- ಪ್ರತಿಭಾ ಪುರಸ್ಕಾರ-ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಹೊನ್ನಾಳಿ ತಾಲೂಕು ವೀರಶೈವ ಪಂಚಮಸಾಲಿ ಸಮಾಜ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದ ಪ್ರತಿಭಾನ್ವಿತ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಸಾಧನೆಗೈಯಲು ಪಂಚಮಸಾಲಿ ಪೀಠದಿಂದ ಈವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಿದೆ. ಸನ್ಮಾನಿತರಾದ ನಿವೃತ್ತ ನೌಕರರು ಸಮುದಾಯದ ಅತ್ಯವಶ್ಯಕ ಕಾರ್ಯ ಮಾಡಲಿ. ಹೊನ್ನಾಳಿಯ ಖ್ಯಾತವೈದ್ಯ ಡಾ.ರಾಜಕುಮಾರ ಅವರು ಪಂಚಮಸಾಲಿ ಪೀಠದ ಆಡಳಿತಾಧಿಕಾರಿಗಳಾದ ನಂತರದಲ್ಲಿ ಅನೇಕ ಸುಧಾರಣೆ ಕಾರ್ಯ ಆಗಿದೆ. ಇಂತಹ ಕೆಲಸಗಳು ತಮ್ಮ ತಂಡದೊಂದಿಗೆ ನಿರಂತರವಾಗಿ ಸಾಗುವಂತಾಗಲಿ ಎಂದರು.ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಒಳ್ಳೆಯ ವಿಚಾರಧಾರೆ ಅಳವಡಿಸಿಕೊಳ್ಳುವ ಮೂಲಕ ಸಮಾಜ ಹಾಗೂ ತಮ್ಮ ಪ್ರಗತಿಗೆ ಕಾರಣವಾಗಬೇಕಿದೆ. ವಿದ್ಯಾರ್ಥಿಗಳ ಬದುಕು ಬಂಗಾರದ ಬದುಕು ಎಂಬುದನ್ನು ಅರಿತು ಧರ್ಮದ ಆಚರಣೆ ಹಾಗೂ ಸಂಸ್ಕಾರ ಅರಿತು ನಡೆಯುವ ಮೂಲಕ ಸಮಾಜದ ಉನ್ನತಿಗೆ ಎಲ್ಲ ಹಂತದಲ್ಲೂ ಕೈ ಜೋಡಿಸುವಂತೆ ತಿಳಿಸಿದರು.
ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಪ್ರಸ್ತುತ ದೇಶದಲ್ಲಿ ಸುಮಾರು 7 ಧರ್ಮಗಳಿವೆ. ವೀರಶೈವ ಲಿಂಗಾಯಿತ ಪಂಚಮಸಾಲಿ ಎಂಟನೇ ಧರ್ಮವಾಗಿ ಹೊರಹೊಮ್ಮಬೇಕಾಗಿದೆ. ಇದಕ್ಕಾಗಿ ಸಮಾಜದವರು ಹೋರಾಟ ಮಾಡಬೇಕಾಗಿದೆ. ಜೊತೆಗೆ ಸರ್ಕಾರ ಪಂಚಮಸಾಲಿ ಸಮುದಾಯವನ್ನು ಒ.ಬಿ.ಸಿ. ವರ್ಗಕ್ಕೆ ಸೇರಿಸಬೇಕಾಗಿದೆ ಎಂದು ಹೇಳಿದರು.
ರಾಜ್ಯ ಪಂಚಮಸಾಲಿ ಸಮಾಜದ ಉಪಾಧ್ಯಕ್ಷ ಪರಮೇಶ್ ಪಟ್ಟಣ ಶೆಟ್ಟಿ, ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎನ್.ಎಸ್.ಕುಮಾರ್ ಮಾತನಾಡಿದರು. ಪಂಚಮಸಾಲಿ ಸಮಾಜ ಗೌರವಾಧ್ಯಕ್ಷ, ಗುರುಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ ಅವರು ನಿವೃತ್ತ ನೌಕರನ್ನು ಸನ್ಮಾನಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾದ ಹರಿಹರದ ಹರ ಪೀಠದ ಧರ್ಮದರ್ಶಿ ಜ್ಯೋತಿಪ್ರಕಾಶ್, ಮಹಿಳಾ ಆಧ್ಯಕ್ಷೆ ಶಿಲ್ಪಾ ರಾಜುಗೌಡ, ಹಾಲೇಶ್ ಕುಂಕೋದ, ಶಿಕ್ಷಕ ಪ್ರಸನ್ನ, ಎಚ್.ಪಿ. ಗಿರೀಶ್, ಶಕುಂತಲಾ ರಾಜ್ ಕುಮಾರ್, ನ್ಯಾಮತಿ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೂಜಾರ್ ಸೇರಿದಂತೆ ಸಮಾಜದ ಹಲವು ಗಣ್ಯರು ಭಾಗವಹಿಸಿದ್ದರು.
- - --2ಎಚ್.ಎಲ್.ಐ1:
ಹೊನ್ನಾಳಿ ತಾಲೂಕುವ ವೀರಶೈವ ಪಂಚಮಸಾಲಿ ಸಮಾಜದಿಂದ ನಡೆದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ವಚನಾನಂದ ಮಹಾಸ್ವಾಮೀಜಿ ಮಾತನಾಡಿದರು.