ಪಂಚಮಸಾಲಿ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಅಗತ್ಯ: ವಚನಾನಂದ ಶ್ರೀ

KannadaprabhaNewsNetwork |  
Published : Feb 12, 2024, 01:36 AM IST
10ಕೆಡಿವಿಜಿ16, 17-ದಾವಣಗೆರೆ 34ನೇ ವಾರ್ಡ್ ಸರಸ್ವತಿ ಬಡಾವಣೆಯಲ್ಲಿ ಪಂಚಮಸಾಲಿ ವಾರ್ಡ್ ಘಟಕವನ್ನು ಶ್ರೀ ವಚನಾನಂದ ಸ್ವಾಮೀಜಿ, ಬಿ.ಸಿ.ಉಮಾಪತಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಾಜ ಬಂಧುಗಳು ತಮ್ಮ ಕುಟುಂಬ, ಮನೆಗಳಲ್ಲಿ ಶುಭ ಕಾರ್ಯ ಮಾಡಿದಾಗ ಆಹ್ವಾನ ಪತ್ರಿಕೆಯಲ್ಲಿ ಹರ ಲಾಂಛನ ಕಡ್ಡಾಯವಾಗಿ ಹಾಕಿಸಿ, ಶ್ರೀಮಠವನ್ನು ಆರ್ಥಿಕವಾಗಿ, ಸಶಕ್ತವಾಗಿ ಬೆಳೆಸಬೇಕಾಗಿದೆ. ಈಗ ಶ್ರೀಪೀಠದಲ್ಲಿ 48 ಬಡ ವಿದ್ಯಾರ್ಥಿಗಳು ಆಶ್ರಯ ಪಡೆದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ಸಾವಿರ ಸಂಖ್ಯೆಯನ್ನು ದಾಟಬೇಕೆಂಬುದು ನಮ್ಮ ಕನಸಾಗಿದೆ. ಈ ನಿಟ್ಟಿನಲ್ಲಿ ಭಕ್ತರೂ ಇಂತಹ ಕಾರ್ಯಕ್ಕೆ ಕೈಜೋಡಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರ ಮಠದಲ್ಲಿ ಶಾಂತಿ, ಸಮಾಧಾನ, ಪಂಚ ದಾಸೋಹಗಳು ಎಲ್ಲರಿಗೂ ಸಿಗುವಂತಹ ವಾತಾವರಣ ಕಲ್ಪಿಸಿ ಶ್ರೀಮಠವನ್ನು ಮಾದರಿ ಮಠವಾಗಿಸೋಣ ಎಂದು ಹರಿಹರದ ಪಂಚಮಸಾಲಿ ಮಠದ ಶ್ರೀವಚನಾನಂದ ಸ್ವಾಮೀಜಿ ಹೇಳಿದರು.

ನಗರದ ಸರಸ್ವತಿ ಬಡಾವಣೆಯ ಕೆಎಸ್ಎಸ್ ಕಾಲೇಜಿನಲ್ಲಿ ಪಂಚಮಸಾಲಿ ಸಮಾಜದ 34ನೇ ವಾರ್ಡ್‌ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಪಂಚಮಸಾಲಿ ಸಮಾಜ ಹಾಗೂ ಶ್ರೀಪೀಠದ ಜೊತೆಗೆ ಇರುವವರಿಗೆ ಶ್ರೀಪೀಠದ ಆಶೀರ್ವಾದ ಇದ್ದೇ ಇರುತ್ತದೆ. ಶಿಕ್ಷಣ, ಉದ್ಯೋಗದಲ್ಲಿ ನಮ್ಮ ಮಕ್ಕಳಿಗೂ ಮೀಸಲಾತಿ ಬೇಕೇಬೇಕು. ಮಕ್ಕಳು ಕೂಡ ಹೆಚ್ಚೆಚ್ಚು ಕೌಶಲ್ಯಯುತ ಶಿಕ್ಷಣ ಪಡೆದು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಸಮಾಜ ಬಂಧುಗಳು ತಮ್ಮ ಕುಟುಂಬ, ಮನೆಗಳಲ್ಲಿ ಶುಭ ಕಾರ್ಯ ಮಾಡಿದಾಗ ಆಹ್ವಾನ ಪತ್ರಿಕೆಯಲ್ಲಿ ಹರ ಲಾಂಛನ ಕಡ್ಡಾಯವಾಗಿ ಹಾಕಿಸಿ, ಶ್ರೀಮಠವನ್ನು ಆರ್ಥಿಕವಾಗಿ, ಸಶಕ್ತವಾಗಿ ಬೆಳೆಸಬೇಕಾಗಿದೆ. ಈಗ ಶ್ರೀಪೀಠದಲ್ಲಿ 48 ಬಡ ವಿದ್ಯಾರ್ಥಿಗಳು ಆಶ್ರಯ ಪಡೆದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ಸಾವಿರ ಸಂಖ್ಯೆಯನ್ನು ದಾಟಬೇಕೆಂಬುದು ನಮ್ಮ ಕನಸಾಗಿದೆ. ಈ ನಿಟ್ಟಿನಲ್ಲಿ ಭಕ್ತರೂ ಇಂತಹ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಸಮಾಜದ ಅಧ್ಯಕ್ಷ, ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಸಮಾರಂಭ ಉದ್ಘಾಟಿಸಿ, ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಕೈದಾಳ್ ಶಿವಶಂಕರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರಾದ ದೊಡ್ಡಪ್ಪ, ಕಾಶೀನಾಥ, ವಕೀಲರಾದ ಪ್ರಕಾಶ ಪಾಟೀಲ್‌, ಉಚ್ಚಂಗಿದುರ್ಗ ಬಸವರಾಜ, ಸೋಮಶೇಖರಪ್ಪ, ಶಿವಕುಮಾರ, ಶ್ರೀಧರ್, ಮಲ್ಲಿನಾಥ, ಸುಷ್ಮಾ ಪಾಟೀಲ್‌, ವೀಣಾ ನಟರಾಜ ಬೆಳ್ಳೂಡಿ, ರಶ್ಮಿ ಕುಂಕೋದ್‌, ಹೇಮಾದ್ರಪ್ಪ, ಚಂದ್ರ ಶೇಖರ, ವಾರ್ಡ್ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ತಿಪ್ಪೇರುದ್ರಸ್ವಾಮಿ, ಬಿ.ಟಿ.ಪ್ರಕಾಶ, ಕೆ.ಕೆ.ನಾಗರಾಜ, ಸುರೇಶ, ಚಂದ್ರಶೇಖರ ಎಸ್.ನೂಲಾ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸು ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿದ್ದರಾಮಯ್ಯ
ಅವಕಾಶ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ