ಮುಂಬರುವ ಜನಗಣತಿ-ಜಾತಿಗಣತಿ ಸಂದರ್ಭದಲ್ಲಿ ಪಂಚ ಪೀಠಗಳ ನಿಲುವನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಮೇ 7ರಂದು ಸಂಜೆ 7 ಗಂಟೆಗೆ ಮುಕ್ತಿಮಂದಿರ ಕ್ಷೇತ್ರದಲ್ಲಿ ಪಂಚ ಪೀಠಾಧೀಶರ ಸಮಾವೇಶ ನಡೆಯಲಿದೆ.
ಲಕ್ಷ್ಮೇಶ್ವರ: ಮುಂಬರುವ ಜನಗಣತಿ-ಜಾತಿಗಣತಿ ಸಂದರ್ಭದಲ್ಲಿ ಪಂಚ ಪೀಠಗಳ ನಿಲುವನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಮೇ 7ರಂದು ಸಂಜೆ 7 ಗಂಟೆಗೆ ಮುಕ್ತಿಮಂದಿರ ಕ್ಷೇತ್ರದಲ್ಲಿ ಪಂಚ ಪೀಠಾಧೀಶರ ಸಮಾವೇಶ ನಡೆಯಲಿದೆ. ಉಜ್ಜಯಿನಿ, ಕೇದಾರ, ಶ್ರೀಶೈಲ ಮತ್ತು ಕಾಶಿ ಜಗದ್ಗುರುಗಳವರಿಗೆ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪನವರು ಜನಗಣತಿ-ಜಾತಿಗಣತಿ ಸಂದಿಗ್ಧ ಪ್ರಸಂಗದಲ್ಲಿ ಪೀಠಗಳು ಒಕ್ಕೂಟ ವ್ಯವಸ್ಥೆಗೆ ಮುಂದಾಗಬೇಕೆಂದು ಅಪೇಕ್ಷೆ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ಮತ್ತು ಪೀಠಾಭಿಮಾನಿಗಳ-ಭಕ್ತರ ಒತ್ತಾಸೆಯ ಮೇರೆಗೆ ಈ ಸಭೆಯನ್ನು ಕರೆಯಲಾಗಿದೆ. ಆಂತರಿಕ ಸಮಸ್ಯೆಗಳಿಗೆ ತಾರ್ಕಿಕವಾಗಿ ಅಂತ್ಯಗೊಳಿಸುವ ವಿಚಾರವನ್ನು ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.