಿಕೆ ಆಯುಕ್ತೆ ರೇಣುಕಾ ಸಲಹೆ - - -ಕನ್ನಡಪ್ರಭ ವಾರ್ತೆ, ದಾವಣಗೆರೆ
ಮಕ್ಕಳಲ್ಲಿ ಪರಿಸರ ಪ್ರೇಮ ಮೂಡಿಸುವ ಸಲುವಾಗಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಬಾಪೂಜಿ, ಗುಂಡಿ ಮಹದೇವಪ್ಪ, ಶಾಮನೂರು ಸರ್ಕಾರಿ ಪ್ರೌಢಶಾಲೆ, ಸೀತಮ್ಮ ವಸತಿಯುತ ಶಾಲೆ, ಬಕ್ಕೇಶ್ವರ , ಜಗದ್ಗುರು ಮುರುಘರಾಜೇಂದ್ರ ಪ್ರೌಢಶಾಲೆ, ವಿಶ್ವಭಾರತಿ ಮುಂತಾದ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಲ್ಲದೇ, ಎಂಸಿಸಿ ಬಿ ಬ್ಲಾಕ್‌ನಲ್ಲಿ ಗಿಡಗಳನ್ನು ನೆಟ್ಟು ಪರಿಸರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಈಗಾಗಲೇ ದೆಹಲಿಯಲ್ಲಿ 52 ಡಿಗ್ರಿ ಬಿರುಬಿಸಿಲಿನಿಂದ ಜನ ತತ್ತರಿಸುತ್ತಿರುವುದನ್ನು ನೋಡಿದ್ದೇವೆ. ದೆಹಲಿಯ ಪರಿಸ್ಥಿತಿ ದಾವಣಗೆರೆಗೆ ಬರಬಾರದೆಂದರೆ ನಾವು ಇಂದೇ ಎಚ್ಚೆತ್ತು, ಮುಂದಾಗುವ ದುಷ್ಪರಿಣಾಮಗಳನ್ನು ತಡೆಯಬೇಕು. ಸಾರ್ವಜನಿಕರು ಮನೆಯ ಮುಂದೆ ಎರಡೆರಡು ಗಿಡಗಳನ್ನು ನೆಡಲು ತನು-ಮನ-ಧನದಿಂದ ಸಹಕರಿಸಬೇಕು ಎಂದು ತಿಳಿಸಿದರು.ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಮರಗಳನ್ನು ಬೆಳೆಸುವುದು ಮತ್ತು ಸಂರಕ್ಷಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ. ಜನರು ಮನೆಯ ಮುಂದೆ ಗಿಡಗಳನ್ನು ನೆಟ್ಟ ಪರಿಸರ ಪ್ರೇಮದ ಈ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು. ಈ ವರ್ಷ 16 ಸಾವಿರ ಸಸಿಗಳನ್ನು ನಗರದಾದ್ಯಂತ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಮನೆಗರೆಡು ಮರ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದ್ಯದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
- - - -15ಕೆಡಿವಿಜಿ33ಃ:
ದಾವಣಗೆರೆಯಲ್ಲಿ ಎಸ್.ಎಸ್. ಜನ್ಮದಿನ ಅಂಗವಾಗಿ ಚಿತ್ರಕಲಾ ಸ್ಪರ್ಧೆ ನಡೆಯಿತು. -15ಕೆಡಿವಿಜಿ34ಃ:ದಾವಣಗೆರೆಯಲ್ಲಿ ಎಸ್.ಎಸ್. ಜನ್ಮದಿನದ ಅಂಗವಾಗಿ ಪರಿಸರ ದಿನಾಚರಣೆ ಪ್ರಯುಕ್ತ ಗಿಡಗಳನ್ನು ನಡೆಲಾಯಿತು.